ಮೈಸೂರಿನ ಜನವಸತಿ ಪ್ರದೇಶದಲ್ಲಿರವ ಮನೆಯಲ್ಲಿಯೇ 9 ಬಗೆಯ 20ಕ್ಕೂ ಅಧಿಕ ವಿಷಕಾರಿ ಹಾವನ್ನು ಅನಧಿಕೃತವಾಗಿ ಸಾಕಣೆ ಮಾಡಿದ್ದು, ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮೈಸೂರು (ಸೆ.27): ನಮ್ಮ ಮನೆ ಪಕ್ಕದಲ್ಲಿ ವಾಸವಾಗಿರುವವರ ಬಗ್ಗೆ ನಾವು ಅಲ್ಪ ಸ್ವಲ್ಪವಾದರೂ ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಮನೆಯ ಪಕ್ಕದಲ್ಲಿದ್ದರೂ ಅವರ ಬಗ್ಗೆ ತಿಳಿದುಕೊಳ್ಳದಿದ್ದರೆ ಹೀಗೆ ಬೆಚ್ಚಿಬೀಳಬೇಕಾಗುತ್ತದೆ. ಮೈಸೂರಿನಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿಯೇ 9 ವಿವಿಧ ಜಾತಿಯ ಹಾವುಗಳನ್ನು ಸಾಕಣೆ ಮಾಡಿಕೊಂಡಿದ್ದಾರೆ. ಸಿಐಡಿ ಇಲಾಖೆಯ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾಡಿದ ನಂತರ ಹಾವು ಸಾಕಣೆಯ ವಿಚಾರ ನೆರೆಹೊರೆಯವರಿಗೆ ತಿಳಿದುಬಂದಿದೆ.
ಹೌದು, ಮನೆಯಲ್ಲಿಯೇ ಯಾವುದೇ ಸುರಕಷತೆಯಿಲ್ಲದೇ ಅಕ್ರಮವಾಗಿ ಮನೆಯಲ್ಲಿ ವಿವಿಧ 9 ಬಗೆಯ ಹಾವುಗಳ ಸಂಗ್ರಹ ಹಿನ್ನೆಲೆಯಲ್ಲಿ ವ್ಯಕ್ತಿಯ ಮನೆ ಮೇಲೆ ಸಿಐಡಿ ಮೈಸೂರಿನ ಫಾರೆಸ್ಟ್ ಸೆಲ್ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಈ ವೇಳೆ ಸರ್ಕಾರ ಹಾಗೂ ಅರಣಯ ಇಲಾಖೆಯ ಯಾವುದೇ ಅನುಮತಿಯೂ ಇಲ್ಲದಂತೆ 16ಕ್ಕೂ ಅಧಿಕ ವಿಷಕಾರಿ ಹಾಗೂ ವಿಷಕಾರಿಯಲ್ಲದ ಒಂಭತ್ತು ಜಾತಿಯ ಹಾವುಗಳನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದನು. ಹೀಗೆ ಹಾವು ಸಾಕಿಕೊಂಡಿದ್ದ ವ್ಯಕ್ತಿಯನ್ನು ಸಂದೀಪ್ ಅಲಿಯಾಸ್ ದೀಪು ಎಂದು ಗುರುತಿಸಲಾಗಿದೆ.
undefined
ರಾಮನಗರ ಚುನಾವಣಾ ಸಿಬ್ಬಂದಿಯ ಕಾರು ಅಡ್ಡಗಟ್ಟಿ ವೋಟಿಂಗ್ ಮಿಷನ್ ಕದ್ದೊಯ್ದ ದುಷ್ಕರ್ಮಿಗಳು
ಅಕ್ರಮವಾಗಿ ಹಾವು ಸಾಕಣೆ ಮಾಡಿದ್ದ ಸಂದೀಪನನ್ನು ವಶಕ್ಕೆ ಪಡೆದ ಅಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಮೈಸೂರಿನಲ್ಲಿ ನಿವಾಸದಲ್ಲಿ ವಿವಿಧ 9 ಬಗೆಯ ಹಾವುಗಳ ಸಂಗ್ರಹದ ಆರೋಪದಡಿ ಈಗ ಜೈಲು ಪಾಲಾಗಿದ್ದಾನೆ. ಇನ್ನು ಮನೆಯಲ್ಲಿದ್ದ ಹಾವುಗಳನ್ನು ಪರಿಶೀಲನೆ ಮಾಡಿದಾಗ 4 ನಾಗರಹಾವು, 2 ತೋಳದ ಹಾವು, 2 ಕಟ್ಟುಹಾವು, 1 ಕುಕ್ರಿ ಹಾವು, 2 ಮಂಡಲದ ಹಾವು, 2 ಕೆರೆ ಹಾವು, 1 ಕಿಲ್ಬಾಕ್ ಹಾವು ಹಾಗೂ 3 ಮಣ್ಣುಮುಕ್ಕ ಹಾವುಗಳ ಸಂಗ್ರಹ ಮಾಡಿರುವುದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಏಜೆಂಟ್‌ಗಳು: ಬಿಎಸ್‌ವೈ ವಾಗ್ದಾಳಿ
ಜನವಸತಿ ಹೆಚ್ಚಾಗಿರುವಂತಹ ಪ್ರದೇಶದಲ್ಲಿ ಅದರಲ್ಲಿಯೂ ವಸತಿ ಮನೆಯಲ್ಲಿ ವಿಷಕಾರಿ ಹಾವುಗಳನ್ನು ಸಾಕಣೆ ಮಾಡಿರುವ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬಂಧಿತನ ಮನೆಯಲ್ಲಿ ಹಾವುಗಳ ವಿಷವನ್ನು ತೆಗೆಯುವ ಘಟಕ ನಿರ್ಮಾಣ ಮಾಡಿಕೊಂಡಿರುವುದು ಕೂಡ ಗೊತ್ತಾಗಿದೆ. ಹಾವಿನ ವಿಷ ತೆಗೆಯುವ ಘಟಕವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧಿತನ ಮೇಲೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ವಿವಿಧ ನಿಭಂದನೆಗಳಡಿ ಪ್ರಕರಣ ದಾಖಲು ಮಾಡಲಾಗಿದೆ.