Mysuru : ರಾಮದಾಸ್‌ಗೆ ಟಿಕೆಟ್‌ ನೀಡದಂತೆ ಮೋದಿಗೆ ಪತ್ರ

By Kannadaprabha NewsFirst Published Mar 24, 2023, 5:32 AM IST
Highlights

ಕೆ.ಆರ್‌. ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಟಿಕೆಟ್‌ ನಿರಾಕರಿಸಬೇಕು ಎಂದು ಕ್ಷೇತ್ರದ ಹಿರಿಯ ನಾಗರೀಕ ಪರಮಶಿವಮೂರ್ತಿ ಅವರು ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ.

  ಮೈಸೂರು :  ಕೆ.ಆರ್‌. ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಟಿಕೆಟ್‌ ನಿರಾಕರಿಸಬೇಕು ಎಂದು ಕ್ಷೇತ್ರದ ಹಿರಿಯ ನಾಗರೀಕ ಪರಮಶಿವಮೂರ್ತಿ ಅವರು ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ 20 ವರ್ಷಗಳಿಂದ ಬಿಜೆಪಿ ಬೆಂಬಲಿಸುತ್ತಿರುವ ನಮ್ಮ ಕ್ಷೇತ್ರದ ಜನತೆ ಕಳೆದ 5 ವರ್ಷಗಳಿಂದ ಬಹಳ ಬೇಸತ್ತು, ನೋವಿನಿಂದ ಈ ಪತ್ರ ಬರೆಯುತ್ತಿದ್ದೇನೆ. ಮೋದಿ ಅವರ ಮುಖವನ್ನು ನೋಡಿ ಇಷ್ಟುದಿನ ಬಿಜೆಪಿಯನ್ನು ಬೆಂಬಲಿಸಿ ರಾಮದಾಸ್‌ ಅವರನ್ನು ಗೆಲ್ಲಿಸಿದ್ದೇವೆ. ಆದರೆ ಶಾಸಕ ರಾಮದಾಸ್‌ ಜನರ ಯಾವುದೇ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.

ತಾವು ಜನರಿಗೆ ಚುನಾವಣಾ ಸಂದರ್ಭದಲ್ಲಿ ಬಿಟ್ಟು ಬೇರೆ ಯಾವುದೇ ಸಂದರ್ಭದಲ್ಲಿ ಸಿಗುವುದಿಲ್ಲ. ನೀವು ಮೈಸೂರಿಗೆ ಬಂದಾಗ ಅವರ ಬೆನ್ನಿಗೆ ಪ್ರೀತಿಯಿಂದ ತಟ್ಟಿಹೋಗಿದ್ದೀರಿ. ಆದರೆ ಇಂದು ಆ ಸೊಕ್ಕಿನ ಬೆನ್ನನ್ನು ಮರೆಯುವ ನಾಯಕತ್ವ ಬಿಜೆಪಿಗೆ ಇಲ್ಲ ಎಂದು ನಮಗೆ ಅನ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಕೆಲವು ಕಾಮಗಾರಿಗೆ ಚಾಲನೆ ನೀಡಿ ಪೋಸ್‌ ಕೊಟ್ಟು ಹೋಗುವುದು ಬಿಟ್ಟರೆ, ನೇರವಾಗಿ ಸಂಪರ್ಕ ಮಾಡಬೇಕೆಂದರೆ ಒಬ್ಬ ಮುಸಲ್ಮಾನ ಮಹಿಳೆಯ ಅನುಮತಿ ಪಡೆದು ಮಾಡಬೇಕಿರುವುದು ನಮ್ಮ ಪರಿಸ್ಥಿತಿ. ಹಿಂದುತ್ವಕ್ಕಾಗಿ ಮತ ಹಾಕಿದ ನಮ್ಮ ಕ್ಷೇತ್ರದಲ್ಲಿ ಗುಂಬಜ್‌ ಮಾದರಿ ಬಸ್‌ ನಿಲ್ದಾಣ ನಿರ್ಮಿಸಿ ಎಲ್ಲರ ಮನಸ್ಸಿನ ಮೇಲೆ ನೋವು ಬೀರಿದ್ದಾರೆ. ದಯಮಾಡಿ ಇಂತಹ ವ್ಯಕ್ತಿಗೆ ಟಿಕೆಟ್‌ ನೀಡಬೇಡಿ. ಇದರ ಮೇಲೂ ತಾವು ಟಿಕೆಟ್‌ ನೀಡಿದರೆ ನಾವು ಕಾಂಗ್ರೆಸ್‌ ಅಥವಾ ಎಸ್‌ಡಿಪಿಐ ಬೆಂಬಲಿಸುತ್ತೇವೆಯೇ ಹೊರತು ರಾಮದಾಸ್‌ ಬೆಂಬಲಿಸುವುದಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹತ್ವದ ಜವಾಬ್ದಾರಿ

 ಮೈಸೂರು (ಅ.14):  ಟಿ. ನರಸೀಪುರ (T Narasipura) ವಿಧಾನಸಭಾ ಕ್ಷೇತ್ರವನ್ನು (Constituency) ಮುಂದಿನ ಚುನಾವಣೆಯಲ್ಲಿ (Election) ಬಿಜೆಪಿ (BJP) ಗೆಲ್ಲಿಸುವ ದೃಷ್ಟಿಯಿಂದ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಬಲಪಡಿಸಲು ಮಾಜಿ ಸಚಿವ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ (SA Ramadas) ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದರು.

ವಿದ್ಯಾರಣ್ಯಪುರಂನ ಶಾಸಕರ ಕಚೇರಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಕ್ಷೇತ್ರದ ಮುಖಂಡರೊಡನೆ ಮಾತುಕತೆ ನಡೆಸಿದರು. ಸಭೆಯಲ್ಲಿ ಟಿ. ನರಸೀಪುರ ವಿಧಾನ ಮಂಡಲದ ಬಿಜೆಪಿ (BJP) ಪದಾಧಿಕಾರಿಗಳ ಅಭಿಪ್ರಾಯಗಳನ್ನು ಆಲಿಸಿದ ಶಾಸಕರು ಮಾತನಾಡಿ, ಟಿ. ನರಸೀಪುರ ಮಂಡಲದ ಬಿಜೆಪಿಯಲ್ಲಿ ಸಂಘಟನೆಯ ಜವಬ್ದಾರಿಯನ್ನು ನನಗೆ ನೀಡಿದ್ದು ಇನ್ನು ಮುಂದೆ ಬೂತ್‌ ಮಟ್ಟದಿಂದ ಕಾರ್ಯಕರ್ತರನ್ನು ಬಲಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ (Central Govt) ಯೋಜನೆಯನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡಬೇಕು ಎಂದು ತಿಳಿಸದರು.

ಬೊಮ್ಮಾಯಿ ಸಾಹೇಬ್ರು ಕ್ಯಾಪ್ಟನ್, 29 ಪ್ಲೇಯರ್ಸ್, ನೋಡುವವರು ಕರ್ನಾಟಕದ 7 ಕೋಟಿ ಜನ!

ರಾಜ್ಯ ಸಂಘಟನೆಯು ಒಂದು ಕ್ಷೇತ್ರದ ಜವಬ್ದಾರಿ ತೆಗೆದುಕೊಳ್ಳಬೇಕು. ನನಗೆ ಯಾವ ಕ್ಷೇತ್ರ ಬೇಕೋ ಆ ಕ್ಷೇತ್ರದ ಆಯ್ಕೆಯನ್ನು ಮಾಡಲು ತಿಳಿಸಿತು. ಆದರೆ ನಾನು ಯಾವ ಕ್ಷೇತ್ರ ಕಷ್ಟಕರವಾಗಿದೆ ಆ ಕ್ಷೇತ್ರವನ್ನೇ ನನಗೆ ಜವಬ್ದಾರಿ ನೀಡಲು ಕೋರಿದ ನಂತರ ಟಿ.ನರಸೀಪುರದ ಜವಾಬ್ದಾರಿ ನೀಡಿರುತ್ತಾರೆ. ಪ್ರತಿಯೊಬ್ಬರು ಟಿ. ನರಸೀಪುರ ಕ್ಷೇತ್ರವನ್ನು ಬಿಜೆಪಿ ಕ್ಷೇತ್ರವನ್ನಾಗಿಸಲು ದುಡಿಯಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕ ಭಾರತೀ ಶಂಕರ್‌, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ. ರಮೇಶ್‌, ಮೈಸೂರು ವಿಭಾಗದ ಪ್ರಭಾರಿ ಮೈ.ವಿ. ರವಿಶಂಕರ್‌ ಇದ್ದರು.

click me!