Bengaluru: ಪುಲಿಕೇಶಿನಗರದ ಅನುಮಾನಾಸ್ಪದ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಪಾರ್ಸಲ್ ಕಳುಹಿಸಿದವನ ಸುಳಿವು ಪತ್ತೆ!

Published : Oct 24, 2026, 10:53 AM IST
Bengaluru Blast

ಸಾರಾಂಶ

ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಶಂಕಾಸ್ಪದ ಬ್ಯಾಟರಿ ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಕಾವಲುಗಾರ ಅಲ್ಲಾವುದ್ದೀನ್ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಪಾರ್ಸಲ್ ಮೂಲಕ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಮಲ್ಲೇಶ್ವರದಿಂದ ಬಂದ ಕರೆಯ ಜಾಡು ಹಿಡಿದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು: ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡದ ಶಂಕಾಸ್ಪದ ‘ಬ್ಯಾಟರಿ’ ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಕಾವಲುಗಾರನ ಮೇಲಿನ ವೈಯಕ್ತಿಕ ದ್ವೇಷದಿಂದ ಕೃತ್ಯ ನಡೆದಿದೆ ಎಂಬ ಶಂಕೆ ತನಿಖೆಯಲ್ಲಿ ವ್ಯಕ್ತವಾಗಿದೆ.

ವಾಚ್‌ಮನ್‌ ಮೇಲಿನ ದ್ವೇಷಕ್ಕೆ ಬ್ಯಾಟರಿ ಸ್ಫೋಟ?

ಈ ಗುಮಾನಿಗೆ ಪೂರಕವಾಗಿ ಕೆಲವು ಪುರಾವೆಗಳು ಪತ್ತೆಯಾಗಿದ್ದು, ತನಗೆ ಪಾರ್ಸಲ್‌ ಕಳುಹಿಸಿದ ಪರಿಚಿತ ವ್ಯಕ್ತಿ ಬಗ್ಗೆ ಕಾವಲುಗಾರ ಅಲ್ಲಾವುದ್ದೀನ್‌ ಬಾಯಿಬಿಡದೇ ಮುಗುಮ್ಮಾಗಿ ವರ್ತಿಸುತ್ತಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ. ಅಸ್ಸಾಂನ ಅಲ್ಲಾವುದ್ದೀನ್‌ ಹಾಗೂ ಆತನ ಸೋದರನ ಕ್ರಿಮಿನಲ್‌ ಹಿನ್ನೆಲೆ ಇದೆ. ಈ ಸೋದರರ ಪೈಕಿ ಅಲ್ಲಾವುದ್ದೀನ್‌ ವಿರುದ್ಧ ವರದಕ್ಷಿಣೆ ಹಾಗೂ ಆತನ ಸೋದರನ ಮೇಲೆ ಅತ್ಯಾ*ರ ಪ್ರಕರಣವಿರುವ ಮಾಹಿತಿ ಇದೆ. ಈ ಕ್ರಿಮಿನಲ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಕಾವಲುಗಾರನ್ನೇ ಗುರಿಯಾಗಿಸಿ ಬಾಂಬ್‌ ಸ್ಫೋಟಿಸಿರಬಹುದು ಎಂದು ಮೂಲಗಳು ಹೇಳಿವೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ಶಂಕಾಸ್ಪದ ಸ್ಫೋಟ ಪ್ರಕರಣಕ್ಕೆ ತಿರುವು

ಕಾವಲುಗಾರನ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಆರೋಪಿಗಳ ಕುರಿತು ಸುಳಿವು ಸಿಕ್ಕಿದೆ. ಕಾವಲುಗಾರನಿಗೆ ಸೋಮವಾರ ಮಧ್ಯಾಹ್ನ ಪಾರ್ಸಲ್‌ ಕೊಟ್ಟು ಅಪರಿಚಿತ ವ್ಯಕ್ತಿ ತೆರಳಿದ್ದಾನೆ. ಆದರೆ ಆ ಪಾರ್ಸಲ್‌ ಅನ್ನು ತೆರೆಯದೇ ಕಟ್ಟಡದ 5ನೇ ಮಹಡಿಯಲ್ಲಿ ಹಾಗೇ ಆತ ಇಟ್ಟಿದ್ದ. ಮರುದಿನ ಆಯುಧ ಪೂಜೆ ಹಬ್ಬದ ದಿನ ಅಲ್ಲಾವುದ್ದೀನ್‌ಗೆ ವ್ಯಕ್ತಿ ಕರೆ ಮಾಡಿ ನಿನಗೆ ಪಾರ್ಸಲ್‌ ಕಳುಹಿಸಿದ್ದೇ. ಅದನ್ನು ತೆರೆದು ನೋಡಿಲ್ಲವೇ ಎಂದಿದ್ದಾನೆ.

ಈ ಕರೆ ಬಂದ ಬಳಿಕ ಆ ಪಾರ್ಸಲ್‌ ಅನ್ನು ಅಲ್ಲಾವುದ್ದೀನ್‌ ತೆರೆಯಲು ಯತ್ನಿಸಿದ್ದಾನೆ. ಆದರೆ ಓಪನ್‌ ಮಾಡಲು ಆಗಿಲ್ಲ. ಆಗ 7ನೇ ಮಹಡಿಯಲ್ಲಿ ಪೇಂಟಿಂಗ್‌ ಕೆಲಸದಲ್ಲಿ ತೊಡಗಿದ್ದ ಸೂರಜ್‌ ಅನ್ನು ಆತ ಕರೆದಿದ್ದಾನೆ. ಅಂತೆಯೇ ಅಲ್ಲಿಗೆ ಬಂದ ಸೂರಜ್‌ಗೆ ಪಾರ್ಸಲ್‌ ಬ್ಯಾಗ್‌ ಅನ್ನು ಅಲ್ಲಾವುದ್ದೀನ್‌ ಕೊಟ್ಟಿದ್ದಾನೆ. ಆಗ ಪಾರ್ಸಲ್‌ ತೆರೆದಾಗ ಬ್ಯಾಟರಿ ಕಂಡಿದೆ. ಕೂಡಲೇ ಆ ಬ್ಯಾಟರಿಯನ್ನು ಸೂರಾಜ್‌ ಆನ್‌ ಮಾಡಿದ ಕೂಡಲೇ ಸ್ಫೋಟವಾಗಿದೆ.

ಮಲ್ಲೇಶ್ವರದಿಂದ ಕರೆ?

ಸೆಕ್ಯುರಿಟಿ ಗಾರ್ಡ್‌ ಅಲ್ಲಾವುದ್ದೀನ್‌ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಕೃತ್ಯಕ್ಕೂ ಮುನ್ನ ಮಲ್ಲೇಶ್ವರದಿಂದ ಆತನಿಗೆ ಕರೆ ಬಂದಿರುವುದು ಗೊತ್ತಾಗಿದೆ. ಮಲ್ಲೇಶ್ವರ ಅಂಗಡಿ ಬಳಿ ಅಪರಿಚಿತ ವ್ಯಕ್ತಿಯಿಂದ ಮೊಬೈಲ್‌ ಪಡೆದು ಅಲ್ಲಾವುದ್ದೀನ್‌ಗೆ ಆರೋಪಿ ಕರೆ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಪತ್ತೆಯಾಗಿದೆ.

PREV
Read more Articles on
click me!

Recommended Stories

ನಟ ದರ್ಶನ್ ಕುಟುಂಬ - ಧನ್ವೀರ್ ನಡುವೆ ಬಿರುಕು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ, ಪೊಲೀಸ್ ವಿಚಾರಣೆಗೆ ಸಿದ್ಧತೆ!
ಪ್ರತಿಯೊಬ್ಬ ಕನ್ನಡಿಗ ಓದಲೇಬೇಕು; ನಿಮ್ಮ ಮಾತೃಭಾಷೆ ಕನ್ನಡನಾ? ಹಾಗಾದ್ರೆ ರೆಸ್ಯೂಂ ಕಸದ ಬುಟ್ಟಿಗೆ! ಯುವತಿಯ ಶಾಕಿಂಗ್ ವಿಡಿಯೋ ವೈರಲ್!