ಮೆಟ್ರೋಗೆ ಹೆಸರಿಡುವ ವಿವಾದಕ್ಕೆ ಧ್ವನಿ ಎತ್ತಿದ ಶ್ರೀಮಂತೆ ಕಿರಣ್ ಮಜುಂದಾರ್: ಡಿಕೆಶಿ ನಿರ್ಧಾರಕ್ಕೆ ಕವಿತಾ ರೆಡ್ಡಿ ಅಸಮಾಧಾನ

Published : Sep 01, 2025, 01:38 PM IST
dks kiran mazumdar-shaw kavitha reddy

ಸಾರಾಂಶ

ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಕಾರ್ಪೊರೇಟ್ ಕಂಪನಿಗಳ ಹೆಸರಿಡುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಿರಣ್ ಮಜುಂದಾರ್ ಶಾ ನಡುವೆ ವಾಕ್ಸಮರ ನಡೆಯುತ್ತಿದೆ.

ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಮಾಡಿದ ಒಂದು ಹೇಳಿಕೆ ಇದೀಗ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೆಟ್ರೋ ನಿಲ್ದಾಣಗಳಿಗೆ ಹಣ ಕೊಡುವ ಕಂಪನಿಗಳ ಅಥವಾ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಲು ಸರ್ಕಾರ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಹೊರಬಿದ್ದ ತಕ್ಷಣವೇ, ಸಮಾಜದ ಹಲವಾರು ವಲಯಗಳಿಂದ ಟೀಕೆ, ವಿರೋಧ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ನಾಯಕಿ ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಈ ವಿಷಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೆಟ್ರೋ ಎನ್ನುವುದು ನಮ್ಮ ನಗರದ ಇತಿಹಾಸ, ಸಂಸ್ಕೃತಿ ಮತ್ತು ಜನರ ಕನಸುಗಳ ಪ್ರತಿರೂಪ. ಇಂತಹ ಮಹತ್ವದ ಮೂಲಸೌಕರ್ಯಕ್ಕೆ ಕಂಪನಿಗಳ ಹೆಸರುಗಳನ್ನು ಅಂಟಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಕಿರಣ್ ಮಜುಂದಾರ್-ಶಾ ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡ ಸಂದೇಶದಲ್ಲಿ, “ನಮ್ಮ ಬೆಂಗಳೂರಿಗೆ ಉತ್ತಮ ಪ್ರತಿಭೆ, ಅದ್ಭುತ ಹವಾಮಾನವಿದೆ. ಆದರೆ ಮೂಲಸೌಕರ್ಯ ದುರ್ಬಲವಾಗಿದೆ. ಕಸ, ಭಗ್ನಾವಶೇಷಗಳು ಹಾಗೂ ರಸ್ತೆ ಸಮಸ್ಯೆಗಳನ್ನು ಸರಿಪಡಿಸಿದರೆ, ಈ ನಗರವು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾಗಲು ಸಾಧ್ಯ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದನ್ನು ಸಾಧಿಸಲು ದೊಡ್ಡ ಅವಕಾಶ ಹೊಂದಿದೆ. ಇದಕ್ಕಾಗಿ ಸಾಮೂಹಿಕ ಇಚ್ಛಾಶಕ್ತಿಯನ್ನು ಬಳಸೋಣ ಎಂದಿದ್ದಾರೆ.

ಇದೇ ವಿಷಯದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಹಳೆಯ ಟ್ವಿಟ್ಟರ್) ಚರ್ಚೆ ತೀವ್ರಗೊಂಡಿದ್ದು, ರಾಜಕೀಯ ಕಾರ್ಯಕರ್ತೆಯಾದ ಕವಿತಾ ರೆಡ್ಡಿಯವರು ವಿಡಿಯೋ ಟ್ವೀಟ್ ಮಾಡುತ್ತಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರು ನಗರದ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಅಥವಾ ಯಾವುದೇ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ಸಾಮಾನ್ಯವಾಗಿ ರಾಷ್ಟ್ರಪ್ರೇಮಿಗಳು, ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡುವುದು ರೂಢಿಯಾಗಿದೆ. ಆದರೆ ಈಗ ಮೆಟ್ರೋ ನಿಲ್ದಾಣಗಳಿಗೆ ಕಂಪನಿಗಳ ಹೆಸರನ್ನು ಇಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಆ ಕಂಪನಿಗಳ ಇತಿಹಾಸವೇನು? ಸಮಾಜಕ್ಕೆ ಅವರ ಕೊಡುಗೆ ಏನು? ಎಂಬ ಪ್ರಶ್ನೆಗಳನ್ನು ನಾವು ಕೇಳಲೇಬೇಕಾಗಿದೆ ಎಂದಿದ್ದಾರೆ.

 

 

ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಹಣ ನೀಡುವ ಕಂಪನಿಗಳ ಹೆಸರಿಡುವುದು ನಿರಾಶಾದಾಯಕ. ಬೆಂಗಳೂರು ತನ್ನ ಜನರಿಗೆ ಸೇರಿದ್ದು, ಅದಕ್ಕೆ ಅದ್ಭುತವಾದ ಇತಿಹಾಸವಿದೆ ಮತ್ತು ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಕರ್ನಾಟಕ ಮತ್ತು ಬೆಂಗಳೂರಿನ ಜನರ ಹೆಸರಿಡಬೇಕು. ಮೆಟ್ರೋ ನಿಲ್ದಾಣಗಳಿಗೆ ಹೆಸರಿಸುವಲ್ಲಿ ಡಿಕೆಶಿ ಇತಿಹಾಸ, ಸಂಶೋಧನೆ, ಕಸ್ಟಮ್ಸ್, ಸಂಸ್ಕೃತಿ ಇತ್ಯಾದಿಗಳ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ.

ಈ ವಿಷಯದಲ್ಲಿ ಕಿರಣ್ ಮಜುಂದಾರ್ ಶಾ ಹಾಗೂ ಡಿ.ಕೆ. ಶಿವಕುಮಾರ್ ನಡುವೆ  ಅಸಮಾಧಾನ ತೀವ್ರಗೊಂಡಿದೆ. ಶಿವಕುಮಾರ್ ಅವರು ಮೆಟ್ರೋ ಅಭಿವೃದ್ಧಿಗೆ ಹೆಚ್ಚಿನ ನಿಧಿ ಸಂಗ್ರಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸುತ್ತಿರುವಾಗ, ವಿರೋಧ ವ್ಯಕ್ತಪಡಿಸುವವರು “ನಗರದ ಅಸ್ತಿತ್ವ, ಸಂಸ್ಕೃತಿ ಮತ್ತು ಇತಿಹಾಸವನ್ನು ವ್ಯಾಪಾರದ ಸಾಧನವಾಗಿ ಬಳಸಬಾರದು” ಎಂದು ಒತ್ತಿ ಹೇಳುತ್ತಿದ್ದಾರೆ.

 

 

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್