ಹೊಸಪೇಟೆ ನಗರದ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಗೃಹ ಕಚೇರಿಗೆ ಅಗಮಿಸಿದ ನಾಗಸಾಧು| ಈ ಹಿಂದೆ ನಾಗಸಾಧು ಅವರನ್ನ ಭೇಟಿಯಾಗಿದ್ದ ಡಿ.ಕೆ.ಶಿವಕುಮಾರ್| ರಾಜಕೀಯ ಜನರ ಭವಿಷ್ಯ ಹೇಳುವ ನಾಗಸಾಧು|
ವಿಜಯನಗರ(ಫೆ.11): ಸಂಡೂರು ತಾಲೂಕಿನ ಜೋಗದ ಶ್ರೀ ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ಸ್ವಾಮೀಜಿ ಅವರು ಸಚಿವ ಆನಂದ್ ಸಿಂಗ್ ಅವರನ್ನ ಇಂದು(ಗುರುವಾರ) ಭೇಟಿ ಮಾಡಿದ್ದಾರೆ.
ಹೊಸಪೇಟೆ ನಗರದ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಗೃಹ ಕಚೇರಿಗೆ ಅಗಮಿಸಿದ ನಾಗಸಾಧು ಅವರು ಸಚಿವರನ್ನ ಭೇಟಿ ಮಾಡಿದ್ದಾರೆ. ವಿಜಯನಗರ ಜಿಲ್ಲೆ ರಚನೆಯಾದ ಬೆನ್ನಲ್ಲೇ ಸಚಿವ ಆನಂದ ಸಿಂಗ್ ಅವರನ್ನು ನಾಗಸಾಧು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಜಯನಗರ ಸಾಮ್ರಾಜ್ಯ ಸ್ಥಾಪಕರು ಯಾರು? ವಿದ್ಯಾರ್ಥಿಯ ಫನ್ನಿ ಉತ್ತರ ವೈರಲ್
ಈ ಹಿಂದೆ ಡಿ.ಕೆ.ಶಿವಕುಮಾರ್ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಹೊತ್ತಾಗ ಜೋಗದ ಈ ನಾಗಸಾಧು ಅವರನ್ನ ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ನಾಗಸಾಧು ಅವರು ರಾಜಕೀಯ ಜನರ ಭವಿಷ್ಯವನ್ನ ಹೇಳುತ್ತಾರೆ.
ಆದರೆ, ನಾಗಸಾಧು ಅವರ ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಚಿವ ಆನಂದ್ ಸಿಂಗ್ ಅವರಿಗೆ ಆಹ್ವಾನ ನೀಡಲು ಬಂದಿದ್ದರು ಎನ್ನಲಾಗುತ್ತಿದೆ.