ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ 4 ಸದಸ್ಯರು| ಕೊಪ್ಪಳ ಜಿಲ್ಲೆಯ ಕಬ್ಬರಗಿ ಗ್ರಾಪಂ ಕೆಲವು ಸದಸ್ಯರು| ಕಾರವಾರ ತಾಲೂಕಿನ ಮಲ್ಲಾಪುರ ಸಮೀಪದ ಖಾಸಗಿ ಹೊಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಗ್ರಾಮ ಪಂಚಾಯತ್ ಸದಸ್ಯರು|
ಕಾರವಾರ/ಕೊಪ್ಪಳ(ಜ.22): ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಸಾರ್ಟ್ ಸಂಸ್ಕೃತಿ ಪ್ರಾರಂಭವಾಗಿದೆ. ಕೊಪ್ಪಳ ಜಿಲ್ಲೆಯ ಕಬ್ಬರಗಿ ಗ್ರಾಪಂ ಕೆಲವು ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಮೀಸಲಾತಿ ಪ್ರಕಟಿಸುವ ವೇಳೆ ಕಾರವಾರಕ್ಕೆ ಆಗಮಿಸಿದ್ದಾರೆ.
ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ 4 ಸದಸ್ಯರು ತಮ್ಮ ಬೆಂಬಲಿಗರನ್ನು ತಾಲೂಕಿನ ಗ್ರಾಮೀಣ ಭಾಗಕ್ಕೆ ಕರೆತಂದಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯಲ್ಲಿ ಯಾವ ಮೀಸಲಾತಿ ಬರುತ್ತದೆ ಎನ್ನುವುದನ್ನು ನೋಡಿಕೊಂಡು ಆ ವರ್ಗದ ಆಕ್ಷಾಂಕಿಗೆ ತಮ್ಮ ಬೆಂಬಲ ನೀಡಲಿದ್ದಾರೆ.
'ಯಡಿಯೂರಪ್ಪ ಲಿಂಗಾಯತರ ದೇವರಾಜು ಅರಸು ಆಗಲಿ'
ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳು 4, ಬೆಂಬಲಿತರು 10, ಅವರನ್ನು ನೋಡಿಕೊಳ್ಳ 5 ಜನರು ಆಗಮಿಸಿದ್ದು, ತಾಲೂಕಿನ ಮಲ್ಲಾಪುರ ಸಮೀಪದ ಖಾಸಗಿ ಹೊಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ಕಬ್ಬರಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಮೀಸಲಾತಿ ಪ್ರಕಟವಾಗುವ ಸಾಧ್ಯತೆಯಿದ್ದು, ಬಳಿಕ ಕಾರವಾರದಿಂದ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.