ಆನೆಗೊಂದಿ ದುರ್ಗಾಬೆಟ್ಟದಲ್ಲಿ ಸಂಭ್ರಮದ ಶರನ್ನವರಾತ್ರಿ ಉತ್ಸವ

By Web Desk  |  First Published Sep 30, 2019, 8:42 AM IST

ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ದುರ್ಗಾದೇವಿ ಬೆಟ್ಟದಲ್ಲಿ ಶರನ್ನವರಾತ್ರೋತ್ಸವಕ್ಕೆ ರಾಜವಂಶಸ್ಥರಿಂದ ಚಾಲನೆ|  ವಿವಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ರಾಜವಂಶಸ್ಥ ಕುಟುಂಬ| ದೇವಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಚಂಡಿಯಾಗ, ಅಲಂಕಾರ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಜರುಗಿದವು| 9 ದಿನಗಳ ಕಾಲ ನಡೆಯುವ ನವರಾತ್ರೋತ್ಸವದಲ್ಲಿ ದಿನನಿತ್ಯ ಸಂಜೆ ದೇವಿ ಪುರಾಣ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ| 


ಗಂಗಾವತಿ(ಸೆ.30): ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ದುರ್ಗಾದೇವಿ ಬೆಟ್ಟದಲ್ಲಿ ಶರನ್ನವರಾತ್ರೋತ್ಸವಕ್ಕೆ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯಲು ಮತ್ತು ಅವರ ಕುಟಂಬದವರು ಚಾಲನೆ ನೀಡಿ, ಬೆಳಗ್ಗೆ ವಿವಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ದೇವಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಚಂಡಿಯಾಗ, ಅಲಂಕಾರ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಜರುಗಿದವು.

9 ದಿನಗಳ ಕಾಲ ನಡೆಯುವ ನವರಾತ್ರೋತ್ಸವದಲ್ಲಿ ದಿನನಿತ್ಯ ಸಂಜೆ ದೇವಿ ಪುರಾಣ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಬ್ರಹ್ಮಾನಂದಸ್ವಾಮಿ, ಮೋಹಿನಿ ದೇವಿ, ಪ್ರದೀಪಕುಮಾರ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Latest Videos

undefined

ಗಂಗಾವತಿ:

ನಗರದ ಶ್ರೀ ಲಕ್ಷ್ಮೀ ವೇಕಂಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡಿತು. ಬೆಳಗ್ಗೆ ವೆಂಕಟೇಶ್ವರಸ್ವಾಮಿಗೆ ಪಂಚಾಮೃತಾಭೀಷಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ದೀಪೋತ್ಸವ ಕಾರ್ಯಕ್ರಮ ಜರುಗಿತು. ಅಲ್ಲದೇ ಧ್ವಜಸ್ತಂಬ ಸ್ಥಾಪನೆ ಮಾಡಲಾಗಿತ್ತು. ನಂತರ ಅನ್ನ ಸಂತರ್ಪಣೆ ಜರುಗಿತು.

ಹೇಮಗುಡ್ಡ:

ತಾಲೂಕಿನ ಪ್ರಸಿದ್ಧ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ದುರ್ಗಾ ಪರಮೇಶ್ವರಿ ದೇವಿಗೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಉತ್ಸವಕ್ಕೆ ಚಾಲನೆ ನೀಡಿದರು. ತಾಲೂಕಿನ ನವಲಿ ಗ್ರಾಮದ ಭೋಗಾಪುರೇಶ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅರ್ಚಕ ಜಯತೀರ್ಥಚಾರ ಪೂಜಾರ್‌ ಅವರು ಭೋಗಾಪುರೇಶಸ್ವಾಮಿಗೆ ಪಂಚಾಮೃತಾಭಿಷೇಕ, ಅಲಂಕಾರ ಮತ್ತು ದೀಪೋತ್ಸವವನ್ನು ನೆರವೇರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಗಂಗಾವತಿ ತಾಲೂಕಿನ ಆನೆಗೊಂದಿಯ ದುರ್ಗಾ ಬೆಟ್ಟದಲ್ಲಿ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯ ದಂಪತಿ ನವರಾತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಭಾಗವಹಿಸಿದ್ದರು.

click me!