ಕೆಆರ್‌ಎಸ್‌ನಲ್ಲಿ ಭಾರಿ ಶಬ್ಧ : ಎದುರಾಗಿದೆ ಆತಂಕ

Published : Aug 17, 2019, 11:21 AM IST
ಕೆಆರ್‌ಎಸ್‌ನಲ್ಲಿ ಭಾರಿ ಶಬ್ಧ : ಎದುರಾಗಿದೆ ಆತಂಕ

ಸಾರಾಂಶ

ಮಂಡ್ಯದ KRS ಡ್ಯಾಂನಲ್ಲಿ ಭಾರೀ ಶಬ್ದವೊಂದು ಕೇಳಿ ಬಂದಿದ್ದು ಇದರಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ. ಈ ಶಬ್ಧ ಹಲವು ದಿನಗಳಿಂದಲೂ ಕೇಳುತ್ತಿದ್ದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 

ಮಂಡ್ಯ [ಆ.17]:  ಶ್ರೀರಂಗಪಟ್ಟಣದ ಕೆಆರ್‌ಎಸ್‌ ಅಣೆಕಟ್ಟೆಸುತ್ತಮುತ್ತ ಶುಕ್ರವಾರ ರಾತ್ರಿ ಭಾರಿ ಶಬ್ಧ ಕೇಳಿಬಂದಿದೆ. ಸಕ್ಕರೆ ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ಗೆ ಇದರಿಂದ ಆತಂಕ ಎದುರಾಗಿದೆ.

ಕಳೆದ ಎರಡು ವರ್ಷಗಳಿಂದ ನಿಗೂಢವಾಗಿ ಕೇಳಿ ಬರುತ್ತಿರುವ ಆ ಶಬ್ಧ ಇದಕ್ಕೆ ಪುಷ್ಟಿನೀಡುತ್ತಿದೆ. ಶುಕ್ರವಾರ ರಾತ್ರಿ ಕೇಳಿದ ಆ ನಿಗೂಢ ಶಬ್ಧಗಳು ರೈತರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.

ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜ ಅಣೆಕಟ್ಟೆಸುತ್ತಮುತ್ತ ಮತ್ತೆ ಸರಣಿ ಶಬ್ದ ಕೇಳಿ ಬಂದಿದೆ. ಸುಮಾರು 5-7 ಸಲ ರಾತ್ರಿ ಸುಮಾರು 7.30ರ ಸಮಯದಲ್ಲಿ ಕೇಳಿ ಬಂದಿದೆ. ಆ ನಿಗೂಢ ಶಬ್ಧಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕೆಆರ್‌ಎಸ್‌ ಸಂಪೂರ್ಣ ಭರ್ತಿ, ನಾಲೆಗೂ ನೀರು

ನಿಗೂಢ ಶಬ್ಧದ ಮೂಲ ಪತ್ತೆಯಾಗಿಲ್ಲ:  ಭೂಸ್ಥರದಲ್ಲಿನ ಬದಲಾವಣೆಯೋ ಅಥವಾ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಸ್ಫೋಟದಿಂದಲೇ ಈ ಶಬ್ದ ಬರುತ್ತಿರುವುದೋ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಳೆದ ವರ್ಷವಷ್ಟೇ ಭೂಮಾಪಕ ಕೇಂದ್ರದಲ್ಲಿ ಭೂಮಿ ಅದುರಿದ ಬಗ್ಗೆ ವರದಿ ನೀಡಲಾಗಿತ್ತು. ಆ ಕಂಪನ ಸಮೀಪ ನಡೆಯುತ್ತಿದ್ದ ಗಣಿಗಾರಿಕೆ ಸ್ಫೋಟಕದ್ದು ಎಂದು ಊಹೆ ಮಾಡಲಾಗಿತ್ತು.

ಆದರೆ ಕೆಲವು ಸ್ಥಳೀಯರು ಈ ಶಬ್ಧ ಗುಡುಗು- ಸಿಡಿಲಿನಿಂದ ಬಂದಿದೆ ಎಂದು ಹೇಳುತ್ತಿದ್ದಾರೆ.

PREV
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?