ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವುದು ಅಪಮಾನ : ಬಿಜೆಪಿ ಮುಖಂಡ

By Kannadaprabha NewsFirst Published Dec 16, 2023, 10:02 AM IST
Highlights

ರಾಜ ಮಹಾರಾಜರು ನೀಡಿದ ಕೊಡುಗೆಯನ್ನು ಸ್ಮರಿಸದೆ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡುವುದು ಅಪಮಾನ ಮಾಡಿದಂತೆ ಎಂದು ಜಿಲ್ಲಾ ಬಿಜೆಪಿ ಸಹ ವಕ್ತಾರ ಡಾ.ಕೆ. ವಸಂತ ಕುಮಾರ್ ಟೀಕಿಸಿದ್ದಾರೆ.

  ಮೈಸೂರು :  ರಾಜ ಮಹಾರಾಜರು ನೀಡಿದ ಕೊಡುಗೆಯನ್ನು ಸ್ಮರಿಸದೆ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡುವುದು ಅಪಮಾನ ಮಾಡಿದಂತೆ ಎಂದು ಜಿಲ್ಲಾ ಬಿಜೆಪಿ ಸಹ ವಕ್ತಾರ ಡಾ.ಕೆ. ವಸಂತ ಕುಮಾರ್ ಟೀಕಿಸಿದ್ದಾರೆ.

ಇಡೀ ವಿಶ್ವದಲ್ಲೇ ಒಂದು ಸಾಂಸ್ಕೃತಿಕ ನಗರಿಯಾಗಿ ಗುರುತಿಸಿಕೊಂಡಿರುವ ರಾಜ, ಮಹಾರಾಜರು ಅನೇಕ ಮಠಮಾನ್ಯಗಳು, ಅನೇಕ ಸಾಹಿತಿಗಳು, ಶಿಕ್ಷಣ ತಜ್ಞರು ಮೈಸೂರಿನ ಬೆಳವಣಿಗೆಗೆ ತಮ್ಮದೇ ಆದ ಕಾಣಿಕೆ ನೀಡುವ ಮೂಲಕ ಇಡೀ ವಿಶ್ವದಲ್ಲಿ ಮೈಸೂರನ್ನು ಗುರುತಿಸುವಂತಾಗಿದೆ. ಹಾಗಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಮೈಸೂರಿಗಾಗಿ ಶ್ರಮಿಸಿದ ಅನೇಕ ದಾರ್ಶನಿಕ ವ್ಯಕ್ತಿಗಳ ಹೆಸರು ನಮ್ಮ ಕಣ್ಣ ಮುಂದೆ ಇರಬೇಕಾದರೆ ಮೈಸೂರಿನ ಅರಸರ ಸಾಮ್ರಾಜ್ಯವನ್ನು ಕಿತ್ತುಕೊಂಡು ಅವರನ್ನೇ ಸೆರಮನೆಗೆ ತಳ್ಳಿ ಇಡೀ ಮೈಸೂರು ಸಾಮ್ರಾಜ್ಯಕ್ಕೆ ಅಪಮಾನ ಮಾಡಿದ್ದಲ್ಲದೆ ಸಹಸ್ರಾರು ಹಿಂದುಗಳನ್ನು ಮುಸಲ್ಮಾನರಾಗಿ ಧರ್ಮಾಂತರ ಮಾಡಿದ ಟಿಪ್ಪು ಸುಲ್ತಾನರ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡಲು ಹೊರಟಿರುವುದು ಇಡೀ ಮೈಸೂರಿಗೆ ಮಾಡಿದ ದೊಡ್ಡ ಅವಮಾನ ಎಂದು ತಿಳಿಸಿದ್ದಾರೆ.

ಹಾಗಾಗಿ ಕಾಂಗ್ರೆಸ್ಸಿನ ಶಾಸಕ ಪ್ರಸಾದ್ ಅಬ್ಬಯ್ಯ ಅವರು ತಮಗೆ ಸಂಬಂಧವಿಲ್ಲದ ಕ್ಷೇತ್ರದ ವಿಚಾರವನ್ನು ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪಿಸಿ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಇಡಬೇಕು ಎಂದು ಆಗ್ರಹಿಸಿರುವುದು ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಂತೆ ಈ ಪ್ರಸ್ತಾಪಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುವುದಲ್ಲದೆ ಯಾವುದೇ ಕಾರಣಕ್ಕೂ ಟಿಪ್ಪು ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಬಿಡುವುದಿಲ್ಲ. ಬದಲಿಗೆ ಈ ಭಾಗದ ರಾಜ ಮಹಾರಾಜರು ಈ ನಾಡಿಗೆ ನೀಡಿರುವ ಅನೇಕ ಕೊಡುಗೆಗಳು ನಮ್ಮ ಕಣ್ಣಮುಂದೆ ಇವೆ. ಮೈಸೂರನ್ನು ಕಟ್ಟಿ ಬೆಳೆಸಿದ ಇಂತಹ ಮಹಾನ್ ನಾಯಕರ ಹೆಸರನ್ನು ನಾಮಕರಣ ಮಾಡಬೇಕೇ ಹೊರತು ಇಡೀ ಸಾಮ್ರಾಜ್ಯವನ್ನು ಹಾಳುಮಾಡಲು ಹೊಂಚು ಹಾಕಿದಂತ ವ್ಯಕ್ತಿಯ ನಾಮಕರಣಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

click me!