ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿ ಇಲ್ಲದಂತಾಗಿದೆ: ಜಿಟಿ ದೇವೇಗೌಡ

By Kannadaprabha News  |  First Published Sep 27, 2023, 11:14 AM IST

ಸ್ಟಾಲಿನ್ ಜೊತೆ ಮಾತಾಡಿಕೊಂಡು ಸರ್ಕಾರ ಮೊದಲೇ ನೀರು ಬಿಟ್ಟಿದೆ, ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ನವರು ತೇಲ್ತಿದ್ದಾರೆ, ಜೆಡಿಎಸ್ ಮತ್ತು ಬಿಜೆಪಿಯವರು ವೈರಿಗಳಾಗಿಯೇ ಇರಬೇಕು ಅಂತ ಕಾಂಗ್ರೆಸ್ ಆಸೆ ಪಟ್ಟಿತ್ತು. ಆದ್ರೆ ಮೈತ್ರಿಯಿಂದ ಇದೀಗ ಅವರಿಗೆ ಆತಂಕ ಎದುರಾಗಿದೆ: ಜಿಟಿ ದೇವೇಗೌಡ 


ಕಲಬುರಗಿ(ಸೆ.27):  ನೀರು ಇಲ್ಲದೇ ಇದ್ರೆ ಕುಡಿಯಲು ನೀರು ಸಿಗುತ್ತಾ, ಆಗ ಸರ್ಕಾರ ಇರುತ್ತಾ? ಎಂದು ಖಾರವಾಗಿ ಪ್ರಶ್ನಿಸಿರುವ ಜೆಡಿಎಸ್‌ ಮುಖಂಡ ಜಿಟಿ ದೇವೇಗೌಡ ಈ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ. ಕಲಬುರಗಿಯಲ್ಲಿ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ತಮ್ಮ ವಾದ ಮಂಡಿಸಲು ಸರ್ಕಾರ ವಿಫಲವಾಗಿದೆ, ಹವಾಮಾನ ಇಲಾಖೆ ವರದಿ ನೀಡಿದಾಗಲೇ ಪ್ರಾಧಿಕಾರದ ಮುಂದೆ ಸರ್ಕಾರ ಹೋಗಬೇಕಿತ್ತು. ಸಂಕಷ್ಟ ಸೂತ್ರ ರೂಪಿಸುವಂತೆ ಮನವಿ ಮಾಡಬೇಕಿತ್ತು. ಯಾವ ಆದೇಶ ಇಲ್ಲದೇ ಇದ್ದಾಗಲೇ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ, ಸ್ಟಾಲೀನ್ ಜೊತೆ ಸೇರಿ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಲು ನೀರು ಬಿಟ್ಟಿದ್ದಾರೆಂದು ದೂರಿದರು.

Latest Videos

undefined

ಕಾಂಗ್ರೆಸ್‌ ಸರ್ಕಾರ ಡಿಎಂಕೆಯ ಬಿ ಟೀಂ: ಮಾಜಿ ಸಿಎಂ ಕುಮಾರಸ್ವಾಮಿ

ಸ್ಟಾಲಿನ್ ಜೊತೆ ಮಾತಾಡಿಕೊಂಡು ಸರ್ಕಾರ ಮೊದಲೇ ನೀರು ಬಿಟ್ಟಿದೆ, ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ನವರು ತೇಲ್ತಿದ್ದಾರೆ, ಜೆಡಿಎಸ್ ಮತ್ತು ಬಿಜೆಪಿಯವರು ವೈರಿಗಳಾಗಿಯೇ ಇರಬೇಕು ಅಂತ ಕಾಂಗ್ರೆಸ್ ಆಸೆ ಪಟ್ಟಿತ್ತು. ಆದ್ರೆ ಮೈತ್ರಿಯಿಂದ ಇದೀಗ ಅವರಿಗೆ ಆತಂಕ ಎದುರಾಗಿದೆ ಎಂದು ಹೇಳಿದ್ದಾರೆ.

ಸಮರ್ಥ ಮುಖ್ಯಮಂತ್ರಿ ಅನಿಸಿಕೊಂಡಿದ್ದ ಸಿದ್ದರಾಮಯ್ಯ, ವಿಫಲ ಮುಖ್ಯಮಂತ್ರಿ ಅನಿಸಿಕೊಂಡಿದ್ದಾರೆ. ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ಗಮನಿಸಿದರೆ ಈ ಸರ್ಕಾರದ ವಿರುದ್ಧ ಎಲ್ಲರು ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆಂದರು.
ಶಾಂತಿಯುತ ಪ್ರತಿಭಟನೆ ಮಾಡಿದ್ರು ಸಹ 144 ಸೆಕ್ಷನ್ ಹಾಕಿದ್ದಾರೆ, ಇದೊಂದು ಅವೈಜ್ಞಾನಿಕ ಸರ್ಕಾರ, ಹೋರಾಟ ಮಾಡುತ್ತಿರೋ ಕನ್ನಡಿಗರನ್ನೇ ಬಂಧಿಸುತ್ತಿದ್ದಾರೆ, ದೇವೇಗೌಡರನ್ನು ಸಿದ್ದರಾಮಯ್ಯ ಬಂದು ಬೇಟಿಯಾಗಿಲ್ಲಾ, ಕಾವೇರಿ ವಿಚಾರವಾಗಿ ಬಂದು ಮಾತುಕತೆ ನಡೆಸಿಲ್ಲಾ ಎಂದೂ ಜಿಟಿ ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.

click me!