ನಮ್ಮ ಮೆಟ್ರೋದ ಹಳದಿ ಮಾರ್ಗದ ರೈಲು ನಿಗದಿತ ಗುರಿಯಂತೆ ಮಾರ್ಚ್‌ನಲ್ಲಿ ವಾಣಿಜ್ಯ ಸಂಚಾರ ಆರಂಭಿಸುವುದು ಬಹುತೇಕ ಅನುಮಾನವಾಗಿದೆ.
ಬೆಂಗಳೂರು (ಡಿ.16): ನಮ್ಮ ಮೆಟ್ರೋದ ಹಳದಿ ಮಾರ್ಗದ ರೈಲು ನಿಗದಿತ ಗುರಿಯಂತೆ ಮಾರ್ಚ್‌ನಲ್ಲಿ ವಾಣಿಜ್ಯ ಸಂಚಾರ ಆರಂಭಿಸುವುದು ಬಹುತೇಕ ಅನುಮಾನವಾಗಿದೆ. ಮೂಲ ಮಾದರಿ ರೈಲು ಚೈನಾದಿಂದ ಆಗಮಿಸಿದರೂ ಕನಿಷ್ಠ ಮೂರು ತಿಂಗಳ ಪ್ರಾಯೋಗಿಕ ಸಂಚಾರ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಪಾಸಣೆ ಸೇರಿ ಹಲವು ಪ್ರಕ್ರಿಯೆ ಆಗಬೇಕಿರುವ ಕಾರಣ ಈ ಮಾರ್ಗದಲ್ಲಿ ರೈಲು ಓಡಾಡುವುದು ವಿಳಂಬವಾಗಲಿದೆ.
ಆರಂಭಿಕ ಯೋಜನೆ ಪ್ರಕಾರ ಸಾಗಿದ್ದರೆ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ 19.5 ಕಿ.ಮೀ. ಉದ್ದದ ಮೆಟ್ರೋ ಮಾರ್ಗದ ಕಾಮಗಾರಿ ಈಗಾಗಲೇ ಮುಗಿದಿರಬೇಕಿತ್ತು. ಆದರೆ, ಮೇಲಿಂದ ಮೇಲೆ ಡೆಡ್‌ಲೈನ್ ಮೀರಿರುವ ಯೋಜನೆ ಈ ಹಿಂದೆ ನಿಗಿದಿಸಿದಂತೆ 2024ರ ಮಾರ್ಚ್‌ನಲ್ಲೂ ಪೂರ್ಣಗೊಂಡು ಜನಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ತೀರಾ ಕಡಿಮೆಯಾಗಿದೆ.
undefined
ಜೊತೆಯಾಗಿ ಕಾಣಿಸಿಕೊಂಡು ವಿಚ್ಚೇದನ ಸುದ್ದಿಗೆ ಅಂತ್ಯ ಹಾಡಿದ ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್
ಈ ಮಾರ್ಗದ ಸಿವಿಲ್ ಕಾಮಗಾರಿಗಳು ಶೇ.99.7ರಷ್ಟು ಮುಗಿದಿದ್ದು, ರೈಲುಗಳ ಆಗಮನ ಬಾಕಿ ಇದೆ. ಹೊಸ ಹಳದಿ ಮಾರ್ಗ ಸೇರಿದಂತೆ ಈಗಿನ ಹಸಿರು, ನೇರಳೆ ಮಾರ್ಗಕ್ಕೆ ಚೀನಾದ ಸಿಆರ್‌ಆರ್‌ಸಿ ಕಂಪನಿಯಿಂದ ಒಟ್ಟು 216 ಬೋಗಿಗಳನ್ನು (36 ರೈಲು) ಪೂರೈಕೆ ಮಾಡಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ ಒಪ್ಪಂದ ಮಾಡಿಕೊಂಡಿದೆ. ಇವುಗಳ ಪೈಕಿ ಎರಡು ಮೂಲ ಮಾದರಿಯ ರೈಲನ್ನು ಕಂಪನಿ ನೇರವಾಗಿ ಪೂರೈಸುತ್ತಿದ್ದು, ಉಳಿದವನ್ನು ಕೊಲ್ಕತ್ತಾದ ತೀತಾಘರ್ ವ್ಯಾಗನ್ ರೈಲ್ವೆ ಕಂಪನಿ ರೂಪಿಸಿಕೊಡಬೇಕು.
ಚೀನಾದ ಸಿಆರ್‌ಆರ್‌ಸಿ ಕಂಪನಿಯ ಅಧಿಕಾರಿಗಳಿಗೆ ಕಳೆದ ವಾರವಷ್ಟೇ ವೀಸಾ ದೊರೆತಿದ್ದು, ಅವರು ತೀತಾಘರ್‌ಗೆ ಆಗಮಿಸಿ ರೈಲಿನ ಪೂರ್ಣ ಜೋಡಣೆ, ವಿನ್ಯಾಸದ ಕುರಿತು ತರಬೇತಿ ನೀಡಲಿದ್ದಾರೆ. ಎರಡು ರೈಲುಗಳು ತಯಾರಾದ ಬಳಿಕವೇ ಬೆಂಗಳೂರಿಗೆ ಬರಲಿದೆ. ಆ ನಂತರವಷ್ಟೇ ಪ್ರಾಯೋಗಿಕ ಸಂಚಾರ ನಡೆಯಬೇಕು. ಅಲ್ಲಿವರೆಗೆ ಲೋಕಸಭೆ ಚುನಾವಣೆ ಎದುರಾಗಲಿರುವ ಕಾರಣ ಏಪ್ರಿಲ್-ಮೇ ಬಳಿಕವಷ್ಟೇ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ನಿರೀಕ್ಷಿಸಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗ ಸುರಂಗ ಕೊರೆವ ಕೆಲಸ ಪೂರ್ಣ, ಎಷ್ಟು ನಿಲ್ದಾಣಗಳಿರಲಿದೆ?
ಮೆಟ್ರೋ ಸಹಾಯವಾಣಿ:
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮ ಪ್ರಯಾಣಿಕರಿಗೆ ಸಹಾಯ ಮಾಡಲು ನಮ್ಮ ಮೆಟ್ರೋ ಸಿದ್ಧವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಭದ್ರತಾ ಸಿಬ್ಬಂದಿಯು ಸದಾ ಜಾಗರೂಕರಾಗಿದ್ದು, ತುರ್ತು ಸಂದರ್ಭದಲ್ಲಿ ಯಾವುದೇ ಸಹಾಯಕ್ಕಾಗಿ ಸಿದ್ಧರಿರುತ್ತಾರೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೇಂದ್ರದ ದೂರವಾಣಿ ಸಂಖ್ಯೆ 080 2519 1208 ಮತ್ತು 080 2216 2258 / 2208 ಮತ್ತು ಟೋಲ್ ಫ್ರೀ ಸಹಾಯವಾಣಿ 1800-425-12345 ಗೆ ಸಂಪರ್ಕಿಸಬಹುದು.
ಹೆಚ್ಚುವರಿಯಾಗಿ, ತುರ್ತು ಸಮಯದಲ್ಲಿ ಪ್ರಯಾಣಿಕರು ಸಹಾಯ ಪಡೆಯಲು ಎಲ್ಲಾ ಮೆಟ್ರೋ ಬೋಗಿಯಲ್ಲಿ (ಪ್ರತಿ ಬೋಗಿಯಲ್ಲಿ 4) ಅಳವಡಿಸಿರುವ ತುರ್ತು ಎಚ್ಚರಿಕೆ ಗಂಟೆ ವ್ಯವಸ್ಥೆಯನ್ನು ಬಳಸಿ, ರೈಲು ನಿರ್ವಾಹಕರೊಂದಿಗೆ ಸಂವಹನ ನಡೆಸಬಹುದು. ಇದರಿಂದಾಗಿ ಸಮೀಪಿಸುತ್ತಿರುವ ಅಥವಾ ಮುಂದಿನ ನಿಲ್ದಾಣದಲ್ಲಿ ಸಹಾಯ ಒದಗಿಸಲು ಅನುಕೂಲವಾಗಲಿದೆ.