JSS ಬೆಳೆಸಿದ ನ. ವಜ್ರಕುಮಾರ ನಿಧನ; ಗಣ್ಯರು ಸಂತಾಪ

Published : Sep 03, 2022, 08:16 AM ISTUpdated : Sep 03, 2022, 08:20 AM IST
JSS ಬೆಳೆಸಿದ ನ. ವಜ್ರಕುಮಾರ ನಿಧನ; ಗಣ್ಯರು ಸಂತಾಪ

ಸಾರಾಂಶ

ಜನತಾ ಶಿಕ್ಷಣ ಸಮಿತಿ (ಜೆಎಸ್ಸೆಸ್‌) ಕಾರ್ಯದರ್ಶಿ, ಎಸ್‌ಡಿಎಂ ಸಂಸ್ಥೆ ಉಪಾಧ್ಯಕ್ಷರೂ ಆಗಿದ್ದ ನ. ವಜ್ರಕುಮಾರ (82) ಶುಕ್ರವಾರ ನಸುಕಿನ ವೇಳೆ ಇಹಲೋಕ ತ್ಯಜಸಿದ್ದಾರೆ.  1973ರಲ್ಲಿ ಧಾರವಾಡಕ್ಕೆ ಆಗಮಿಸಿ ಜೆಎಸ್ಸೆಸ್‌ ಸಂಸ್ಥೆ ಬೆಳೆಸಿದ ವಜ್ರಕುಮಾರ

ಧಾರವಾಡ (ಸೆ.2) : ಇಲ್ಲಿಯ ಜನತಾ ಶಿಕ್ಷಣ ಸಮಿತಿ (ಜೆಎಸ್ಸೆಸ್‌) ಕಾರ್ಯದರ್ಶಿ, ಎಸ್‌ಡಿಎಂ ಸಂಸ್ಥೆ ಉಪಾಧ್ಯಕ್ಷರೂ ಆಗಿದ್ದ ನ. ವಜ್ರಕುಮಾರ (82) ಶುಕ್ರವಾರ ನಸುಕಿನ ವೇಳೆ ಇಹಲೋಕ ತ್ಯಜಸಿದ್ದಾರೆ. ಹಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ನಿಧನ ಹೊಂದಿದರು. ಮೂಲತಃ ಉಡುಪಿ ಜಿಲ್ಲೆಯ ಯಾರ್ಮಾಳದಲ್ಲಿ (1940) ಜನಿಸಿದ ಡಾ. ನ. ವಜ್ರಕುಮಾರ ಪ್ರಾಥಮಿಕ ಶಿಕ್ಷಣವನ್ನು ಉಡುಪಿ ತಾಲೂಕು ಮುಲ್ಕಿಯಲ್ಲಿ, ಪ್ರೌಢ ಶಿಕ್ಷಣವನ್ನು ಕಲ್ಯಾಣಪುರದ ಮಿಲಾಗ್ರಿಸ್‌ ಹೈಸ್ಕೂಲನಲ್ಲಿ ಪೂರೈಸಿದ್ದಾರೆ. ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್‌ ಕಾಲೇಜಿನಲ್ಲಿ ಪದವಿ ಹಾಗೂ ಸೊಲ್ಲಾಪುರದ ದಯಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದ್ದರು. 1962ರಿಂದ 1973ರ ವರೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಉಡುಪಿ ಪೇಜಾವರ ಮಠದ ಸ್ವಾಮೀಜಿ ಅವರು ವಿದ್ಯಾಗಿರಿಯ ಜೆಎಸ್ಸೆಸ್‌ ಕಾಲೇಜನ್ನು ಎಎಸ್‌ಡಿಎಂಗೆ 1973ರಲ್ಲಿ ಹಸ್ತಾಂತರ ಮಾಡಿದಾಗ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸೂಚನೆ ಮೇರೆಗೆ ಧಾರವಾಡಕ್ಕೆ ಆಗಮಿಸಿದರು ಡಾ. ನ. ವಜ್ರಕುಮಾರ.

Suman death news: ಸುಮನ್ ನಿಧನ ಸುದ್ದಿ ಸುಳ್ಳು, ಯಾರೀ ಕೆಲಸ ಮಾಡಿದ್ದು?

ಎಸ್‌ಡಿಎಂ ಹಾಗೂ ಜೆಎಸ್ಸೆಸ್‌ ಸಂಸ್ಥೆಗಳಲ್ಲಿ ರೀಡರ್‌, ಉಪ ಪ್ರಾಚಾರ್ಯ, ಪ್ರಾಚಾರ್ಯ ಹಾಗೂ ನಂತರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಆಧುನಿಕ ಶಿಕ್ಷಣಕ್ಕೆ ತಕ್ಕಂತೆ ಜೆಎಸ್ಸೆಸ್‌ ಸಂಸ್ಥೆಯನ್ನು ಕಟ್ಟಿದ ವಜ್ರಕುಮಾರ ಸಂಸ್ಥೆಯನ್ನು ಧಾರವಾಡದಲ್ಲಿ ದೊಡ್ಡ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಜೆಎಸ್ಸೆಸ್‌ ಮಾತ್ರವಲ್ಲದೇ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿ, ಅಖಿಲ ಭಾರತ ಭಾರತೀಯ ಜೈನ್‌ ಮಿಲನ್‌ ಉಪಾಧ್ಯಕ್ಷರು, ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಸ್ಥಳೀಯ ಅಧ್ಯಕ್ಷರಾಗಿಯೂ ಸದ್ಯ ಕೆಲಸ ಮಾಡುತ್ತಿದ್ದರು. ಅನೇಕ ಸಂಸ್ಥೆಗಳ ಸದಸ್ಯರಾಗಿ ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕವಾಗಿ ಕೊಡುಗೆ ನೀಡಿದ್ದಾರೆ ಡಾ. ನ. ವಜ್ರಕುಮಾರ.

ಪ್ರಶಸ್ತಿಗಳು:

ಮೃತರ ಶೈಕ್ಷಣಿಕ ಸಾಧನೆಗೆ ಕವಿವಿಯಿಂದ ಗೌರವ ಡಾಕ್ಟರೇಟ್‌, ಚಿಲಿಪಿಲಿ ಪ್ರಕಾಶನದಿಂದ ಶಿಕ್ಷಣ ಸಿರಿ ಪ್ರಶಸ್ತಿ, ಮಹಾನಗರ ಪಾಲಿಕೆಯಿಂದ ಧೀಮಂತ ನಾಯಕ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಸುಮಾರು 50 ವರ್ಷಗಳ ಸೇವೆ, ಕಾರ್ಯವೈಖರಿಗಾಗಿ ಜೆಎಸ್ಸೆಸ್‌ ಸಂಸ್ಥೆಯ ಆವರಣದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ವಜ್ರಸ್ಥಂಭ ಸಹ ಸ್ಥಾಪನೆ ಮಾಡಿದ್ದಾರೆ.

ದರ್ಶನ ಪಡೆದ ಗಣ್ಯರು:

ಮೃತ ವಜ್ರಕುಮಾರ ಅವರ ಅಂತಿಮ ದರ್ಶನಕ್ಕೆ ಜೆಎಸ್ಸೆಸ್‌ ಕಾಲೇಜು ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಡಾ. ತಾವರಗೇರಿ, ಶಿವಲೀಲಾ ಕುಲಕರ್ಣಿ, ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ, ಎಸ್‌ಡಿಎಂ ಉಪ ಕುಲಪತಿ ಡಾ. ನಿರಂಜನಕುಮಾರ, ಕಾರ್ಯದರ್ಶಿ ಡಾ. ಜೀವಂಧರ ಕುಮಾರ, ಮಾಜಿ ಸಂಸದ ಐ.ಜಿ. ಸನದಿ, ಶಂಕರ ಹಲಗತ್ತಿ, ದೀಪಕ ಚಿಂಚೋರೆ, ಜೆಎಸ್ಸೆಸ್‌ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹಾಗೂ ಎರಡೂ ಸಂಸ್ಥೆಗಳ ಶಾಲೆ-ಕಾಲೇಜು ನೂರಾರು ಸಿಬ್ಬಂದಿ ಅಂತಿಮ ದರ್ಶನ ಪಡೆದರು. ಮೃತರ ಅಂತಿಮ ಸಂಸ್ಕಾರ ಹುಟ್ಟೂರು ಯರ್ಮಾಳುವಿನಲ್ಲಿ ಸಂಜೆ ವಿಧಿ-ವಿಧಾನ ಪ್ರಕಾರ ನೆರವೇರಿತು. ಮೈಸೂರಿನ ಜೆಎಸ್‌ಎಸ್ ಸಂಸ್ಥೆ ಕಟ್ಟಡ ಉದ್ಘಾಟನೆಗೆ ಬಂದಿದ್ದ ಅಟಲ್‌ಜೀ

ಧಾರವಾಡ ಶಿಕ್ಷಣ ಕಾಶಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಡಾ. ನ. ವಜ್ರಕುಮಾರ ಕೊಡುಗೆಯೂ ಇದೆ. ಕಳೆದ 50 ವರ್ಷಗಳಿಂದ ಧಾರವಾಡಕ್ಕೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನೀಡಿದವರು. ಡಾ. ಡಿ. ವೀರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಜೆಎಸ್‌ಎಸ್‌ ಹಾಗೂ ಎಸ್‌ಡಿಎಂ ಸಂಸ್ಥೆಗಳನ್ನು ಕಟ್ಟಿದÜರು. ಸಾವಿರಾರು ಸಿಬ್ಬಂದಿಗೆ ಆಶ್ರಯದಾತರು. ಜೆಎಸ್ಸೆಸ್‌ ಕೆ.ಜಿ. ಯಿಂದ ಪಿಜಿ, ಪಿಎಚ್‌ಡಿ ವರೆಗೆ ಸಂಸ್ಥೆಗಳನ್ನು ಸ್ಥಾಪಿಸಿ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದು ಸಂಸ್ಥೆಗೆ ತುಂಬಲಾರದ ಹಾನಿಯಾಗಿದೆ.

ಡಾ. ಅಜಿತ ಪ್ರಸಾದ, ಜೆಎಸ್ಸೆಸ್‌ ವಿತ್ತಾಧಿಕಾರಿ

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!