'ಬಿಎಸ್‌ವೈ ರಾಜ್ಯದ ರಬ್ಬರ್‌ ಸ್ಟ್ಯಾಂಪ್‌ ಸಿಎಂ'

By Kannadaprabha NewsFirst Published Oct 7, 2020, 9:27 AM IST
Highlights

ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಬ್ಬರ್ ಸ್ಟ್ಯಾಂಪ್ ಸಿಎಂ ಎಂದು ಲೇವಡಿ ಮಾಡಲಾಗಿದೆ. 

ತುರುವೇಕೆರೆ (ಅ.07): ರೈತರ ಪಾಲಿಗೆ ಮರಣ ಶಾಸನವೆನಿಸಿರುವ ಕೃಷಿ ಮಸೂದೆಗಳನ್ನು ಪ್ರಧಾನಿ ಮೋದಿ ಆಣತಿಯಂತೆ ಜಾರಿಗೆ ತರಲು ಮುಂದಾಗಿರುವ ಬಿ.ಎಸ್‌.ಯಡಿಯೂರಪ್ಪ ರಬ್ಬರ್‌ ಸ್ಟ್ಯಾಂಪ್‌ ಮುಖ್ಯಮಂತ್ರಿ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಲೇವಡಿ ಮಾಡಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಸೂದೆಗಳನ್ನು ಅಂಗೀಕರಿಸಲು ಉಭಯ ಸರ್ಕಾರಗಳು ರಾಷ್ಟ್ರಪತಿಯವರ ಅಂಗಳಕ್ಕೆ ತರಾತುರಿಯಲ್ಲಿ ಕಳಿಸುವ ಅಗತ್ಯವಿರಲಿಲ್ಲ. 1966ರ ಭೂ ಸುಧಾರಣೆ ಕಾಯ್ದೆಯಲ್ಲಿ ಮಾರ್ಪಾಡು ಮಾಡುವ ಮುನ್ನ ಸಾಧಕ ಭಾದಕ ಕುರಿತಂತೆ ಕೃಷಿ ತಜ್ಞರು ಹಾಗೂ ರೈತರ ಅಭಿಪ್ರಾಯಗಳನ್ನು ಕೇಳಬಹುದಿತ್ತು. ಏಕಾಏಕಿ ಕೃಷಿ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಹಿಂದಿನ ಮರ್ಮ ಏನೆಂಬುದು ರೈತಾಪಿಗಳಿಗೆ ಈಗಾಗಲೇ ಅರ್ಥವಾಗಿದೆ. ರೈತನ ಹಕ್ಕುಗಳ ರಕ್ಷಣೆಗಾಗಿ ಜೆಡಿಎಸ್‌ ಕಟಬದ್ಧವಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ ಎಂದರು.

ಚುನಾವಣಾ ಕದನ: ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ .

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ರೈತರ ಹಿತ ಕಾಯುವುದಕ್ಕಿಂತ ಕಪ್ಪು ಹಣವುಳ್ಳವರ ರಕ್ಷಣೆ ಮಾಡುವುದೇ ಮುಖ್ಯವಾಗಿದೆ. ಉಭಯ ಸರಕಾರಗಳು ಬಂಡವಾಳ ಶಾಹಿಗಳ ಹಿತ ಕಾಯುವ ಮಸೂದೆ ಜಾರಿಗೆ ಆತುರ ತೋರುತ್ತಿವೆ. ಉಭಯ ಸರಕಾರಗಳು ರೈತ ವಿರೋಧಿ ಅನುಸರಿಸುವ ಮೂಲಕ ರೈತರ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿವೆ. ಸರಕಾರಗಳು ಕೂಡಲೇ ರೈತ ವಿರೋಧಿ ಮಸೂದೆಯನ್ನು ವಾಪಸ್‌ ಪಡೆಯಬೇಕು ಎಂದು ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.

click me!