ಕಮ್ಯೂನಿಸಂ ಸಿದ್ಧಾಂತದಿಂದ ದೇಶಕ್ಕೆ ದುಷ್ಪರಿಣಾಮ: ಅಡ್ಡಂಡ ಕಾರ್ಯಪ್ಪ

By Kannadaprabha News  |  First Published Feb 20, 2023, 3:00 AM IST

ಎಲ್ಲ ಕಲಾ ಪ್ರಕಾರಗಳಿಗಿಂತ ರಂಗಭೂಮಿ ಶ್ರೇಷ್ಠ. ಇಲ್ಲೇ ಹಲವು ಪ್ರಯೋಗಗಳು ನಡೆಯುತ್ತದೆ. ಸೃಜನಶೀಲತೆ, ವಿಸ್ತಾರತೆ ರಂಗಭೂಮಿಯಲ್ಲಿ ಮಹತ್ವ ಪಡೆದಿದೆ. ಗುಬ್ಬಿ ವೀರಣ್ಣ ಅವರ ಕಾಲದ ರಂಗಭೂಮಿಯೇ ಬೇರೆ, ಆಧುನಿಕ ರಂಗಭೂಮಿಯೇ ಬೇರೆ: ಅಡ್ಡಂಡ ಸಿ. ಕಾರ್ಯಪ್ಪ 


ಮಂಗಳೂರು(ಫೆ.20): ರಂಗಭೂಮಿ ಮೂಲಕ ನಮ್ಮ ನಂಬಿಕೆ, ವಿಚಾರಗಳನ್ನು ವಿರೋಧಿಸಿ ವಿಕೃತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಉಗ್ರಗಾಮಿಗಳು, ನಕ್ಸಲಿಸಂ ಶ್ರೇಷ್ಠ ಎಂಬ ಭಾವನೆ ಮೂಡಿಸುವ ನಾಟಕಗಳು ಪ್ರಯೋಗಗೊಳ್ಳುತ್ತಿವೆ. ಕಮ್ಯೂನಿಸಂ ಥಿಯರಿ ರಂಗಭೂಮಿಯೊಳಗೆ ನವಿರಾಗಿ ನುಸುಳಿದೆ. ಇದು ದೇಶದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

ಭಾರತ್‌ ಫೌಂಡೇಶನ್‌ ವತಿಯಿಂದ ನಗರದ ಟಿಎಂಎ ಪೈ ಸಭಾಭವನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ರಂಗಭೂಮಿ ಪ್ರಯೋಗ ಮತ್ತು ಪ್ರಭಾವ ಎಂಬ ವಿಷಯದ ಕುರಿತು ಶನಿವಾರ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

Tap to resize

Latest Videos

MANGALURU LIT FEST 2023: ಮುಂದಿನ 25 ವರ್ಷ ಅಮೃತ ಕಾಲ; ಭಾರತ ಅತ್ಯುನ್ನತ ಸ್ಥಾನಕ್ಕೆ : ಆರ್‌.ಜಗನ್ನಾಥ್‌

ಎಲ್ಲ ಕಲಾ ಪ್ರಕಾರಗಳಿಗಿಂತ ರಂಗಭೂಮಿ ಶ್ರೇಷ್ಠ. ಇಲ್ಲೇ ಹಲವು ಪ್ರಯೋಗಗಳು ನಡೆಯುತ್ತದೆ. ಸೃಜನಶೀಲತೆ, ವಿಸ್ತಾರತೆ ರಂಗಭೂಮಿಯಲ್ಲಿ ಮಹತ್ವ ಪಡೆದಿದೆ. ಗುಬ್ಬಿ ವೀರಣ್ಣ ಅವರ ಕಾಲದ ರಂಗಭೂಮಿಯೇ ಬೇರೆ, ಆಧುನಿಕ ರಂಗಭೂಮಿಯೇ ಬೇರೆ. ಇಂದು ಎಂಜಿನಿಯರ್‌, ವೈದ್ಯ ವೃತ್ತಿ ವಿದ್ಯಾರ್ಥಿಗಳು ಕೂಡ ರಂಗಭೂಮಿಯ ಸೆಳೆತಕ್ಕೆ ಒಳಗಾಗಿದ್ದಾರೆ. ಬೀದಿ ನಾಟಕಗಳನ್ನು ಮೂರನೇ ರಂಗಭೂಮಿ ಎಂದು ಹೇಳಬಹುದು. ಜನಜಾಗೃತಿಗಾಗಿ ಕಾಲಮಿತಿ ಮೀರಿದ ರಂಗಭೂಮಿ ಇದಾಗಿದೆ ಎಂದರು.

ರಂಗಭೂಮಿ ನಿರ್ದೇಶಕ ಬಾಸುಮ ಕೊಡಗು ಮಾತನಾಡಿ, ಅಧ್ಯಯನಶೀಲತೆಯ ಕೊರತೆಯಿಂದಾಗಿ ರಂಗಭೂಮಿ ಬಡವಾಗುತ್ತಿದೆ. ಯಾವುದೇ ನಾಟಕ ಬರೆಯಲು, ನಟಿಸಲು ಸಂಶೋಧನೆಯ ಅಗತ್ಯ ಇದೆ. ಆಗ ಯಾವುದೇ ಅಪಚಾರ ನಡೆಯುವುದಿಲ್ಲ. ರಂಗಭೂಮಿ ವಿಸ್ತಾರವಾಗಿ ಬೆಳೆಯುತ್ತಿದ್ದು, ಪಾತ್ರಗಳನ್ನು ಅನುಭವಿಸಿ, ಪ್ರದರ್ಶಿಸುವ ಕಲೆಯಾಗಿದೆ ಎಂದು ವಿವರಿಸಿದರು.

click me!