ನರೇಗಾ ಯೋಜನೆಯ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ನಡೆದ ಘಟನೆ. ಗಣಿಕೊಪ್ಪ ಗ್ರಾಮದ ಮಲ್ಲಪ್ಪ ಕರಲೆಪ್ಪಗೋಳ ಮೃತ ಕೂಲಿ ಕಾರ್ಮಿಕ.
ಬೈಲಹೊಂಗಲ(ಜೂ.24): ನರೇಗಾ ಯೋಜನೆಯ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ. ಗಣಿಕೊಪ್ಪ ಗ್ರಾಮದ ಮಲ್ಲಪ್ಪ ಕರಲೆಪ್ಪಗೋಳ (55) ಮೃತ ಕೂಲಿ ಕಾರ್ಮಿಕ.
ಗಣಿಕೊಪ್ಪ ಗ್ರಾಮದಲ್ಲಿ ನರೇಗಾ ಅಡಿಯಲ್ಲಿ ಕೈಗೆತ್ತಿಕೊಂಡಿದ್ದ ಹಳ್ಳ ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದರು. ಈ ವೇಳೆ ಮಲ್ಲಪ್ಪನ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳದಲ್ಲಿದ ಇನ್ನಿತರ ಕೂಲಿ ಕಾರ್ಮಿಕರು ಈತನನ್ನು ಸಮೀಪದ ಹೀರೆಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ಮಾರ್ಗಮಧ್ಯ ಕೊನೆಯುಸಿರೆಳೆದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಮರಿಕಟ್ಟಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ಸಾಂತ್ವನ ಹೇಳಿದರು. ಅಲ್ಲದೇ ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆಯ ಪೊಲೀಸ್‌ರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಂದೇ ಭಾರತ ರೈಲು ಸೇವೆ ಬೆಳಗಾವಿಗೆ ವಿಸ್ತರಣೆಗೆ ತಾಂತ್ರಿಕ ಸಮಸ್ಯೆ: ಕಡಾಡಿ
ಕೂಲಿ ಕಾರ್ಮಿಕನಿಗೆ ಏಕಾ ಏಕಿ ಬಿಪಿ ಕಡಿಮೆಯಾಗಿ ಕುಸಿದು ಬಿದ್ದ ಪರಿಣಾಮ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಧ್ಯ ಸಾವನ್ನಪ್ಪಿದ್ದಾನೆ. ಈ ಕುರಿತು ತಕ್ಷಣ ಸ್ಥಳಕ್ಕೆ ಭೇಟಿ ನೀಡಲಾಯಿತು ಅಂತ ಸಹಾಯಕ ನಿರ್ದೇಶಕರು ನರೇಗಾ ವಿಜಯಕುಮಾರ ಪಾಟೀಲ ತಿಳಿಸಿದ್ದಾರೆ.