
ಕೆ.ಆರ್ ನಗರ (ಜೂ.16): ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಶಾಸಕ ಸಾ ರಾ ಮಹೇಶ್ ಅವರ ವಿರುದ್ದ ಸುಳ್ಳು ಆರೋಪ ಮಾಡುವುದರ ಜೊತೆಗೆ ಅವರನ್ನು ಏಕ ವಚನದಲ್ಲಿ ಸಂಬೋಧನೆ ಮಾಡಿರುವ ಹಿಂದಿನ ಡಿಸಿ ಸಿಂಧೂರಿ ಅವರನ್ನು ಕೂಡಲೆ ಸೇವೆಯಿಂದ ಅಮಾನತು ಮಾಡಬೇಕು ಎಂದು ಪುರಸಭೆ ಸದಸ್ಯ ಉಮೇಶ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದೆಡೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಪಮಾನ ಮತ್ತು ಭ್ರಷ್ಟಾಚಾರ ಮಾಡುವುದನ್ನು ಚಾಳಿ ಮಾಡಿಕೊಂಡಿರುವ ಉಣತಹ ಅಧಿಕಾರಿಯ ವಿರುದ್ಧ ಸರ್ಕಾರ ಈವರೆಗೆ ಯಾಕೆ ಶಿಸ್ತುಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ರೋಹಿಣಿ ಸಿಂಧೂರಿಯಿಂದ ಸರ್ಕಾರಕ್ಕೆ ಸುಳ್ಳು ವರದಿ ...
ಸಚಿವರು ಕೂಡಲೇ ಸಿಎಂಗೆ ವರದಿ ನೀಡಿ ಸರ್ಕಾರದ ನಿಯಮಾವಳಿ ಉಲ್ಲಂಘಿಸಿದ್ದನ್ನು ಮನವರಿಕೆ ಮಾಡಿ ಸೇವೆಯಿಂದ ಅಮಾನತು ಮಾಡಿಸಬೇಕೆಂದು ಒತ್ತಾಯಿಸಿದರು.