ಮೈಸೂರು ದಸರಾ ಹಬ್ಬದ ಹೊತ್ತಲ್ಲಿ ತೃತೀಯ ಲಿಂಗಿ ಅನುಮಾನಾಸ್ಪದ ಸಾವು!

Kannadaprabha News   | Kannada Prabha
Published : Oct 08, 2026, 11:37 AM IST
Mysuru transgender Suspicious death

ಸಾರಾಂಶ

ಪಿರಿಯಾಪಟ್ಟಣ ತಾಲೂಕಿನಲ್ಲಿ ತೃತೀಯ ಲಿಂಗಿ ಅಮೂಲ್ಯ (21) ಎಂಬುವವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಕುಟುಂಬಸ್ಥರೊಂದಿಗೆ ಜಗಳವಾಡಿದ್ದ ಈಕೆ, ಮರಕ್ಕೆ ನೇ ಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದು ಕೊ ಲೆ ಎಂದು ಆರೋಪಿಸಿ ಮಂಗಳಮುಖಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿರಿಯಾಪಟ್ಟಣ (ಅ.8): ತೃತೀಯ ಲಿಂಗಿಯಾಗಿ ಜೀವನ ನಡೆಸುತ್ತಿದ್ದ 21 ವರ್ಷದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ತಾಲೂಕಿನ ಬೂದಿತಿಟ್ಟು ಸಮೀಪದ ಕೆ.ಎಸ್.ಆರ್. ನಗರ ನಡೆದಿದೆ. ಮೃತರನ್ನು ಅಮೂಲ್ಯ ಅ. ಸರ್ವನ್ (21) ಎಂದು ಗುರುತಿಸಲಾಗಿದೆ.

ನಾಲ್ಕು ವರ್ಷಗಳ ಹಿಂದೆ ತೃತೀಯ ಲಿಂಗಿಯಾಗಿ ಮನೆ ಬಿಟ್ಟಿದ್ದಳು

ಈಕೆ ನಾಲ್ಕು ವರ್ಷಗಳ ಹಿಂದೆ ಮನೆ ತೊರೆದು ತೃತೀಯ ಲಿಂಗಿಯಾಗಿ ಪರಿವರ್ತನೆಗೊಂಡು ಕೊಡಗು ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ತಿಂಗಳ ಹಿಂದೆ ಮತ್ತೆ ಮನೆಗೆ ವಾಪಸ್ ಬಂದು ಕುಟುಂಬದೊಂದಿಗೆ ವಾಸವಾಗಿದ್ದರು.

ಅ. 4ರ ಸಂಜೆ 6ರ ಸಮಯದಲ್ಲಿ ಮೃತಳ ತಾಯಿ ಶಾಂತಿ ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಹಿಂದಿರುಗುವಾಗ ಅಮೂಲ್ಯಳೊಂದಿಗೆ ಆಕೆಯ ಸಹೋದರ ಸಂತೋಷ್ ಮತ್ತು ಸಹೋದರಿ ಸರಸ್ವತಿ ಜಗಳವಾಡುತ್ತಿದ್ದು, ಕೂಡಲೇ ಶಾಂತಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಸಂಜೆ 6.30ರ ಸಮಯದಲ್ಲಿ ಶಾಂತಿ ಮನೆಯಿಂದ ಹೊರಗಡೆ ಹೋಗಿದ್ದಾಗ ಅಮೂಲ್ಯ ಮನೆ ಬಿಟ್ಟು ತೆರಳಿದ್ದಾಳೆ. ಕುಟುಂಬಸ್ಥರು ರಾತ್ರಿಯಿಡಿ ವಿವಿಧೆಡೆ ಹುಡುಕಾಟ ನಡೆಸಿದರೂ ಅಮೂಲ್ಯಳ ಪತ್ತೆಯಾಗಿರಲಿಲ್ಲ.

ಅ. 5ರ ಬೆಳಗ್ಗೆ 8ರ ಸಮಯದಲ್ಲಿ ಅಮೂಲ್ಯ ಮಹದೇವ ಎಂಬವವರ ಜಮೀನಿನ ತೇವರಿಯಲ್ಲಿದ್ದ ಸಿಲ್ವರ್ ಮರಕ್ಕೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದಾಗಿ ಸಂಬಂಧಿಕರು ಕುಟುಂಬಕ್ಕೆ ತಿಳಿಸಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ಅಮೂಲ್ಯಳ ಕಾಲುಗಳು ನೆಲಕ್ಕೆತಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೃತಳ ತಾಯಿ ಶಾಂತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಅಮೂಲ್ಯಳ ಸಾವಿಗೆ ಕುಟುಂಬಸ್ಥರು ಕಾರಣ?

ಅಮೂಲ್ಯಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವದಾರಕ್ಕೆ ತಂದಿದ್ದು, ಈ ಸಂದರ್ಭದಲ್ಲಿ ಮಂಗಳ ಮುಖಿ ಸಮುದಾಯದವರು ಅಲ್ಲಿಗೆ ಬಂದು ಅಮೂಲ್ಯಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ ಅಮೂಲ್ಯಳನ್ನು ಆಕೆಯ ಸಂಬಂಧಿಕರೇ ಕೊಲೆಗೈದು ನೇಣು ಹಾಕಿದ್ದಾರೆ ಎಂದು ಆರೋಪಿಸಿ, ಕುಟುಂಬದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಸಿಪಿಐಗೆ ಗೋವಿಂದರಾಜು ಘೇರಾವ್‌

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಶವ ಸಾಗಿಸಲು ಬಿಡದೆ ಸಿಪಿಐ ಗೋವಿಂದರಾಜು ಅವರನ್ನು ಘೇರಾವ್ ಮಾಡಿದರು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕೊಲೆ ಎಂದು ಸಾಬೀತಾದಲ್ಲಿ ಪ್ರಕರಣದ ತನಿಖೆ ಕೈಗೊಂಡು ಆರೋಪಿತರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಮಂಗಳಮುಖಿಯರು ಅನುವು ಮಾಡಿಕೊಟ್ಟರು

PREV
Read more Articles on
click me!

Recommended Stories

ಕೋಳಿ ಫಾರಂಗೆ ನುಗ್ಗಿ ಬರೋಬ್ಬರಿ 300 ನಾಟಿ ಕೋಳಿ ತಿಂದು ತೇಗಿದ ಚಿರತೆ! ರಕ್ಷಣೆಗೆ ಬಂದ ರೈತರ ಮೇಲೂ ದಾಳಿ
Bengaluru: ಮೆಟ್ರೋ-ಬಿಎಂಟಿಸಿ ಹೊಸ ಪ್ಲಾನ್; ಕಬ್ಬನ್ ಪಾರ್ಕ್ ಸಮೀಪ 2 ಬಸ್ ನಿಲ್ದಾಣ ಆರಂಭ