ಮಹತ್ವ ಪಡೆದ ರೋಹಿಣಿ ಸಿಂಧೂರಿ ನಂಜನಗೂಡು ದೇಗುಲ ಭೇಟಿ

By Kannadaprabha NewsFirst Published Oct 7, 2020, 9:41 AM IST
Highlights

ಜಿಲ್ಲಾಧಿಕಾರಿ ವರ್ಗಾವಣೆ ಪ್ರಕರಣದ ವಿಚಾರಣೆ ಇಂದು ನಡೆಯಲಿದ್ದು ಹಿಂದಿನ ದಿನ ನಂಜನಗೂಡು ನಂಜುಡೇಶ್ವರನ ದರ್ಶನವನ್ನು ರೋಹಿಣಿ ಸಿಂಧೂರಿ ಪಡೆದಿದ್ದಾರೆ

ನಂಜನಗೂಡು (ಅ.07):  ದಕ್ಷಿಣಕಾಶಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದರ್ಶನ ಪಡೆದರು. ಸಂಕಲ್ಪ ಪೂಜೆ, ಅಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು. ಆಡಳಿತ ಮಂಡಳಿ ವತಿಯಿಂದ ಶ್ವೇತವಸ್ತ್ರ, ಫಲತಾಂಬೂಲ ನೀಡಿ ಗೌರವಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್‌ ಅವರನ್ನು ಒಂದು ತಿಂಗಳೊಳಗೆ ವರ್ಗಾಯಿಸಿ ರೋಹಿಣಿ ಸಿಂಧೂರಿ ಅವರನ್ನು ನೇಮಿಸಲಾಗಿದೆ. ಇದನ್ನು ಪ್ರಶ್ನಿಸಿ ಶರತ್‌ ಸಿಎಟಿ ಮೆಟ್ಟಲೇರಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿರುವ ಸಿಎಟಿ ಪ್ರಕರಣವನ್ನು ಅ.7ಕ್ಕೆ ಮುಂದೂಡಿದೆ. ಈ ವಿಚಾರಣೆಯ ಹಿನ್ನೆಲೆಯಲ್ಲಿ ರೋಹಿಣಿ ಅವರ ದೇಗುಲ ಭೇಟಿ ಮಹತ್ವ ಪಡೆದುಕೊಂಡಿದೆ.

ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಷ್ಟವಿಲ್ಲ-2 ವಾರ ಕೊಡಿ : ರೋಹಿಣಿ ಸಿಂಧೂರಿ ..

ಬಳಿಕ ದೇವಾಲಯ ಕಪಿಲ ಸ್ನಾನಘಟ್ಟಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ವೀಕ್ಷಿಸಿದರು. ದೇವಾಲಯದಲ್ಲಿ ಆಗಬೇಕಾಗಿರುವ ಕೆಲಸ, ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಕೊಂಡರು.

ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಕೋವಿಡ್‌-19 ಸೋಂಕಿತರ ವಿವರ ಹಾಗೂ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಈಶ್ವರ್‌ ಕನಾಟ್ಕೆ ಅವರಿಂದ ವಿವರ ಪಡೆದು, ಕೋವಿಡ್‌ ನಿಯಂತ್ರಣಕ್ಕೆ ಕ್ರಮವಹಿಸಲು ಸೂಚಿಸಿದರು.

ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಇಲಾಖೆಯ ಪ್ರಗತಿ ಪರಿಶೀಲಿಸಿದರು.

ತಹಸೀಲ್ದಾರ್‌ ಕೆ.ಎಂ. ಮಹೇಶ್‌ ಕುಮಾರ್‌, ನಗರಸಭೆ ಪೌರಾಯುಕ್ತ ಕರಿಬಸವಯ್ಯ, ದೇವಾಲಯದ ಇಒ ಶಿವಕುಮಾರಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಶಿರೇಖಾ, ಮಂಜುಳ, ಮಧು ಇದ್ದರು.

click me!