ಚಾಮರಾಜನಗರ (ಸೆ.12): ದೇವಸ್ಥಾನದಲ್ಲಿದ್ದ ಮೈಸೂರು ಮಹಾರಾಜರ ಫೋಟೋಗಳ ತೆರವು ಮಾಡಿ ಚಾಮರಾಜನಗರ ಜಿಲ್ಲಾಡಳಿತದಿಂದ ಮತ್ತೊಂದು ಎಡವಟ್ಟು ಮಾಡಲಾಗಿದೆ.
undefined
ಬಿಳಿಗಿರಿರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಫೋಟೋಗಳನ್ನು ತೆರವು ಮಾಡಲಾಗಿದೆ.
ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಫೋಟೋಗಳನ್ನು ಅವರು ದೇವಸ್ಥಾನದ ಏಳಿಗೆಗೆ ಕೊಟ್ಟ ಕೊಡುಗೆಯ ನೆನಪಿಗಾಗಿ ಹಾಕಲಾಗಿತ್ತು. ಆದರೀಗ ಅಧಿಕಾರಿ ಆದೇಶದ ಮೇರೆಗೆ ಫೊಟೊಗಳನ್ನು ತೆರವು ಮಾಡಲಾಗಿದೆ.
ಮೈಸೂರು : ಚಾಮುಂಡೇಶ್ವರಿ ಸೇರಿ 93 ದೇವಾಲಯ ನೆಲಸಮಕ್ಕೆ ಸುಪ್ರೀಂ ಆದೇಶ
ಬಿಳಿಗಿರಿ ರಂಗಾನಾಥಸ್ವಾಮಿಗೆ ಚಿನ್ನ ಬೆಳ್ಳಿ ಆಭರಣಗಳನ್ನು ಕೊಡುಗೆಯಾಗಿ ಮಹಾರಾಜರು ನೀಡಿದ್ದರಿಂದ ಹಾಕಿದ್ದ ಮಹಾರಾಜರ ಫೊಟೊಗಳಿಗೆ, ಸತ್ತವರ ಫೋಟೋ ಏಕೆ ಹಾಕಿದ್ದೀರಿ? ತೆಗೆದು ಹಾಕಿ ಎಂದು ಹಿರಿಯ ಅಧಿಕಾರಿ ಸೂಚನೆ ನೀಡಿದ್ದಾರೆ.
ಜೀರ್ಣೋದ್ಧಾರ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೂಚನೆ ನೀಡಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮಹಾರಾಜರ ಫೋಟೋಗಳನ್ನು ತೆರವು ಮಾಡಲಾಗಿದೆ.
ಸದ್ಯ ಅಧಿಕಾರಿ ನೀಡಿದ ಸೂಚನೆ ವಿವಾದಕ್ಕೆ ಕಾರಣವಾಗಿದ್ದು, ಇದು ಮಹಾರಾಜರಿಗೆ ಮಾಡಿದ ಅವಮಾನ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರವು ಮಾಡಿದ ಫೋಟೋಗಳನ್ನು ಕಚೇರಿಯೊಳಗೆ ಇರಿಸಲಾಗಿದೆ.