Mysuru: ಕೊನೆಗೂ ಪತ್ತೆಯಾಯ್ತು ನಾಪತ್ತೆಯಾಗಿದ್ದ ಬೆಕ್ಕು: ಬಹುಮಾನದ ಹಣ ಪಡೆಯಲು ನಿರಾಕರಣೆ

By Govindaraj SFirst Published Aug 6, 2022, 5:44 PM IST
Highlights

ಅದು ಮುದ್ದಾದ ಬೆಕ್ಕು. ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಒಂದು ಕ್ಷಣ ಕಾಣದಿದ್ದರೂ ಮಾಲೀಕನಿಗೆ ಏನೋ ಕಳೆದುಕೊಂಡ ಅನುಭವ. ಅಷ್ಟು ಪ್ರೀತಿಯಿಂದ ಸಾಕಿದ್ದ ಬೆಕ್ಕು ಅದೊಂದು ದಿನ ಇದ್ದಕ್ಕಿದ್ದಂತೆ ಕಣ್ಮೆರೆಯಾಗಿತ್ತು. ಮಾಲೀಕರು ಬೆಕ್ಕನ್ನ ಮರಳಿ ಪಡೆಯಲು ಬಹುಮಾನವನ್ನ ಸಹ ಘೋಷಣೆ ಮಾಡಿದರು. 

ಮೈಸೂರು (ಆ.06): ಅದು ಮುದ್ದಾದ ಬೆಕ್ಕು. ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಒಂದು ಕ್ಷಣ ಕಾಣದಿದ್ದರೂ ಮಾಲೀಕನಿಗೆ ಏನೋ ಕಳೆದುಕೊಂಡ ಅನುಭವ. ಅಷ್ಟು ಪ್ರೀತಿಯಿಂದ ಸಾಕಿದ್ದ ಬೆಕ್ಕು ಅದೊಂದು ದಿನ ಇದ್ದಕ್ಕಿದ್ದಂತೆ ಕಣ್ಮೆರೆಯಾಗಿತ್ತು. ಮಾಲೀಕರು ಬೆಕ್ಕನ್ನ ಮರಳಿ ಪಡೆಯಲು ಬಹುಮಾನವನ್ನ ಸಹ ಘೋಷಣೆ ಮಾಡಿದರು. ಮುಂದೆನಾಯ್ತು ಅನ್ನೋದೇ ಇಂಟ್ರಸ್ಟಿಂಗ್ ಕ್ಯಾಟ್ ಮಿಸಿಂಗ್ ಕಹಾನಿ. ಪಿಳಿ ಪಿಳಿ ಕಣ್ಣು ಬಿಡ್ತಾ ಆಟವಾಡುತ್ತಿರುವ ಬೆಕ್ಕಿನ ಹೆಸರು ಸೃಷ್ಟಿ. ಮೈಸೂರಿನ ಕೆ.ಆರ್ ವೃತ್ತದಲ್ಲಿರುವ ಬಾಟಾ ಶೋರಂನ ಮ್ಯಾನೇಜರ್ ನಾಚಪ್ಪ ಇದರ ಮಾಲೀಕರು. ಸೃಷ್ಟಿ ಬೆಕ್ಕನ್ನ‌ ಕಂಡ್ರೆ ನಾಚಪ್ಪ ಅವರಿಗೆ ವಿಶೇಷ ಪ್ರೀತಿ. ಶೋರಂ ಸಿಬ್ಬಂದಿ ಹಾಗೂ ಅಕ್ಕ ಪಕ್ಕದ ಅಂಗಡಿಯರಿಗೂ ಸೃಷ್ಟಿ ಅಂದ್ರೆ ವಿಶೇಷ ಅಕ್ಕರೆ. 

ಎಲ್ಲರ ಜೊತೆ ಲವ ಲವಕೆಯಿಂದ ಆಟವಾಡಿಕೊಂಡಿದ್ದ ಸೃಷ್ಟಿ ಬೆಕ್ಕು, ಎರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಬೆಕ್ಕನ್ನ ಕಳೆದುಕೊಂಡು ಕಂಗಾಲಾದ ನಾಚಪ್ಪ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೆ.ಆರ್ ವೃತ್ತಬಳಿಯಿರುವ ಅಂಗಡಿಗಳ ಮುಂದೆ ಪೋಸ್ಟರ್ ಅಂಟಿಸಿ ಬೆಕ್ಕು ಹುಡುಕಿ ಕೊಟ್ಟವರಿಗೆ 5 ಸಾವಿರ ಬಹುಮಾನ ನೀಡುವುದಾಗಿ ಪೋಸ್ಟ್ ಹಾಕಿದರು. ಸಾಮಾಜಿಕ ಜಾಲಾತಾಣದ ಪೋಸ್ಟ್ ನೋಡಿದ ಮಂಡ್ಯದ ಜಿತೇಂದ್ರ ಎಂಬುವವರು ಸೃಷ್ಟಿ ಬೆಕ್ಕನ್ನ ತಂದು ನಾಚಪ್ಪ ಅವರಿಗೆ ನೀಡಿದ್ದಾರೆ. ಅಸಲಿಗೆ ಎಲ್ಲರೂ ಸೃಷ್ಟಿ ಬೆಕ್ಕು ನಾಪತ್ತೆಯಾಗಿದೆ ಎಂದೇ ಭಾವಿಸಿದರು. ಆದರೆ ಆ ಬೆಕ್ಕನ್ನು ಯುವಕನೊಬ್ಬ ಕಳ್ಳತನ ಮಾಡಿದ್ದ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. 

ಸೋಷಿಯಲ್ ಮೀಡಿಯಾ ಟ್ರಾಲ್ ನೆನೆದು ಕಣ್ಣೀರು ಹಾಕಿದ ಸಾ.ರಾ.ಮಹೇಶ್

ಎರಡು ದಿನಗಳ ಅಂಗಡಿ ಬಳಿ ಬಂದ ಯುವಕ ಬೆಕ್ಕನ್ನ ಪುಸಲಾಯಿಸಿ ತನ್ನ ತೆಕ್ಕೆಗೆ ತೆಗೆದುಕೊಂಡು ಅಲ್ಲಿಂದ ಜಾಗ ಖಾಲಿಮಾಡಿದ್ದ. ಇದಾದ ನಂತರ ಆತ ಬೆಕ್ಕನ್ನು ನಗರ ಬಸ್ ನಿಲ್ದಾಣ ಬಳಿ ಬಿಟ್ಟು ಹೋಗಿದ್ದ. ಅಲ್ಲೇ ಇದ್ದ ಜೀತೆಂದ್ರ ಬೆಕ್ಕಿನ ಸೌಂದರ್ಯ ನೋಡಿ ತಾವೇ ಸಾಕಿಕೊಳ್ಳಲು ಮಂಡ್ಯದ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ಪೋಸ್ಟ್ ನೋಡಿ ಬೆಕ್ಕನ್ನು ತಂದು ಮಾಲೀಕ ನಾಚಪ್ಪ ಅವರಿಗೆ ನೀಡಿದ್ದಾರೆ. ಕಾಣೆಯಾಗಿರುವ ಬೆಕ್ಕು ಸಿಕ್ಕ ವಿಚಾರ ಅಕ್ಕ ಪಕ್ಕದ ಅಂಗಡಿ ಮಾಲೀಕರಿಗೆ ಖುಷಿ ಕೊಟ್ಟಿದೆ. ಒಟ್ಟಾರೆ ಜಿತೇಂದ್ರ 5 ಸಾವಿರ ನಗದು ಬಹುಮಾನ ಪಡೆಯಲು ನಿರಾಕರಿಸಿದ್ದಾರೆ. ನಾಚಪ್ಪ ತಮ್ಮ ಪ್ರೀತಿಯ ಬೆಕ್ಕು ಸಿಕ್ಕ ಖುಷಿಗೆ ಉಡುಗೊರೆ ನೀಡಿದ್ದಾರೆ. ಇನ್ನೂ ಸೃಷ್ಟಿ ಬೆಕ್ಕು ಆರೋಗ್ಯವಾಗಿದ್ದು ಮತ್ತೆ ಮರಳಿ ಗೂಡು ಸೇರಿದೆ.

ಹರಸಾಹಸಪಟ್ಟು ಬೆಕ್ಕು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ: ಮೂರು ಮಹಡಿಯ ಕಟ್ಟಡದ ಬಾಲ್ಕನಿಯ ಕಿಟಕಿಗೆ ನೆಗೆಯಲಾಗದೆ ಪ್ರಾಣಭಯದಿಂದ ಒದ್ದಾಡುತ್ತಿದ್ದ ಬೆಕ್ಕನ್ನು ಅಗ್ನಿಶಾಮ ಹಾಗೂ ಪೊಲೀಸ್‌ ಸಿಬ್ಬಂದಿ ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ನಗರದ ಖಡೇಬಜಾರ ರಸ್ತೆಯಲ್ಲಿರುವ ಕಟ್ಟಡದ ಬಾಲ್ಕನಿಯಲ್ಲಿ ಸಿಲುಕಿ ನೇತಾಡುತ್ತಿದ್ದ ಬೆಕ್ಕನ್ನು ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಬಂದು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಟ್ಟಡದ ಮೂರಂತಸ್ತಿನ ತುದಿಗೆ ಇಳಿದಿದ್ದ ಬೆಕ್ಕು ಮರಳಿ ಬಾಲ್ಕನಿ ಕಿಟಕಿಗೆ ನೆಗೆಯಲಾಗದೆ ಪ್ರಾಣಭಯದಲ್ಲಿ ಒದ್ದಾಡುತ್ತಿತ್ತು. ಇದನ್ನು ಕಂಡು, ಬೆಕ್ಕನ್ನು ರಕ್ಷಿಸುವಂತೆ ಪಾಲಕರ ಬಳಿ ಮಕ್ಕಳು ಹಠ ಹಿಡಿದಿದ್ದರು.

Mysuru: ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ಅಧಿಕಾರಿಗಳಿಂದ ಕಿರುಕುಳ

ಈ ವೇಳೆ ಪೋಷಕರು ಬೆಕ್ಕನ್ನು ರಕ್ಷಣೆ ಮಾಡಲು ಹರಸಾಹಸಪಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗದಿದ್ದಾಗ ಅನಿಮಲ್ ವೆಲ್‌ಫೇರ್‌ ಅಸೋಸಿಯೇಷನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ತಂಡದವರ ಪ್ರಯತ್ನವೂ ಫಲ ನೀಡಲಿಲ್ಲ. ಆ ಬಳಿಕ ಅಗ್ನಿಶಾಮಕ, ಪೊಲೀಸ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವಾಹನ, ಏಣಿಯ ಸಹಾಯದಿಂದ ಬಾಲ್ಕನಿ ಏರಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ದೃಶ್ಯವನ್ನು ನೋಡಿ ಸುತ್ತ ನೆರೆದಿದ್ದ ಜನರು ಚಪ್ಪಾಳೆ ತಟ್ಟಿಖುಷಿಪಡುವುದರ ಜತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

click me!