ಬಂಧಿತ ಕರಡಿ ಯಾವುದು ಎಂಬುದನ್ನು ಖಾತರಿ ಪಡಿಸಿಕೊಳ್ಳಲು ತುಮಕೂರಿನಿಂದ ತಜ್ಞರ ತಂಡವನ್ನು ಕರೆಸಲಾಗಿದೆ| ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಪುನರ್ವಸತಿ ಕೇಂದ್ರದಿಂದ ಚಾಲಕನ ಮೇಲೆ ದಾಳಿ ನಡೆಸಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಕರಡಿ|
ಆನೇಕಲ್(ಏ.10): ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಮಾ.29ರಂದು ತಪ್ಪಿಸಿಕೊಂಡಿದ್ದ ಕರಡಿ, ಶುಕ್ರವಾರ ಮುಂಜಾನೆ ಪಾರ್ಕ್ ಸಮೀಪದ ಬೈರಪ್ಪನಹಳ್ಳಿ ಬಳಿ ಬೋನಿಗೆ ಬಿದ್ದಿದೆ. ಗ್ರಾಮಸ್ಥರು ನೆಮ್ಮದಿಯ ಉಸಿರನ್ನು ಬಿಡುವಂತಾಗಿದೆ.
ಬೋನಿಗೆ ಬಿದ್ದಿರುವ ಕರಡಿ ಆರೋಗ್ಯವಾಗಿದ್ದು, ತಪ್ಪಿಸಿಕೊಂಡು ಹೋಗಿದ್ದ ಕರಡಿಯನ್ನೇ ಬಹುತೇಕ ಹೋಲುತ್ತಿರುವ ಕಾರಣ ಅದೇ ಕರಡಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆದರೂ ಬಂಧಿತ ಕರಡಿ ಯಾವುದು ಎಂಬುದನ್ನು ಖಾತರಿ ಪಡಿಸಿಕೊಳ್ಳಲು ತುಮಕೂರಿನಿಂದ ತಜ್ಞರ ತಂಡವನ್ನು ಕರೆಸಲಾಗಿದೆ ಎಂದು ಪಾರ್ಕಿನ ಆಡಳಿತಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದರು.
undefined
ಬನ್ನೇರುಘಟ್ಟ: ಚಾಲಕನ ಕಿವಿ ಕಚ್ಚಿ ಕರಡಿ ಪರಾರಿ
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಪುನರ್ವಸತಿ ಕೇಂದ್ರದಿಂದ ಚಾಲಕನ ಮೇಲೆ ದಾಳಿ ನಡೆಸಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಕರಡಿ, ನಂತರ ತಾಲೂಕಿನ ಹೆನ್ನಾಗರ, ಮರಸೂರು, ಶೆಟ್ಟಿಹಳ್ಳಿ ಮುಂತಾದೆಡೆ ಕಾಣಿಸಿಕೊಂಡು ಕೆಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ತಪ್ಪಿಸಿಕೊಂಡಿರುವ ಕರಡಿಯನ್ನು ತುಮಕೂರಿನ ಸಿದ್ಧಗಂಗಾಮಠದಿಂದ ರಕ್ಷಿಸಿ ತರಲಾಗಿತ್ತು.