ಮಹಾಮಾರಿ ಕೊರೋನಾ ಬಗ್ಗೆ ಭವಿಷ್ಯ ನುಡಿದ ಶಾಂತಲಿಂಗ ಮಹಾಸ್ವಾಮಿ

By Kannadaprabha News  |  First Published Jan 22, 2021, 1:08 PM IST

ಮುಂದಿನ ದಿನಗಳಲ್ಲಿ ಕಣ್ವಕಪ್ಪಿ ಶ್ರೀಗಳು ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠಕ್ಕೆ ಜಗದ್ಗುರುಗಳಾಗುವ ಸಾಧ್ಯತೆ| ಎರಡನೇ ಬಾರಿಗೆ ಆಡಳಿತ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಕೇದಾರ ಪೀಠಕ್ಕೆ ಭೇಟಿ ನೀಡಿ ಕಣ್ವಕಪ್ಪಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡಿದ್ದ ಪ್ರಧಾನಿ ಮೋದಿ| 


ರಾಣಿಬೆನ್ನೂರು(ಜ.22): ಮಾರ್ಚ್‌ ನಂತರ ದೇಶದಲ್ಲಿ ಕೊರೋನಾ ನಿವಾರಣೆಯಾಗಲಿದೆ ಎಂದು ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ಕಣ್ವಕಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಮಹಾಸ್ವಾಮಿಗಳು ನುಡಿದಿದ್ದಾರೆ. 

ಇಲ್ಲಿನ ವಿನಾಯಕ ನಗರದಲ್ಲಿ ಏರ್ಪಡಿಸಲಾಗಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಯೌವ್ವನದಲ್ಲಿ ಸಿರಿವಂತಿಕೆ ಪ್ರಾಪ್ತವಾದಾಗ, ಅಧಿಕಾರ ದೊರೆತಾಗ ಹಾಗೂ ಅಹಂಕಾರ ಬಂದಾಗ ನೀತಿ ಬಿಡುತ್ತಾನೆ. ಸಂಸ್ಕಾರದಿಂದ ನೀತಿ ಪ್ರಾಪ್ತಿಯಾಗುತ್ತದೆ ಹಾಗೂ ಪರೋಪಕಾರ ಗುಣವಿದ್ದಲ್ಲಿ ನೀತಿ ಉಳಿಯುತ್ತದೆ. ಮನುಷ್ಯ ಹುಟ್ಟು- ಸಾವಿನ ನಡುವಿನ ಬದುಕಿನ ಅವಧಿಯಲ್ಲಿ ಧರ್ಮ ಮಾರ್ಗದಲ್ಲಿ ನಡೆಯಬೇಕು. ಜೀವನದಲ್ಲಿ ಮಾಡಿದ ತಪ್ಪುಗಳಿಂದ ಪಾರಾಗಲು ಪುಣ್ಯಕ್ಷೇತ್ರಗಳ ದರ್ಶನ, ದಾನ, ಧರ್ಮಗಳನ್ನು ಮಾಡಬೇಕು. ಪುಣ್ಯದ ಕೆಲಸಗಳು ಮನುಷ್ಯನನ್ನು ಸಂಕಟದಿಂದ ಪಾರು ಮಾಡುತ್ತವೆ. ಸತ್ತ ನಂತರವೂ ಪಾಪ, ಪುಣ್ಯ ಮಾತ್ರ ನಮ್ಮ ಜತೆ ಬರುತ್ತವೆ ಎಂಬುದನ್ನು ತಿಳಿದು ಧರ್ಮಯುಕ್ತವಾದ ಬದುಕು ಬಾಳಬೇಕು ಎಂದು ಹೇಳಿದ್ದಾರೆ. 

Tap to resize

Latest Videos

6 ದಿನದಲ್ಲಿ 10 ಲಕ್ಷ ಜನರಿಗೆ ಲಸಿಕೆ: ಹೊಸ ವಿಶ್ವದಾಖಲೆ ಬರೆದ ಭಾರತ!

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಮುಂದಿನ ದಿನಗಳಲ್ಲಿ ಕಣ್ವಕಪ್ಪಿ ಶ್ರೀಗಳು ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠಕ್ಕೆ ಜಗದ್ಗುರುಗಳಾಗುವ ಸಾಧ್ಯತೆಗಳಿವೆ. ಪ್ರಧಾನಿ ಮೋದಿ 2019ರಲ್ಲಿ ಎರಡನೇ ಬಾರಿಗೆ ಆಡಳಿತ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಕೇದಾರ ಪೀಠಕ್ಕೆ ಭೇಟಿ ನೀಡಿ ಕಣ್ವಕಪ್ಪಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡಿದ್ದರು ಎಂದು ಸ್ಮರಿಸಿದರು.

ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ನಿರ್ದೇಶಕ ಸಂತೋಷಕುಮಾರ ಪಾಟೀಲ, ಅರಣ್ಯ ಕೈಗಾರಿಕೆ ನಿಗಮದ ನಿರ್ದೇಶಕಿ ಭಾರತಿ ಜಂಬಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಎಸ್‌.ಎಸ್‌.ರಾಮಲಿಂಗಣ್ಣನವರ, ಮಲ್ಲಿಕಾರ್ಜುನ ಅಂಗಡಿ, ಮಂಜುಳಾ ಹತ್ತಿ, ಪ್ರಭಾವತಿ ತಿಳವಳ್ಳಿ, ಡಾ.ಗಿರೀಶ ಕೆಂಚಪ್ಪನವರ, ನಾಗರಾಜ ಅಡ್ಮನಿ, ವಸಂತಾ ಹುಲ್ಲತ್ತಿ, ಬಸವರಾಜ ಹುಲ್ಲತ್ತಿ ಮತ್ತಿತರರಿದ್ದರು.
 

click me!