Mysuru : ಗ್ರಾಮಸ್ಥರಿಂದ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ

By Kannadaprabha NewsFirst Published Jan 24, 2023, 6:25 AM IST
Highlights

ಜನರು ಒಗ್ಗಟ್ಟಾದರೆ ಗ್ರಾಮದ ಅಭಿವೃದ್ಧಿಯನ್ನು ಸರ್ಕಾರದ ಅನುದಾನಕ್ಕೆ ಪೇಚಾಡದೆ ನಾವೇ ಮಾಡಬಹುದು ಎಂದು ಚಿಕ್ಕ ವಡ್ಡರಗುಡಿ ಗ್ರಾಮಸ್ಥರು ತೋರಿಸುವ ಮೂಲಕ ಗ್ರಾಮದಲ್ಲಿದ್ದ ಸ್ವಾತಂತ್ರ್ಯ ಪೂರ್ವದ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಮಾಡಿ ತೊರಿಸಿದ್ದಾರೆ.

 ಕೆ.ಆರ್‌. ನಗರ :  ಜನರು ಒಗ್ಗಟ್ಟಾದರೆ ಗ್ರಾಮದ ಅಭಿವೃದ್ಧಿಯನ್ನು ಸರ್ಕಾರದ ಅನುದಾನಕ್ಕೆ ಪೇಚಾಡದೆ ನಾವೇ ಮಾಡಬಹುದು ಎಂದು ಚಿಕ್ಕ ವಡ್ಡರಗುಡಿ ಗ್ರಾಮಸ್ಥರು ತೋರಿಸುವ ಮೂಲಕ ಗ್ರಾಮದಲ್ಲಿದ್ದ ಸ್ವಾತಂತ್ರ್ಯ ಪೂರ್ವದ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಮಾಡಿ ತೊರಿಸಿದ್ದಾರೆ.

ಕೆ.ಆರ್‌. ನಗರ ತಾಲೂಕಿನ ಚಿಕ್ಕ ವಡ್ಡರಗುಡಿ ಗ್ರಾಮದಲ್ಲಿ ಸುಮಾರು 76 ವರ್ಷಗಳ ಇತಿಹಾಸ ಇರುವ ಶ್ರೀ ಬಸವೇಶ್ವರ ದೇವಸ್ಥಾನ ಶಿಥಿಲಗೊಂಡು ಪಾಳು ಮನೆಯಂತಾಗಿದ್ದು ಭಕ್ತರಿಗೆ ಅನುಕೂಲಕ್ಕೆ ಬರದಂತಿತ್ತು. ಆದರೂ ಪೂಜೆ ಪುರಸ್ಕಾರಗಳು ದಿನನಿತ್ಯ ನಡೆಯುತ್ತಿದ್ದವು. ಗ್ರಾಮಸ್ಥರು ಒಂದೆಡೆ ಸಭೆ ಸೇರಿ ದೇವಸ್ಥಾನ ಅಭಿವೃದ್ಧಿಗೆ 2019 ರಲ್ಲಿ ಮುಂದಾದರು. ಗ್ರಾಮಸ್ಥರು ಮತ್ತು ಗ್ರಾಮದ ಚುನಾಯಿತಪ್ರತಿನಿಧಿಗಳು, ಉದ್ಯಮಿಗಳು ಸೇರಿ ದೇವಸ್ಥಾನ ನಿರ್ಮಾಣ ಮಾಡೋಣ ಯಾರ ಹತ್ತಿರನು ಹಣ ಕೇಳುವುದು ಬೇಡ ಎಂಬ ತೀರ್ಮಾನ ತೆಗೆದುಕೊಂಡಿದ್ದರು. ಸ್ವತಃ ಅವರೇ ದಾನ ಕೊಡುವ ಹಣ ಮಾತ್ರ ತೆಗೆದುಕೊಳ್ಳಬಹುದು ಎಂದಂತಾಗಿತು.

ಸುಮಾರು 75 ರೂ. ಲಕ್ಷ ರು. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದ್ದು, ಫೆ.3 ರಂದು ಉದ್ಘಾಟನೆಯಾಗಲಿದೆ. ದೇವಸ್ಥಾನ ನಿರ್ಮಾಣಕ್ಕೆ ಅತ್ತ ಗ್ರಾಮಸ್ಥರಿಂದ ಹೆಚ್ಚು ಹಣಕಾಸಿನ ಸಹಕಾರ ಸಿಕ್ಕರೆ ಇತ್ತ ರಾಜಕೀಯ ಚುನಾಯಿತ ಪ್ರತಿನಿಧಿಗಳು ಕೂಡ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಹಾಗಾಗಿ ದೇವಸ್ಥಾನ ಭಕ್ತರ ಕಣ್ಮನ ಸೆಳೆಯುವ ರೀತಿಯಲ್ಲಿ ಕೆತ್ತನೆ ಮತ್ತು ನೂತನ ಕಲ್ಲುಗಳು ಜೊಡಣೆಯಲ್ಲಿ. ಸುಂದರವಾಗಿ ನಿರ್ಮಾಣಗೊಂಡಿದೆ.

ದೇವಸ್ಥಾನ ಹಿನ್ನೆಲೆ:

ಮಂಡ್ಯ ಜಿಲ್ಲೆ ಕೆ.ಆರ್‌. ಪೇಟೆ ತಾಲೂಕು ಸಂಗಾಪುರ ಗ್ರಾಮದ ಬಳಿ ಬೈಲಾಪುರ ಹತ್ತಿರ ಇತಿಹಾಸ ಪೂರ್ವದಲ್ಲಿ ನಿರ್ಮಾಣಗೊಂಡ ಹಳೆ ಕಲ್ಲು ಕಟ್ಟಡದಲ್ಲಿ ಕಂಡು ಬಂದ ಬಸವಣ್ಣನ ಮೂರ್ತಿಯನ್ನು ಚಿಕ್ಕ ವಡ್ಡರ ಗುಡಿ ಗ್ರಾಮದಲ್ಲಿ ಆ ದಿನಗಳ ಹಿಂದೆ ಕರಿ ಕಂಬಳಿಯಲ್ಲಿ ದೇವರನ್ನ ತಂದು ನೆಲೆ ಮಾಡಿ ಸಣ್ಣ ಗುಡಿಯನ್ನು ಕಟ್ಟಿಸಿದರು ಆದರೆ ಅದು ಇತ್ತೀಚಿನ ದಿನಗಳಲ್ಲಿ ಬಸವಣ್ಣನ ಭಕ್ತರು ಹೆಚ್ಚಾಗಿ ಕಷ್ಟಕಾರ್ಯಗಳನ್ನು ನನ್ನ ಬಳಿ ತೋಡಿಕೊಳ್ಳುವಂತಹ ಭಕ್ತಾದಿಗಳು ಹೆಚ್ಚಾಗಿ ಇಷ್ಟಾರ್ಥ ಪೂಜೆ ಸಲ್ಲಿಸಿ ತಮ್ಮ ಕಷ್ಟವನ್ನು ಈಡೇರಿಸಿಕೊಂಡಿದ್ದರು ಹಾಗಾಗಿ ಚಿಕ್ಕವಡ್ಡರಗುಡಿ ಗ್ರಾಮದಲ್ಲಿ ಬಸವಣ್ಣ ದೇವಸ್ಥಾನ ಪ್ರಸಿದ್ಧಿಯಾಗಿತ್ತು.

ಬಸವಣ್ಣನ ಗ್ರಾಮಕ್ಕೆ ತರುವ ಮುಂಚಿತವಾಗಿ ಗ್ರಾಮದಲ್ಲಿ ಕಾಲರಾ, ಮಲೇರಿಯಾ ಸೇರದಂತೆ ಇನ್ನಿತರ ಕಾಯಿಲೆಗಳು ಜಾನುವಾರು ಮತ್ತು ಜನರನ್ನ ಕಾಡುತ್ತಿದ್ದವು. ಗ್ರಾಮದಲ್ಲಿ ಬಸವಣ್ಣನನ್ನ ನೆಲೆ ಮಾಡಿದ ಮೇಲೆ ಕಾಯಿಲೆಗಳಿಂದ ಮುಕ್ತರಾದ ಜನರು ಭಕ್ತಿಯಿಂದ ನಂಬಿಕೊಂಡರು. ಇಷ್ಟಾರ್ಥ ಪೂಜೆ ಸಲ್ಲಿಸಲು ಮುಂದಾದರು. ಆ ಕಾಲದಲ್ಲಿ ಪುಟ್ಟಬುದ್ಧಿ ಎಂಬ ಅರ್ಚಕರು ಈ ದೇವಸ್ಥಾನದ ಹಿನ್ನೆಲೆಯನ್ನ ತಮ್ಮ ಮತ್ತೊಬ್ಬ ಅರ್ಚಕರದ ಶಂಕರ ಅವರಿಗೆ ತಿಳಿಸಿದಂತೆ ಭಕ್ತಿಯಿಂದ ನಂಬಿದವರನ್ನು ಬಸವಣ್ಣ ಶಕ್ತಿಯನ್ನು ನೀಡಿ ಕಾಪಾಡುವ ನಂಬಿಕೆ ಎಂದಿಗೂ ವಡ್ಡರಗುಡಿ ಗ್ರಾಮಸ್ಥರಲ್ಲಿದೆ.

ದೇವಸ್ಥಾನ ನಿರ್ಮಾಣಕ್ಕೆ ಪ್ರಥಮ ಸಭೆ 1990 ರ ಡಿ.25 ರಂದು ನಡೆಯಿತು ಶ್ರೀ ಬಸವೇಶ್ವರ ದೇವಸ್ಥಾನದ ಪರ ಮಾಡುವಾಗ ಜನರು ಊಟಕ್ಕೆ ಕುಳಿತ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿದು ತೊಂದರೆ ಆಗಿತ್ತು.ಆಗ ಪುಟ್ಟಬುದ್ಧಿ ಸ್ವಂತ ಹಣದಲ್ಲಿ ಬಸವಕಲ್ಯಾಣವನ್ನು ನಿರ್ಮಾಣ ಮಾಡಿ ಅನುಕೂಲ ಮಾಡಿಕೊಟ್ಟಿದ್ದರು

ಹಾಸನ - ಮೈಸೂರು ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಚಿಕ್ಕ ವಡ್ಡರ ಗುಡಿ ಗ್ರಾಮದ ರಂಗಸ್ಥಳದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನ ನೊಡಲು ಭಕ್ತರು ಹೆಚ್ಚು ಆಗಮಿಸುತ್ತಿದ್ದು ಫೆ.3 ಶುಕ್ರವಾರ ರಂದು ಲೊಕಾರ್ಪಣೆಗೊಳ್ಳುತ್ತಿದೆ. ಇದರ ಉದ್ಘಾಟನಾ ಸಮಾರಂಭಕ್ಕೆ ದೇವಸ್ಥಾನಕ್ಕೆ ದಾನ ನೀಡಿದ ದಾನಿಗಳು ಶಾಸಕ ಸಾ.ರಾಯ ಮಹೇಶ್‌, ಕಾಂಗ್ರೆಸ್‌ ಮುಖಂಡ ಡಿ ರವಿಶಂಕರ್‌ ಸೇರಿದಂತೆ ಪ್ರಮುಖರು ಆಗಮಿಸುತ್ತಿದ್ದಾರೆ.

ಶಾಸಕ ಸಾ.ರಾ. ಮಹೇಶ್‌ ರವರು ಚಿಕ್ಕ ವಡ್ಡರಗುಡಿ ಗ್ರಾಮದಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದರ ಜೊತೆಗೆ ಈ ದೇವಸ್ಥಾನ ನಿರ್ಮಾಣ ಮಾಡಲು ವೈಯಕ್ತಿಕವಾಗಿ ಎರಡು ಲಕ್ಷ ಮತ್ತು ಅನುದಾನದಲ್ಲಿ ಹತ್ತು ಲಕ್ಷವನ್ನು ನೀಡಿದ್ದು ಗ್ರಾಮಸ್ಥರ ಹೆಚ್ಚು ಸಹಕಾರದೊಂದಿಗೆ ದೇವಾಲಯ ನಿರ್ಮಾಣವಾಗಿದೆ.

- ಶಂಭು,.ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು

click me!