ದಸರಾ ವೇಳೆ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾ*ರ, ಕೊ*ಲೆ: ಕಾಮುಕನಿಗೆ ಗಲ್ಲು ಶಿಕ್ಷೆ

Published : Oct 17, 2026, 12:28 PM ISTUpdated : Oct 17, 2026, 12:38 PM IST
Mysuru Rape Case

ಸಾರಾಂಶ

ಕಳೆದ ದಸರಾ ಸಮಯದಲ್ಲಿ ಗುಲ್ಬರ್ಗಾದಿಂದ ಬಲೂನ್ ಮಾರಾಟ ಮಾಡಲು ಕುಟುಂಬ ಸಮೇತ ಮೈಸೂರಿಗೆ ಬಂದಿದ್ದ ಬಾಲಕಿಯು, ದಸರಾ ವಸ್ತುಪ್ರದರ್ಶನದ ಬಳಿಯಿದ್ದ ಟೆಂಟ್‌ನಲ್ಲಿ ಮಲಗಿದ್ದಾಗ ಈ ದುರಂತ ಸಂಭವಿಸಿತ್ತು.

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷ ದಸರಾ ಮಹೋತ್ಸವದ ವೇಳೆ ನಡೆದಿದ್ದ 9 ವರ್ಷದ ಬಾಲಕಿಯ ಮೇಲಿನ ಭೀಕರ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿಗೆ ಮೈಸೂರು ಶೀಘ್ರಗತಿ (FTSC 1) ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶರಾದ ಆನಂದ್ ಪಿ. ವಘಾಡೆ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 32 ವರ್ಷದ ಕಾರ್ತಿಕ್ ಎಂಬಾತನಿಗೆ ಈ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಕಳೆದ ದಸರಾ ಸಮಯದಲ್ಲಿ ಗುಲ್ಬರ್ಗಾದಿಂದ ಬಲೂನ್ ಮಾರಾಟ ಮಾಡಲು ಕುಟುಂಬ ಸಮೇತ ಮೈಸೂರಿಗೆ ಬಂದಿದ್ದ ಬಾಲಕಿಯು, ದಸರಾ ವಸ್ತುಪ್ರದರ್ಶನದ ಬಳಿಯಿದ್ದ ಟೆಂಟ್‌ನಲ್ಲಿ ಮಲಗಿದ್ದಾಗ ಈ ದುರಂತ ಸಂಭವಿಸಿತ್ತು.

ಅಪರಾಧಿ ಕಾರ್ತಿಕ್

ರಾತ್ರಿ ವೇಳೆ ಬಾಲಕಿಯನ್ನು ಅಪಹರಿಸಿಕೊಂಡು ಹೋದ ಕಾರ್ತಿಕ್, ಆಕೆಯ ಮೇಲೆ ಅತ್ಯಾ*ಚಾರ ಎಸಗಿ ಭೀಕರವಾಗಿ ಕೊಲೆ ಮಾಡಿದ್ದನು. ರಾಜ್ಯಾದ್ಯಂತ ತೀವ್ರ ಆಕ್ರೋಶ ಮತ್ತು ಸಂಚಲನ ಮೂಡಿಸಿದ್ದ ಈ ಘಟನೆಗೆ ಸಂಬಂಧಿಸಿದಂತೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ ಅಪರಾಧಿಗೆ ಸೂಕ್ತ ಶಿಕ್ಷೆ ಪ್ರಕಟಿಸಿದೆ.

ಯಾರು ಈ ಕಾರ್ತಿಕ್?

ಅಪರಾಧಿ ಕಾರ್ತಿಕ್‌ ಮೈಸೂರಿನ ಸಿದ್ದಲಿಂಗಪುರದ ನಿವಾಸಿಯಾಗಿದ್ದು, ಮೈಸೂರು-ಕೊಳ್ಳೇಗಾಲ ಮಾರ್ಗದ ಬಸ್‌ನಲ್ಲಿ ಕ್ಲೀನರ್​ ಆಗಿ ಕೆಲಸ ಮಾಡಿಕೊಂಡಿದ್ದನು. ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಬಾಲಕಿಯ ಅತ್ಯಾ*ಚಾರ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿರುವ ನ್ಯಾಯಾಲಯದ ತೀರ್ಪಿನ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಈ ಕ್ರೂರ ಘಟನೆಯಿಂದ ಮೈಸೂರು ನಗರವೇ ಎಲ್ಲರ ಮುಂದೆ ತಲೆ ತಗ್ಗಿಸುವಂತಾಗಿತ್ತು ಮತ್ತು ಈ ಪ್ರಕರಣ ಪ್ರತಿಯೊಬ್ಬರಿಗೂ ತೀವ್ರ ನೋವನ್ನು ಉಂಟುಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥನಿಗೆ ಶೀಘ್ರವಾಗಿ ಶಿಕ್ಷೆಯಾಗುವಂತೆ ಸಮರ್ಥವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ ಅವರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಟ್ಟ ನ್ಯಾಯಾಧೀಶರಿಗೆ ಮೈಸೂರಿನ ಸಮಸ್ತ ಜನರ ಪರವಾಗಿ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

PREV
Read more Articles on
click me!

Recommended Stories

Hassan: ಅ.29ರಿಂದ ನ.11ರ ವರೆಗೆ ಹಾಸನಾಂಬೆ ಜಾತ್ರೋತ್ಸವ, ಪೂರ್ವಸಿದ್ಧತೆ ನಡುವೆ ಅಚ್ಚರಿಯ ಬೆಳವಣಿಗೆ!
ಎಐ ಆಧಾರಿತ ಉದ್ಯೋಗ ಕೌಶಲ್ಯ: ಬೆಂಗಳೂರಿನಲ್ಲಿ 'ಪ್ರಾಜೆಕ್ಟ್ ಹೆಲಿಕ್ಸ್' ಅನಾವರಣಗೊಳಿಸಿದ ಕೋರ್ಸೆರಾ, ಐಐಎಂ-ಬಿ ಜೊತೆ ಒಪ್ಪಂದ