Chitradurga: ಅಭಿವೃದ್ಧಿ ನೆಪದಲ್ಲಿ ಕಿರಿದಾದ ರಸ್ತೆ ನಿರ್ಮಾಣ, ಡಿವೈಡರ್‌ನಿಂದ ಹೆಚ್ಚಿದ ಅಪಘಾತ!

By Suvarna News  |  First Published Jan 13, 2023, 9:12 PM IST

ನಗರ ಅಭಿವೃದ್ಧಿ ಆಗಲಿ ಎಂದು ಕೋಟಿಗಟ್ಟಲೇ ಅನುದಾನ ಹಾಕಿ ಕಾಮಗಾರಿ ನಡೆಸ್ತಾರೆ. ಆದ್ರೆ ಚಿತ್ರದುರ್ಗದಲ್ಲಿ ಮಾಡಿರೋ ಕಾಮಗಾರಿಗಳೇ ಜನರ ಪ್ರಾಣ ತೆಗೆಯುತ್ತಿವೆ ಎಂದು ಎಚ್ಚೆತ್ತು ಅಧಿಕಾರಿಗಳು ಡಿವೈಡರ್ ಗಳನ್ನು ಒಡೆಯಲು‌ ಮುಂದಾಗಿದ್ದಾರೆ. 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.13): ನಗರ ಅಭಿವೃದ್ಧಿ ಆಗಲಿ ಎಂದು ಕೋಟಿಗಟ್ಟಲೇ ಅನುದಾನ ಹಾಕಿ ಕಾಮಗಾರಿ ನಡೆಸ್ತಾರೆ. ಆದ್ರೆ ಇಲ್ಲೊಂದು ಪಟ್ಟಣದಲ್ಲಿ ಮಾಡಿರೋ ಕಾಮಗಾರಿಗಳೇ ಜನರ ಪ್ರಾಣ ತೆಗೆಯುತ್ತಿವೆ ಎಂದು ಎಚ್ಚೆತ್ತು ಅಧಿಕಾರಿಗಳು ಡಿವೈಡರ್ ಗಳನ್ನು ಒಡೆಯಲು‌ ಮುಂದಾಗಿದ್ದಾರೆ. ಒಂದೆಡೆ ಬೃಹದಾಕಾರವಾಗಿ ನಿರ್ಮಾಣ ಆಗಿರೋ ಡಿವೈಡರ್ ಗಳು. ಅತ್ತ ಎದರುಗಡೆ ಬರುವ ಯಾವುದೇ ವಾಹನ ಸವಾರರು ಕಾಣದೇ ಅದೆಷ್ಟೋ ಮಂದಿ ನೆಲಕ್ಕುರಿಳಿರೋ ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ. ಆದ್ರೆ ಮತ್ತೊಂದೆಡೆ ಕೋಟಿಗಟ್ಟಲೇ ಅನುದಾನ ಹಾಕಿ ಕಾಮಗಾರಿ ಮಾಡಿರೋ ಡಿವೈಡರ್ ಗಳು ಅವೈಜ್ಞಾನಿಕವಾಗಿವೆ.  ಇನ್ನೊಂದು ಕಡೆ ಜನರ ಓಡಾಟಕ್ಕೆ ಸಮಸ್ಯೆ ಆಗ್ತಿವೆ ಎಂದು  ಡಿವೈಡರ್ ಗಳನ್ನು ಒಡೆಯುತ್ತಿರೋ ಸಿಬ್ಬಂದಿಗಳು.

Latest Videos

undefined

ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ. ಹೌದು ನಗರೋತ್ಥಾನ ಯೋಜನೆಯಡಿ ಕೊಟ್ಟಿಗಟ್ಟಲೇ ಅನುದಾನದಡಿ ನಿರ್ಮಾಣ ಆಗ್ತಿರೋ ಚಿತ್ರದುರ್ಗ ನಗರದ ರಸ್ತೆಗಳು ಹಾಗೂ ಡಿವೈಡರ್ ಗಳ ಬಗ್ಗೆ ಮೊದಲಿನಿಂದಲೂ ಸ್ಥಳೀಯರಿಗೆ ಅಸಮಾಧಾನ ಇದೆ. ಕೆಲವಡೆ ಅಧಿಕಾರಿಗಳು ಅವರ ಮೂಗಿನ ನೇರಕ್ಕೆ ತಕ್ಕಂತೆ ಚಿಕ್ಕ ಅಳತೆಯಲ್ಲಿ ರಸ್ತೆ ನಿರ್ಮಿಸಿದ್ದಾರೆ. ಇನ್ನೂ ಹಲವೆಡೆ ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿರೋ ಡಿವೈಡರ್ ಗಳಂತೂ ಜನರ ಪ್ರಾಣ ತೆಗೆಯಲಿಕ್ಕೆ ಇವೆ ಏನೋ ಎಂಬಂತೆ ಇವೆ. 

ಹಲವು ಸ್ಥಳೀಯ ಹೋರಾಟಗಾರರು ಈ ಕುರಿತು ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ರೆ ಅದೆಂಗೋ ಎಚ್ಚೆತ್ತ ಅಧಿಕಾರಿಗಳೇ ಅವೈಜ್ಞಾನಿಕ ಡಿವೈಡರ್ ಗಳನ್ನು‌ ನೆಲಸಮ ಮಾಡೋದಕ್ಕೆ ಮುಂದಾಗಿರೋದು ಸಂತೋಷದ ಸಂಗತಿ ಆಗಿದೆ ಅಂತಾರೆ ಸ್ಥಳೀಯರು.

ಇನ್ನೂ ಈ ಕುರಿತು ಅಧಿಕಾರಿಗಳನ್ನೇ ವಿಚಾರಿಸಿದ್ರೆ, ನಗರದ‌ಲ್ಲಿ ಅಭಿವೃದ್ಧಿ ಕುರಿತು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಡಿವೈಡರ್ ಗಳನ್ನು ಸ್ವಲ್ಪ ಎತ್ತರಕ್ಕೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ವಾಹನ ಸವಾರರಿಗೆ ಯಾವುದೇ ತೊಂದರೆಗಳು ಆಗಬಾರದು ಎಂಬ ದೃಷ್ಟಿಯಿಂದ ಈ ರೀತಿ ನಡೆಸಲಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಡಿವೈಡರ್ ಎತ್ತರವಾಗಿ ಇರೋದ್ರಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯ ಹೋರಾಟಗಾರರು ತಿಳಿಸಿದ್ರು.

ಬೆಂಗಳೂರು: ಮೆಟ್ರೋದ ಮತ್ತೊಂದು ಭಾರೀ ಅವಾಂತರ..!

ಇದರ ಬಗ್ಗೆ ಗಮನ ಹರಿಸಿ ಪರಿಶೀಲನೆ ನಡೆಸಿ ಅಪಘಾತ ವಲಯಗಳನ್ನು ಗುರುತಿಸಿ ಅಲ್ಲಿಯ ಡಿವೈಡರ್ ಗಳನ್ನು ನೆಲಸಮ ಮಾಡಲಾಗ್ತಿದೆ. ವಾಹನ ಸವಾರರಿಗೆ ಯಾವುದೇ ತೊಂದರೆ ಆಗಬಾರದು ಎಂದು ಈ ಕಾರ್ಯ‌ ಆಗ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವ ಕೆಲಸ ನಮ್ಮಿಂದ ಆಗ್ತದೆ ಎಂದು ತಿಳಿಸಿದರು.

Ramanagara: ನರೇಗಾ ಕಾಮಗಾರಿಗೆ ಮೇಘಾಲಯ ಟೀಂ ಮೆಚ್ಚುಗೆ

ಇಷ್ಟು ದಿನ ಅಭಿವೃದ್ಧಿ ಆಗಿಲ್ಲ ಎಂದು ಜನ ಜಪ ಮಾಡ್ತಿದ್ರು. ಆದ್ರೆ ಅಧಿಕಾರಿಗಳು ಅಭಿವೃದ್ಧಿ ಹೆಸರಲ್ಲಿ  ಹಣ ಗುಳುಂ ಮಾಡೋದ್ರಲ್ಲಿ ಬ್ಯುಸಿ ಆಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಡಿವೈಡರ್ ಮಾಡೋದಕ್ಕೂ ದುಡ್ಡು, ಅದನ್ನು ಹೊಡೆಯೋದಕ್ಕೂ ದುಡ್ಡು ಎಂದು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕ್ತಿದ್ದಾರೆ.

click me!