ತಮ್ಮ ಆದೇಶ ಹಿಂಪಡೆದ ಮೈಸೂರು ಜಿಲ್ಲಾಧಿಕಾರಿ!

Kannadaprabha News   | Asianet News
Published : Apr 10, 2021, 08:07 AM IST
ತಮ್ಮ ಆದೇಶ ಹಿಂಪಡೆದ ಮೈಸೂರು ಜಿಲ್ಲಾಧಿಕಾರಿ!

ಸಾರಾಂಶ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಮೈಸೂರಿನಲ್ಲಿ ಕೊರೋನಾ ನಿಯಂತ್ರಣದ ಉದ್ದೇಶದಿಂದ  ಹೊರಡಿಸಿದ್ದ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 

ಮೈಸೂರು (ಏ.10):  ಕೊರೋನಾ 2ನೇ ಅಲೆ ಹಿನ್ನೆಲೆಯಲ್ಲಿ ಏ.10 ರಿಂದ 20 ರವರೆಗೆ ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಪ್ರವಾಸಿ ಸ್ಥಳಗಳು, ರೆಸಾರ್ಟ್‌ಗಳು, ಕನ್ವೆಷನ್‌ಹಾಲ್‌, ಪಾರ್ಟಿ ಹಾಲ್‌, ರೀಕ್ರೇಷನ್‌ ಕ್ಲಬ್ಸ್‌ ಮತ್ತು ಚಿತ್ರಮಂದಿರಗಳಿಗೆ ಬರುವವರು ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಹೊಂದಿರುವುದು ಕಡ್ಡಾಯಗೊಳಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದ್ದಾರೆ.

ಬೆಂಗಳೂರು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಭೇಟಿ ನೀಡುವ ವ್ಯಕ್ತಿಗಳು ಕೋವಿಡ್‌-19 ನೆಗೆಟಿವ್‌ ರಿಪೋರ್ಟ್‌ ಹೊಂದಿರಲು ಸಲಹಾ ಸೂಚನೆ ಹೊರಡಿಸಲಾಗಿತ್ತು. ಆದರೆ, ಸಾರ್ವಜನಿಕರಲ್ಲಿ ಸಲಹಾ ಸೂಚನೆಯು ಗೊಂದಲ ಉಂಟಾಗಿದೆ. ಅಲ್ಲದೆ ಸರ್ಕಾರದ ಸುತ್ತೋಲೆಯಲ್ಲಿ ಕೋವಿಡ್‌-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಆದೇಶಗಳನ್ನು ತಮ್ಮ ಹಂತದಲ್ಲಿ ಹೊರಡಿಸತಕ್ಕದ್ದಲ್ಲ. ಈಗಾಗಲೇ ಇಂತಹ ಆದೇಶ, ಸೂಚನೆ ಹೊರಡಿಸಿದ್ದಲ್ಲಿ ತಕ್ಷಣವೇ ಹಿಂಪಡೆಯಲು ನಿರ್ದೇಶಿಸಲಾಗಿರುತ್ತದೆ.

ಮೈಸೂರು ರೋಹಿಣಿ ಸಿಂಧೂರಿ ಖಡಕ್ ಆದೇಶ

ಆದ್ದರಿಂದ ಹೊರಡಿಸಲಾಗಿರುವ ಸಲಹಾ ಸೂಚನೆಯನ್ನು ತಕ್ಷಣದಿಂದ ಹಿಂಪಡೆಯಲಾಗಿದೆ. ಹಾಗೂ ಸಲಹಾ ಸೂಚನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕೋರಿ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ