' ನಾರಾಯಣಸ್ವಾಮಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ'

By Kannadaprabha News  |  First Published Apr 4, 2023, 6:54 AM IST

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಲೆಂದೇ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಜಿ.ವಿ. ಸೀತಾರಾಮ್‌ ತಿರುಗೇಟು ನೀಡಿದರು.


  ಮೈಸೂರು   ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಲೆಂದೇ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಜಿ.ವಿ. ಸೀತಾರಾಮ್‌ ತಿರುಗೇಟು ನೀಡಿದರು.

ದಲಿತರಿಗೆ ಅತ್ಯಂತ ಹೆಚ್ಚು ಹಣ ನೀಡಿರುವುದುಸರ್ಕಾರ ಎಂದು ಪದೇ ಪದೇ ನಾರಾಯಣಸ್ವಾಮಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Latest Videos

undefined

ಕಾಂಗ್ರೆಸ್‌ ಗೆದ್ದರೂ ಹೈಕಮಾಂಡ್‌ ಡಿಕೆಶಿಯನ್ನು ಸಿಎಂ ಮಾಡಲ್ಲ: ಸಿದ್ದರಾಮಯ್ಯ

ರಾಜ್ಯ ಬಜೆಟ್‌ನಲ್ಲಿ ಶೇ.24.1 ರಷ್ಟುಭಾಗವನ್ನು ಮೀಸಲಿಡುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್‌ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ 2008 ರಿಂದ 2013 ರವರೆಗೆ ಖರ್ಚು ಮಾಡಿದ್ದು ಕೇವಲ . 22261 ಕೋಟಿ, ಆದರೆ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 2013 ರಿಂದ 2018 ರವರೆಗೆ ಸುಮಾರು . 88395 ಕೋಟಿ ಖರ್ಚು ಮಾಡಲಾಗಿದೆ. ತಮ್ಮ ಸರ್ಕಾರ ಎರಡು ಲಕ್ಷ ಕೋಟಿ ಬಜೆಟ್‌ ಇದ್ದಾಗ ಸುಮಾರು . 30 ಸಾವಿರ ಕೋಟಿಯನ್ನು ಇದಕ್ಕಾಗಿ ಮೀಸಲಿಟ್ಟಿತ್ತು. ಆದರೆ, 2019 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮೂರು ಲಕ್ಷ ಕೋಟಿ ಬಜೆಟ್‌ ಇದ್ದರೂ ಕೇವಲ . 30000 ಕೋಟಿ ಮೀಸಲಿಟ್ಟಿದ್ದು, ಬಿಜೆಪಿ ದಲಿತ ವಿರೋಧಿಯಲ್ಲವೇ ಎಂದು ಅವರು ಪ್ರಶ್ನಿಸಿದರು.

ಸಂವಿಧಾನವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಬದಲಾಯಿಸುವುದಾಗಿ ಹೇಳಿದಾಗ ಏಕೆ ಸುಮ್ಮನಿದ್ದರು? ಈಗಿನ ಸರ್ಕಾರದ ಮೀಸಲಾತಿ ನೀತಿಯಿಂದಾಗಿ ಅಣ್ಣ ತಮ್ಮಂದಿರಾಗಿ ಬದುಕುತ್ತಿರುವ ಮೀಸಲಾತಿ ಹೊಂದಿರುವವರು ಒಬ್ಬರನ್ನು ಕಂಡರೆ, ಇನ್ನೊಬ್ಬರಿಗೆ ಆಗದೇ ಇರುವ ರೀತಿಯಲ್ಲಿ ಜಗಳ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದರು.

ಈಗಲಾರದೂ ಮೀಸಲಾತಿ ಬಗ್ಗೆ ಚರ್ಚೆ ಆಗಲಿ. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಮೀಸಲಾತಿ ಸಂರಕ್ಷಣಾ ವೇದಿಕೆ ವತಿಯಿಂದ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್‌ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಮುಖಂಡರಾದ ಕೋಟೆಹುಂಡಿ ಮಹದೇವು, ಬಸವರಾಜನಾಯ್‌್ಕ, ಪರಮೇಶ್‌, ಬಸವರಾಜು ಇದ್ದರು.

ಎರಡು ಕಡೆ ಸ್ಪರ್ಧೆ ಮಾಡುವ ಅನಿವಾರ್ಯತೆ ಇಲ್ಲ

ತುಮಕೂರು (ಏ.03): ಎರಡು ಕಡೆ ಸ್ಪರ್ಧೆ ಮಾಡ್ತಿನಿ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಆದರೆ ನಾಳೆ ನಮ್ಮಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಬಗ್ಗೆ ತಿರ್ಮಾನ ಆಗುತ್ತೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಟಿಕೆಟ್ ಕೋಡೋದರಲ್ಲಿ ಈ ಕಮಿಟಿಯೆ ಫೈನಲ್ ಆಗಲಿದೆ. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಪರ್ಮಿಷನ್ ಕೊಟ್ರೆ ಎರಡು ಕಡೆ ಸ್ಪರ್ಧೆ ಮಾಡ್ತಾರೆ. ಆ ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗೆ ಯಾರಿಗೂ ಬಂದಿಲ್ಲ ಎಂದರು. 

ಎರಡು ಕಡೆ ಸ್ಪರ್ಧೆ ಮಾಡ್ಬೇಕು ಎಂಬ ಸನ್ನಿವೇಶ ನನಗಾಗಲಿ ಡಿಕೆ ಶಿವಕುಮಾರ್‌ಗೆ ಆಗಲಿ ಬಂದಿಲ್ಲ. ಹಾಗಾಗಿ ನಾವು ಎರಡು ಕಡೆ ಟಿಕೆಟ್ ಕೊಡಿ ಅಂತ ಕೇಳಿಕೊಂಡಿಲ್ಲ. ಅವರು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದೋರು ಎಂದರು. ರಾಜ್ಯ ನಾಯಕ ಅವರಿಗೆ ಯಾವುದೇ ರೀತಿ ತೊಂದರೆ ಆಗ್ಬಾರದು. ಜನರು ಕೂಡಾ ನೀವು ಬಂದು ಸ್ಪರ್ಧೆ ಮಾಡಿ ಅಂತ ಕೇಳ್ಕೊಂತ್ತಿದ್ದಾರೆ. ಸಿದ್ದರಾಮಯ್ಯ ಕೂಡಾ ಕೋಲಾರದ ಜನರ ಜೊತೆ ಕಮಿಟ್ಮೆಂಟ್ ಮಾಡಿಕೊಂಡು ಬಂದಿದ್ರು ಎಂದರು. ಹಾಗಾಗಿ ಎರಡು ಸ್ಪರ್ಧೆ ಮಾಡುವ ಸನ್ನಿವೇಶ ಎದುರಾಗಿದೆ. ಇಲ್ಲದಿದ್ದರೆ ಅವರಿಗೂ ಕೂಡಾ ಎರಡು ಕಡೆ ಸ್ಪರ್ಧೆ ಮಾಡೋ ಅಗತ್ಯತೆ ಇರಲಿಲ್ಲ. 

Chikkaballapur: ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು

ಅವರು ವರುಣಾದಲ್ಲಿ ನಿಂತ್ರು ಗೆಲ್ತಾರೆ. ಎಲ್ಲೆ ನಿಂತ್ರು ಗೆಲ್ತಾರೆ ಎಂದರು. ಅವರಿಗೆ ಸೋಲು ಭೀತಿ ಕಂಡ್ರೆ. ನಾವೆಲ್ಲಾ ಹೆದರಿಕೊಳ್ಳಬೇಕಾಗುತ್ತೆ. ಸೋಲುವ ಭೀತಿಯಿಂದ ಅಲ್ಲಾ ಜನರ ಅಪೇಕ್ಷೆ ಮೇರೆಗೆ ನಿಲ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ಸುತ್ತುಮುತ್ತಲಿನ ಕ್ಷೇತ್ರಗಳಿಗೂ ಅನುಕೂಲ ಆಗುತ್ತೆ ಎಂದರು. ಸಿಎಂ‌ ರೇಸ್‌ನಲ್ಲಿರುವರಿಗೆ ಸ್ವಪಕ್ಷಿಯರಿಂದಲೇ  ಅಡ್ಡಗಾಲು ಹಾಕುತ್ತಿರುವ ಬಗ್ಗೆ  ಆ ರೀತಿಯಾಗಿ ನನಗೆಲ್ಲು ಕಾಣ್ತಿಲ್ಲ. ಇದೆಲ್ಲಾ ಕ್ರಿಯೆಟೆಡ್, ಒಂದೊಂದು ಸಲ ನಾವೆಲ್ಲಾ ಸೇರಿ ಕ್ರಿಯೆಟ್ ಮಾಡ್ಕೊಂಡು ಬಿಡ್ತಿವಿ ಎಂದರು. 

ಸಾಗರ, ಸೊರಬ ಕ್ಷೇತ್ರ​ ಅಭ್ಯ​ರ್ಥಿ​ಗಳ ಕ್ಷೇತ್ರ ಬದ​ಲಾ​ವಣೆ?: ಕುಮಾರ್‌ ಬಂಗಾ​ರಪ್ಪ ವಿರುದ್ಧ ತೊಡೆ ತಟ್ಟಿ​ರುವ ಬಿಜೆಪಿ ಮುಖಂಡರು

click me!