ದಾವಣಗೆರೆಯ ಪುಟ್ಟ ಗ್ರಾಮಕ್ಕೆ Mysuru Wadiyar ಭೇಟಿ

By Suvarna News  |  First Published May 2, 2022, 4:53 PM IST

ದಾವಣಗೆರೆ ಜಿಲ್ಲೆಯ ಪುಟ್ಟ ಗ್ರಾಮಕ್ಕೆ  ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ಕೊಟ್ಟಿದ್ದರು. ಗ್ರಾಮಕ್ಕೆ ಭೇಟಿ ನೀಡುವ ಮೊದಲೇ  ಎರಡು ಕಿ ಮೀ ಅಂತರದಲ್ಲೇ ಯದುವೀರ ಒಡೆಯರ್ ನ್ನು  ಗ್ರಾಮಸ್ಥರು ಸ್ವಾಗತಿಸಿದರು. 


ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಮೇ 2): ದಾವಣಗೆರೆ ಜಿಲ್ಲೆ ಕೊಲ್ಕುಂಟೆ ಗ್ರಾಮದಲ್ಲಿ ಇಂದು ನಿಜಕ್ಕು ಹಬ್ಬದ ಸಡಗರ. ದಾವಣಗೆರೆ ಜಿಲ್ಲೆಯ ಪುಟ್ಟ ಗ್ರಾಮಕ್ಕೆ ಇಂದು‌ ಮೈಸೂರು ಒಡೆಯರ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ಕೊಟ್ಟಿದ್ದರು. ಗ್ರಾಮಕ್ಕೆ ಭೇಟಿ ನೀಡುವ ಮೊದಲೇ  ಎರಡು ಕಿ ಮೀ ಅಂತರದಲ್ಲೇ ಯದುವೀರ ಒಡೆಯರ್ ನ್ನು ಸ್ವಾಗತಿಸಿದ ಗ್ರಾಮಸ್ಥರು ಹೂವಿನ ಮಳಗರೆದು ಸಾರೋಟ ಮೆರವಣಿಗೆಯಲ್ಲಿ ಕರೆತಂದರು.

Latest Videos

undefined

ಗ್ರಾಮದಲ್ಲಿ ಮೆರವಣಿಗೆ ಮಾಡಿದ ಗ್ರಾಮಸ್ಥರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಕರೆತಂದು ನಮಸ್ಕರಿಸಿ ಅಲ್ಲಿಂದ ಕೋಲ್ಕುಂಟೆ ಗ್ರಾಮದಲ್ಲಿ ಜೀರ್ಣೊದ್ಧಾರ ಮಾಡಿರುವ ಕೆರೆ ಬಳಿ ಕರೆತಂದು ಒಡೆಯರ್ ಗೆ ತೋರಿಸಿದರು. ನಂತರ ಗ್ರಾಮದಲ್ಲಿ ಗ್ರಾಮಾಭ್ಯುದಯ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಡೀ ಗ್ರಾಮ  ಪಾಲ್ಗೊಂಡಿತ್ತು. ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದ ನಟ ಸುಚೇಂದ್ರ ಪ್ರಸಾದ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು

ಯದುವೀರ ಕೃಷ್ಣದತ್ತ ಒಡೆಯರ್ ಬಂದಿದ್ದು ಏಕೆ? ಸುಚೇಂದ್ರ‌ ಪ್ರಸಾದ ಗೆ ಕಳೆದ ಮೂರು ವರ್ಷಗಳಿಂದ ಯದುವೀರ ಒಡೆಯರ್ ಪರಿಚಯ. ಹಲವಾರು ಕಾರ್ಯಕ್ರಮಗಳಲ್ಲಿ  ಸುಚೆಂದ್ರ ಪ್ರಸಾದ್ ವಾಗ್ಜರಿಯನ್ನು ನೋಡಿ ಒಡೆಯರ್ ಮೂಕವಿಸ್ಮತರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಕೊಲ್ಕುಂಟ ಗ್ರಾಮಕ್ಕೆ ಭವ್ಯ ಇತಿಹಾಸ ಇದೆ.‌ಮೈಸೂರು ಅರಸರು ಬ್ರಾಹ್ಮಣ ಭಟ್ಟರಿಗೆ ಉಂಬಳಿಯಾಗಿ ನೀಡಿದ ಭೂ ದಾನದ ಶಿಲಾಶಾಸನಳು ಗ್ರಾಮದಲ್ಲಿವೆ.ಅವುಗಳನ್ನು  ರಕ್ಷಿಸುವ ಕೆಲಸವನ್ನು ಗ್ರಾಮ ಮಾಡುತ್ತಿದೆ.ಅಷ್ಟೇ ಅಲ್ಲದೇ ಕೃಷಿ ಕೌಶಲ್ಯದಲ್ಲಿ ಗ್ರಾಮ ಉನ್ನತೀಕರಣ ಸಾಧಿಸಿದೆ ಅದನ್ನು ನೋಡಲು ನೀವು ಬರಬೆಕೆಂದು ಆಹ್ವಾನ ನೀಡಿದಾಗ ಅದಕ್ಕೆ ಒಪ್ಪಿಕೊಂಡು ಯದುವೀರ್ ಒಡೆಯರ್ ಬರಲು ಒಪ್ಪಿದ್ದಾರೆ 

ಪ್ರಿಯಾಂಕ ಖರ್ಗೆ ಸಿಎಂ ಬದಲಾವಣೆ ಹೇಳಿಕೆಗೆ ಸುಧಾಕರ್ ತಿರುಗೇಟು!

ಕೋಲ್ಕುಂಟೆ ಗ್ರಾಮದ ಇತಿಹಾಸ: ಕೋಲ್ಕುಂಟೆ ಗ್ರಾಮ ಮೂಲತಃ ಮೈಸೂರು ಅರಸರ ಆಳ್ವಿಕೆಯಲ್ಲಿ ಬರುವ ಒಂದು ಪುಟ್ಟ ಗ್ರಾಮ .ಕೊಡಗನೂರು ಸೀಮೆಯಲ್ಲಿ ಬರುವ ಕೋಲ್ಕುಂಟೆಯನ್ನು ಅಲ್ಲಿ ವಾಸವಾಗಿದ್ದ ಬ್ರಾಹ್ಮಣ ಶಂಕರಭಟ್ಟರಿಗೆ ಉಂಬಳಿಯಾಗಿ ನೀಡಲಾಗಿದೆ. ಇಂತಹ ಶಿಲಾಶಾಸನವನ್ನು ಹೊಸದಾಗಿ ಅನಾವರಣಗೊಳಿಸಿದರು.

ಕೋಲ್ಕುಂಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಶಾಸನ (ದಾವಣಗೆರೆ-131) ದಂತೆ ಚಿತ್ರದುರ್ಗದ ವಾಲ್ಮೀಕಿ ಗೋತ್ರದ ಶ್ರೀಮನ್ಮಹಾನಾಯಕಚಾರ್ಯ ಕಾಮಗೇತಿ ಕಸ್ತೂರಿ ರಂಗಪ್ಪನಾಯಕರ ಪೌತ್ರರಾದ ಮದಕರಿನಾಯಕರ ಪುತ್ರರಾದ ಬರಮಂಣನಾಯಕರು ಅಶ್ವಲಾಯನಸೂತ್ರದ ಹರಿತ್ಸಗೋತ್ರದ ಹೊಂಗಾಳಿ ಚಿಕ್ಕಣನಾಯಕರ ಪೌತ್ರರಾದ ಸಿಂಗಣ ಜೋಯಿಸರ ಪುತ್ರರಾದಕಾಸೀವಾಸಿ ನಾರಯಣಭಟ್ಟರು, ಶಂಕರಭಟ್ಟರು, ಶಿವಭಟ್ಟರಿಗೆ ತಮ್ಮ ಹಿರಿಯರಿಗೆ ಪುಣ್ಯವಾಗಬೇಕೆಂದು ಕೊಡಗನೂರು ಸೀಮೆಗೆ ಸಲ್ಲುವ ಕೋಲುಕುಂಟೆ ಗ್ರಾಮವನ್ನು ಶಕ 1630 (ಕಿ. ಶ 1708) ಸರ್ವದಾರಿ ಸಂವತ್ಸರದ ಕಾರ್ತಿಕ ಪೌರ್ಣಿಮೆಯಂದು ಸೋಮಪರಾಗ ಪುಣ್ಯಕಾಲದಲ್ಲಿ ದಾನವಾಗಿ ಕೊಟ್ಟಿದ್ದು.

ಗ್ರಾಮದಲ್ಲಿ ಅಭಿವೃದ್ಧಿ ಅಭ್ಯದಯ: ಇಲ್ಲಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ 101 ಮೂರ್ತಿಗಳಿದ್ದು ಇದು ಶತಮಾನದ ಇತಿಹಾಸವಿದೆ. ಗ್ರಾಮದಲ್ಲಿ ಸುಚೇಂದ್ರ ಪ್ರಸಾದ್ ಗ್ರಾಮಾಭ್ಯುದಯ ಸಂಘ ಕಟ್ಟಿ ಅದರ ಮೂಲಕ ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ‌.ಶಾಲಾ ಕಟ್ಟಡ,ಊಳು ತುಂಬಿದ ಕೆರೆ ಅಭಿವೃದ್ಧಿ , ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸ್ಥಳೀಯ ಪಿಡಿಓ, ಜನಪ್ರತಿನಿಧಿಗಳ ಸಹಕಾರದಿಂದ ಗ್ರಾಮವನ್ನು ಕಟ್ಟುವ ಕೆಲಸಗಳನ್ನು ಮಾಡುತ್ತಿದ್ದಾರೆ.ಕೋಲ್ಕುಂಟೆಯನ್ನು ಇನ್ನಷ್ಟು ಉನ್ನತೀಕರಿಸುವುದು ಹೇಗೆ.. ? ಕೌಶಲ್ಯವನ್ನು ಅಭಿವೃದ್ಧಿ ಪಡಿಸುವುದು ಹೇಗೆ ಎಂಬುದನ್ನು  ಗ್ರಾಮಸ್ಥರು ಒಟ್ಟಾಗಿ ಕುಳಿತು ಚರ್ಚಿಸಿದ್ದಾರೆ‌.

PSI Recruitment Scam ಸಚಿವ ಅಶ್ವಥ್‌ ನಾರಾಯಣ್ ಸಹೋದರ ಹಗರಣದಲ್ಲಿ ಭಾಗಿ!

ಯದುವೀರ ಕೃಷ್ಣದತ್ತ ಚಾಮರಾಜ್  ಒಡೆಯರ್ ರಿಂದ ಪರಿಸರ ಕಾಳಜಿ ಜಾಗೃತಿ: ಇವತ್ತು ಕೋಲ್ಕುಂಟೆ ಗ್ರಾಮದಲ್ಲಿ ಶಿಲಾಶಾಸನ ಅನಾವರಣಗೊಳಿಸಿದ್ದೇನೆ.‌ಸುಚೇಂದ್ರ ಪ್ರಸಾದ್ ಮೂರು ವರ್ಷಗಳಿಂದ ಪರಿಚಯ ಆಗಿದ್ದರು. ಗ್ರಾಮಸ್ಥರು ಪರಿಸರ ಕಾಳಜಿ ಇಟ್ಟುಕೊಂಡು ಗ್ರಾಮಸ್ಥರು ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವುದು ನಾವು ಮುಂಬರುವ ಪೀಳಿಗೆಗೆ ಕೆಲಸ ಮಾಡಬೇಕು.ನಗರದಲ್ಲಿ ಕಾಂಕ್ರೀಟ್ ಮಯವಾಗಿದೆ ಉಸಿರಾಟ ಕಷ್ಟವಾಗಿದೆ. ಗ್ರಾಮಗಳನ್ನು ಉಳಿಸಿಕೊಳ್ಳಬೇಕಿದೆ. ಪರಿಸರ ಬೆಳಸೋಣ.. ಗ್ರಾಮಗಳ ದೇವಾಲಯ ಜೀರ್ಣೊದ್ದಾರ ಆಗಬೇಕು. ದೇವಸ್ಥಾನದ ಸುತ್ತಲು ಪ್ಲಾಸ್ಟಿಕ್ ನಮ್ಮ ವಾತವರಣಕ್ಕೆ ಹಾನಿಕಾರಕ.ನಮ್ಮ ಶರೀರದೊಳಗೆ ಪ್ಲಾಸ್ಟಿಕ್ ಇದೆ. ತಿನ್ನುವ ಆಹಾರದಲ್ಲಿ ಪ್ಲಾಸ್ಟಿಕ್ ಇದೆ. ಶಿಲಾಶಾಸನವನ್ನು ಅನಾವರಣ ಮಾಡಿದೆವು... ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರ ಆಸೆ ಆಕಾಂಕ್ಷೆಗಳು ಶಿಲಾಶಾಸನದಲ್ಲಿದೆ. ಬಿ ಎಲ್ ರೈಸ್ ಕರ್ನಾಟಕದಲ್ಲಿನ ಶಿಲಾಶಾಸನಗಳನ್ನು ದಾಖಲಿಸುವ ಕೆಲಸ ಮಾಡಿದೆ.ಇದರ ಪರಂಪರೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಗೊತ್ತಾಗುತ್ತದೆ. ನಮ್ಮ ಮೈಸೂರು ಸಂಸ್ಥಾನಕ್ಕೆ ಕೋಲ್ಕುಂಟೆ ಸೇರುತ್ತದೆ...ನಾನು ಸದಾ ಈ ಭಾಗಕ್ಕೆ ಬರುತ್ತಿರುತ್ತೇನೆ... ಪರಿಸರ  ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸೂಚ್ಯವಾಗಿ ಪರಿಸರ ಇತಿಹಾಸ ಉಳಿಸಿ ಎಂದು ಕರೆನೀಡಿದರು‌.

ಯದುವೀರ ಒಡೆಯರ್ ಗೆ ನಮೋ ನಮೋ ಎಂದ ಗ್ರಾಮಸ್ಥರು: ಮೈಸೂರು ಅರಸು ವಂಶಸ್ಥರು ಕೋಲ್ಕುಂಟೆ ಗ್ರಾಮಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿ ಅಕ್ಕಪಕ್ಕದ ಗ್ರಾಮಗಳ‌ ಜನತೆ, ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿಗಳು , ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಕೋಲ್ಕುಂಟೆ ಗೆ ಆಗಮಿಸಿದ್ದರು. ರಾಜ ದರ್ಬಾರಿನಲ್ಲಿ ಅಲ್ಲಿನ ಸಿಬ್ಬಂದಿಗಳು ಧರಿಸುವ   ಪೇಟಾ, ಬಿಳಿ ವಸ್ತ್ರ ಸಂಹಿತೆಯನ್ನು  ಗ್ರಾಮದ‌ ಮುಖಂಡರು ತೊಟ್ಟಿದ್ದರು. ರಾಜ ಮರ್ಯಾದೆಯೊಂದಿಗೆ ಇಡೀ ಗ್ರಾಮ‌ ಒಡೆಯರ್‌ ನೋಡಿ ಅವರ ಜೊತೆ ಪೋಟೊ   ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಒಡೆಯರ್ ಬಂದ ಸಂತಸಕ್ಕೆ ಇಡೀ ಗ್ರಾಮಸ್ಥರಿಗೆ ಪಾಯಸ‌ ಅನ್ನ ಸಾಂಬಾರಿನ  ಸಾಮೂಹಿಕ ಬೋಜನ ವ್ಯವಸ್ಥೆ ಮಾಡಲಾಗಿತ್ತು.

click me!