4 ಚಿನ್ನ, 7 ನಗದು ಪಡೆದ ಮಹಿಳಾ ಪೇದೆಗೆ ಪಿಎಸ್‌ಐಯಾಗುವಾಸೆ!

Kannadaprabha News   | Asianet News
Published : Oct 21, 2020, 09:42 AM ISTUpdated : Oct 21, 2020, 10:15 AM IST
4 ಚಿನ್ನ, 7 ನಗದು ಪಡೆದ ಮಹಿಳಾ ಪೇದೆಗೆ ಪಿಎಸ್‌ಐಯಾಗುವಾಸೆ!

ಸಾರಾಂಶ

ಮಹಿಳಾ ಪೊಲೀಸ್ ಪೇದೆಯೋರ್ವರು ನಾಲ್ಕು ಚಿನ್ನದ ಪದಕ ಪಡೆದಿದ್ದು ಇದೀಗ ಪಿಎಸ್‌ಐ ಆಗುವ ಕನಸು ಕಾಣುತ್ತಿದ್ದಾರೆ.

ವರದಿ : ದೇವರಾಜು ಕಪ್ಪಸೋಗೆ

 ಚಾಮರಾಜನಗರ (ಅ.21):  ನಾಲ್ಕು ಚಿನ್ನ, ಏಳು ನಗದು ಬಹುಮಾನ ಪಡೆದರೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆರ್ಥಿಕ ಸಮಸ್ಯೆಎದುರಾಗಿದ್ದರಿಂದ ಪ್ರಥಮ ಯತ್ನದಲ್ಲೇ ಪೊಲೀಸ್‌ ಪೇದೆಯಾಗಿ ಖಾಕಿ ತೊಟ್ಟು, ಈಗ ಪಿಎಸ್‌ಐ ಆಗುವ ಕನಸು ಕಾಣುತ್ತಿದ್ದಾರೆ ಪೊಲೀಸ್‌ ಪೇದೆಯಾಗಿರುವ ಸಾಧಕಿ ಕಾವೇರಿ.

ನಂಜನಗೂಡಿನ ಸರ್ಕಾರಿ ಪದವಿ ಕಾಲೇಜಿನ 2019-20ನೇ ಸಾಲಿನ ವಿದ್ಯಾರ್ಥಿನಿ ಬಿ. ಕಾವೇರಿಗೆ ನೂರಾರು ಕನಸುಗಳಿದ್ದರೂ, ಮುಂದುವರಿಸಲು ಸಾಧ್ಯವಾಗದೇ ಚಾಮರಾಜದಲ್ಲಿ ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿ ತರಬೇತಿ ಪಡೆಯುತ್ತಿದ್ದಾರೆ.

ಅಫಜಲ್ಪುರ: ಚಿಕ್ಕ ವಯಸ್ಸಲ್ಲೇ ಪಿಎಸ್‌ಐ ಆದ ಹಳ್ಳಿ ಪ್ರತಿಭೆ .

ಈಕೆ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಬೆಳ್ಳಶೆಟ್ಟಿಮತ್ತು ಮಲ್ಲಿಗಮ್ಮ ಅವರ ಪುತ್ರಿ. ನಂಜನಗೂಡಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಚ್‌ಇಪಿಯಲ್ಲಿ ಶೇ. 83 ಅಂಕಗಳಿಸುವ ಮೂಲಕ ಮೈಸೂರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಟಾಪರ್‌ ಆಗಿದ್ದಾರೆ.

ತಂದೆ ರೈತರಾಗಿದ್ದು, ಹಣದ ಮುಗ್ಗಟ್ಟಿನ ನಡುವೆ ಆಸ್ಥೆಯಿಟ್ಟು ಓದಿದ ಕಾವೇರಿ ಪದವಿ ಪರೀಕ್ಷೆ ಬಳಿಕ ಕಾನ್ಸ್‌ಟೆಬಲ್‌ ಹುದ್ದೆಗೆ ನೇಮಕವಾಗಿದ್ದಾರೆ. ನಾಲ್ಕು ಚಿನ್ನದಪದಕ ಪಡೆದ ಈ ಸ್ವರ್ಣ ಹುಡುಗಿಗೆ ಎಂಎ ಮಾಡಲು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ನೌಕರಿ ಮಾಡುತ್ತಲೇ ಪಿಎಸ್‌ಐ ಜೊತೆಗೆ ಕೆಪಿಎಸ್ಸಿ ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸುತ್ತಿದ್ದಾರೆ.

ಇನ್ನು, ಕಾವೇರಿ ಚಿನ್ನದ ಪದಕ ಪಡೆದಿರುವುದಕ್ಕೆ ಚಾಮರಾಜನಗರ ಎಸ್ಪಿ ದಿವ್ಯಾ ಸಾರಾ ಥಾಮಸ್‌ ಮತ್ತು ಸಹೋದ್ಯೋಗಿಗಳು ಕೂಡಾ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ವಿದ್ಯೆಗೆ ಹಣ-ಆಸ್ತಿಗಿಂತ ಕಠಿಣ ಪರಿಶ್ರಮ, ಶ್ರದ್ಧೆ ಮುಖ್ಯ ಎಂಬುದಕ್ಕೆ ಚಿನ್ನದ ಹುಡುಗಿ ನಿದರ್ಶನವಾಗಿದ್ದಾರೆ.

ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ಆರ್ಥಿಕ ಸಮಸ್ಯೆ ನಡುವೆಯೂ ಕಷ್ಟಪಟ್ಟು ಓದಿದ್ದರಿಂದ ಪದವಿಯಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಅರ್ಥಶಾಸ್ತ್ರದಲ್ಲಿ ವಿವಿಗೆ ಮೊದಲ ಸ್ಧಾನದೊಂದಿಗೆ ನಾಲ್ಕು ಚಿನ್ನ , ಏಳು ನಗದು ಬಹುಮಾನ ಸಿಕ್ಕಿದೆ. ಮುಂದೆ ಪಿಎಸ್‌ಐಯಾಗುವ ಬಯಕೆ ಇದೆ.

ಬಿ.ಕಾವೇರಿ, ಪೊಲೀಸ್‌ ಪೇದೆ, ಚಾಮರಾಜನಗರ

ಬಿಎ ಅರ್ಥಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಟಾಪರ್‌ ಆಗುವ ಮೂಲಕ ಬಿ. ಕಾವೇರಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಕಾನ್ಸ್‌ಟೇಬಲ್‌ ಹುದ್ದೆಯಲ್ಲೇ ಮುಂದುವರಿಯದೇ ಪಿಎಸ್‌ಐ, ಕೆಎಎಸ್‌ ಪರೀಕ್ಷೆಗಳನ್ನು ಅವರು ತೆಗೆದುಕೊಳ್ಳಬೇಕು. ಅವರಿಗೆ ಉಜ್ವಲ ಭವಿಷ್ಯವಿದೆ.

- ದಿವ್ಯಾ ಸಾರಾ ಥಾಮಸ್‌, ಎಸ್ಸಿ, ಚಾಮರಾಜನಗರ

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!