ಮಹಾನ್‌ ಆರ್ಥಿಕತಜ್ಞ ಸಿದ್ದರಾಮಯ್ಯನವರು Bitcoin ಬಗ್ಗೆ ವಿವರಿಸಲಿ : ಪ್ರತಾಪ್‌ ಸಿಂಹ!

By Kannadaprabha News  |  First Published Nov 12, 2021, 1:55 AM IST

*ಸಿದ್ದರಾಮಯ್ಯನವರು ಮಹಾನ್‌ ಆರ್ಥಿಕತಜ್ಞರು
*ತಾವು ಡೀಲ್‌ ಮಾಡಿಕೊಂಡು ಬಿಜೆಪಿ ಮೇಲೆ ಆರೋಪ
*ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆಗೆ ಪ್ರತಾಪ್‌ ಸಿಂಹ ತಿರುಗೇಟು!


ಮೈಸೂರು(ನ.12): ಸಿದ್ದರಾಮಯ್ಯನವರು (Siddaramaiah) ಮಹಾನ್‌ ಆರ್ಥಿಕತಜ್ಞರು. ಬಿಟ್‌ ಕಾಯಿನ್‌ (Bitcoin) ಎಂದರೇನು? ಅದು ಹೇಗೆ ವ್ಯವಹಾರ ಆಗುತ್ತೆ. ಅದನ್ನ ನಮ್ಮಂತವರಿಗೆ ವಿವರಿಸಲಿ, ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗಿದೆ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ತಿರುಗೇಟು ನೀಡಿದರು.  ಗುರುವಾರ (ನ.11) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಿಟ್‌ ಕಾಯಿನ್‌ ಬಗ್ಗೆ ಮಾಹಿತಿ ಇಲ್ಲ, ಹೀಗಾಗಿ ಕೇಳುತ್ತಿದ್ದೇನೆ. ಬೊಮ್ಮಾಯಿ ಅವರ ಯಶಸ್ವಿ ಆಡಳಿತ ಸಹಿಸದೆ ಹೀಗೆ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಟ್‌ ಕಾಯಿನ್‌ ವಿಚಾರದಲ್ಲಿ ಕಾಂಗ್ರೆಸ್‌ ಮಾಧ್ಯಮಗಳ (Media) ಮೂಲಕ ನಿರೀಕ್ಷಣಾ ಜಾಮೀನು ಹಾಕುತ್ತಿದೆ. ಈ ಪ್ರಕರಣದಲ್ಲಿ ಗಂಭೀರವಾಗಿ ತನಿಖೆ ಮಾಡಿದರೆ ಕಾಂಗ್ರೆಸ್‌ನವರೇ ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈಗಾಗಲೇ ಮೊದಲ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್‌ (Congress) ಮುಖಂಡರ ಮಕ್ಕಳ ಹೆಸರೇ ಉಲ್ಲೇಖ ಆಗಿದೆ. ಹೀಗಾಗಿ, ಕಾಂಗ್ರೆಸ್‌ನವರಿಗೆ ಭಯ ಬಂದು ನಿರೀಕ್ಷಣಾ ಜಾಮೀನು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Tap to resize

Latest Videos

undefined

ತಾವು ಡೀಲ್‌ ಮಾಡಿಕೊಂಡು ಬಿಜೆಪಿ ಮೇಲೆ ಆರೋಪ

ರಫೇಲ್‌ ವಿಚಾರದಲ್ಲೂ ಕಾಂಗ್ರೆಸ್‌ನ ಅವ್ವ ಮಗಾ ಹೀಗೆ ಮಾಡಿದರು. ತಾವು ಡೀಲ್‌ ಮಾಡಿಕೊಂಡು ಬಿಜೆಪಿ (BJP) ಮೇಲೆ ಆರೋಪ ಮಾಡುತ್ತಿದ್ದರು. ಈಗ ಅವರ ಡೀಲ್‌ ಬಯಲಾಗಿದೆ. ರಾಜ್ಯದಲ್ಲೂ ಅದೇ ತಂತ್ರವನ್ನ ಕಾಂಗ್ರೆಸ್‌ ಪ್ರಯೋಗಿಸುತ್ತಿದೆ. ಈ ಪ್ರಕರಣವು ಕಾಂಗ್ರೆಸ್‌ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್‌ ಬಿಜೆಪಿ ಮೇಲೆ ಮೊದಲೇ ಆರೋಪ ಮಾಡುತ್ತಿದೆ ಎಂದರು.

ಬಿಟ್‌ ಕಾಯಿನ್‌ ತಪ್ಪಿತಸ್ಥರನ್ನು ಬಿಡಲ್ಲ​: ಬಿ.ವೈ.ರಾಘವೇಂದ್ರ!
 
ಬಿಟ್‌ ಕಾಯಿನ್‌ ವಿಚಾರದಲ್ಲಿ ಪ್ರಿಯಾಂಕ್‌ ಖರ್ಗೆ (Priyank Khrage) ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ ಅವರು, ಸದಾಶಿವನಗರದಲ್ಲಿ ನಾಲ್ಕು ಭವ್ಯ ಬಂಗಲೆ, ಒಂದೇ ನಂಬರ್‌ನ ಕಾರು. ನಾನು ನಿರ್ಗತಿಕ, ಶೋಷಣೆ ಒಳಗಾದವರು ಎಂದು ಹೇಳಿಕೊಳ್ಳುವವರಿಂದ ಹೆಚ್ಚಿನ ಮನ್ನಣೆ ನೀಡುವ ಅಗತ್ಯ ಇಲ್ಲ.ಪ್ರಿಯಾಂಕ್‌ ಖರ್ಗೆ ಅವರಿಗೆ ಮೆಚ್ಯುರಿಟಿ ಇದೆಯೋ ಇಲ್ಲವೋ ಎಂಬುದು ನೀವೇ ತೀರ್ಮಾನ ಮಾಡಿಕೊಳ್ಳಿ ನಾನು ಹೇಳುವುದಿಲ್ಲ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:

ಬೊಮ್ಮಾಯಿ ಅವರು ಒನಕೆ ಓಬವ್ವ ಜಯಂತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ನೀವು ಮಾಡಿದ್ದೇನು? ಓಬವ್ವರಂತ ವೀರ ವನಿತಾ ಮಹಿಳೆಯನ್ನು ಮೋಸದಿಂದ ಕೊಂದ ಹೈದರಾಲಿಯ ಮಗನ ಜಯಂತಿಯನ್ನ ನೀವು ಮಾಡಿದ್ರಿ. ಮೈಸೂರು ಮಹಾರಾಜರಿಗೆ (Mysuru Maharaja) ಮೋಸ ಮಾಡಿದ ಟಿಪ್ಪುವಿನ (Tippu Sultan) ಜಯಂತಿ ನೀವು ಮಾಡಿದಿರಿ. ಮದಕರಿ ನಾಯಕನಿಗೆ ವಿಷ ಹಾಕಿ ಕೊಂದ ಟಿಪ್ಪು ಜಯಂತಿ ಮಾಡಿದ್ದು ನಿಮ್ಮ ಸಾಧನೆ. ನಿಮ್ಮಿಂದ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಪಾಠ ಕಲಿಯಬೇಕಾಗಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯಕ್ಕೆ 3ನೇ ಬಿಜೆಪಿ ಸಿಎಂ ಖಚಿತ: ಪ್ರಿಯಾಂಕ್‌!

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮನ್ನೇ ಸೋಲಿಸಿದವರನ್ನು ನೀವೇ ಮನಸಾರೆ ಹಾಡಿ ಹೊಗಳುವ ಪರಿಸ್ಥಿತಿ ಬಂದಿದೆ. ಬೊಮ್ಮಾಯಿ ಅವರು ನೂರು ದಿನಗಳಲ್ಲಿ ಜನರ ಮನೆ ಮನ ತಲುಪಿದ್ದಾರೆ. ಉಪ ಚುನಾವಣೆಯಲ್ಲಿನ (by-election) ಒಂದು ಸೋಲಿಗೆ ಬೇರೆ ಬೇರೆ ಕಾರಣ ಇರುತ್ತವೆ. ಅದು ರಾಜಕೀಯದ ಏಟು, ಒಳ ಏಟು, ತಂತ್ರ ಎಲ್ಲವು ಇರುತ್ತೆ. ನಂಜನಗೂಡು, ಗುಂಡ್ಲುಪೇಟೆಯಲ್ಲಿ ಗೆದ್ದ ಕಾಂಗ್ರೆಸ್‌, ಮುಂದಿನ ಚುನಾವಣೆಯಲ್ಲಿ ಏನಾಯ್ತು ಏನಾದ್ರಿ ಎಂದು ಅವರು ಪ್ರಶ್ನಿಸಿದರು.

ಬೊಮ್ಮಾಯಿ ಅವರೇ 2023ಕ್ಕೂ ಮುಖ್ಯಮಂತ್ರಿ ಆಗೋದು ಖಚಿತವಾಗಿದೆ ನಿಮಗೆ. ಹೀಗಾಗಿ ಬೊಮ್ಮಾಯಿ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದೀರಿ. ಮೊದಲು ಈ ರೀತಿ ತಂತ್ರಗಾರಿಕೆಯನ್ನ ಮಾಡೋದು ಮೊದಲು ಬಿಡಿ ಎಂದು ಅವರು ಹೇಳಿದರು.

click me!