Latest Videos

ಮೈಸೂರು : ಜಿಟಿಡಿ ವಿರುದ್ಧ ದಲಿತ ಮುಖಂಡರ ಸಭೆ

By Kannadaprabha NewsFirst Published Feb 24, 2024, 10:18 AM IST
Highlights

ಸಹಕಾರ ಕ್ಷೇತ್ರದಲ್ಲಿನ ಮೀಸಲಾತಿ ವಿರುದ್ಧ ಮಾತನಾಡಿರುವ ಶಾಸಕ ಜಿ.ಟಿ. ದೇವೇಗೌಡರ ದಲಿತ ಮತ್ತು ಮೀಸಲಾತಿ ವಿರೋಧಿ ನೀತಿ ಖಂಡಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಪದಾಧಿಕಾರಿಗಳು ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸಭೆ ನಡೆಸಿದರು.

 ಮೈಸೂರು :  ಸಹಕಾರ ಕ್ಷೇತ್ರದಲ್ಲಿನ ಮೀಸಲಾತಿ ವಿರುದ್ಧ ಮಾತನಾಡಿರುವ ಶಾಸಕ ಜಿ.ಟಿ. ದೇವೇಗೌಡರ ದಲಿತ ಮತ್ತು ಮೀಸಲಾತಿ ವಿರೋಧಿ ನೀತಿ ಖಂಡಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಪದಾಧಿಕಾರಿಗಳು ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸಭೆ ನಡೆಸಿದರು.

ಸಮಿತಿ ಅಧ್ಯಕ್ಷ ಎನ್‌. ಭಾಸ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೋಷೆಗಳ ಬಗ್ಗೆ ಚರ್ಚಿಸಿ, ಎಲ್ಲರ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಯಿತು.

ಸಭೆಯಲ್ಲಿ ಪ.ಜಾತಿ, ಪ.ಪಂಗಡ ವಕೀಲರ ಸಂಘದ ಅಧ್ಯಕ್ಷ ತಿಮ್ಮಯ್ಯ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪನಾಯಕ, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಜಿ.ಎಂ. ಅಂದಾಜಿ, ಧನಗಳ್ಳಿ ನಟರಾಜು, ನಾಗನಹಳ್ಳಿ ಶಂಕರ್‌, ಬ್ಲಾಕ್‌ ಕಾಂಗ್ರೆಸ್‌ಸಮಿತಿ ಮಾಜಿ ಅಧ್ಯಕ್ಷ ಗೋಪಾಲಪುರ ಬಸವಣ್ಣ, ಮಾರ್ಬಳ್ಳಿ ಮಹೇಶ್‌, ನಗರ ಪಾಲಿಕೆ ಮಾಜಿ ಸದಸ್ಯರಾದ ಆರ್‌. ಸುನಂದಕುಮಾರ್‌, ನಗರ ಕಾಂಗ್ರೆಸ್‌ಪ.ಜಾತಿ ಘಟಕದ ಅಧ್ಯಕ್ಷ ರಮೇಶ್‌, ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಗೋವಿಂದರಾಜು, ದಲಿತ ಮುಖಂಡ ವೀರರಾಜು, ಚಂದ್ರು, ಸಣ್ಣಯ್ಯ ನಾಡನಹಳ್ಳಿ, ಸತ್ಯನಾರಾಯಣ, ಅಶೋಕಪುರಂ ನಾಗರಾಜು, ಕುಮಾರಸ್ವಾಮಿ ಮೊದಲಾದವರು ಇದ್ದರು.

ರಹಸ್ಯ ಮಾತುಕತೆ

ಬೆಂಗಳೂರು (ನ.18): ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರ ನಡುವೆ ವಿದ್ಯುತ್‌ ಕಳವು, ಸೂಪರ್‌ ಸಿಎಂ ಸೇರಿ ಹಲವು ವಿಚಾರಗಳ ಬಗ್ಗೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿರುವ ಈ ಹಂತದಲ್ಲೇ ಜೆಡಿಎಸ್‌ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌ ದೊಡ್ಡ ಪ್ರಮಾಣದಲ್ಲಿ ಜೆಡಿಎಸ್‌ ಶಾಸಕರನ್ನು ಸೆಳೆಯಲು ವೇದಿಕೆ ಸಜ್ಜುಗೊಳಿಸುತ್ತಿದ್ದು, ಸರಿಸುಮಾರು 10 ಮಂದಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲೇ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷರೂ ಆದ ಜಿ.ಟಿ. ದೇವೇಗೌಡ ಅವರನ್ನು ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿದ್ದು ಸುಮಾರು ಎರಡು ತಾಸು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಕಾಂಗ್ರೆಸ್‌ ವಿರುದ್ಧ ಒಗ್ಗೂಡಿ ಹೋರಾಟ ನಡೆಸಲು ನಿರ್ಧರಿಸಿರುವ ಕಾರಣ ಜೆಡಿಎಸ್‌ನ ಶಕ್ತಿಯನ್ನು ಕುಂದಿಸಲು ಈ ಆಪರೇಷನ್‌ ಹಸ್ತಕ್ಕೆ ವೇದಿಕೆ ಸಿದ್ಧತೆಗೊಳಿಸಲಾಗುತ್ತಿದೆ ಎನ್ನಲಾಗಿದೆ. 

ಬರ ಪರಿಹಾರ ನೀಡದಿದ್ದರೆ ಅಧಿವೇಶನದಲ್ಲಿ ಹೋರಾಟ: ಶಾಸಕ ಜಿ.ಟಿ.ದೇವೇಗೌಡ

ಬಿಜೆಪಿ ಜತೆಗಿನ ಮೈತ್ರಿ ವಿರೋಧಿಸಿ ಹಲವು ಮಂದಿ ಜೆಡಿಎಸ್‌ ಮಾಜಿ ಶಾಸಕರು ಈಗಾಗಲೇ ಕಾಂಗ್ರೆಸ್‌ ತೆಕ್ಕೆಗೆ ಬಂದಿದ್ದು, ಜೆಡಿಎಸ್‌ ಹಾಲಿ ಶಾಸಕರು ಸಹ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ಆದರೆ, ಸೂಕ್ತ ಸಂಖ್ಯೆಗಾಗಿ ಇನ್ನು ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಬಯಸಿದಷ್ಟು ಶಾಸಕರು ಪಕ್ಷ ಸೇರಲು ಸಿದ್ಧರಾದರೆ, ಕೂಡಲೇ ಪಕ್ಷ ಸೇರ್ಪಡೆ ಅಥವಾ ಜೆಡಿಎಸ್‌ನಿಂದ ಪ್ರತ್ಯೇಕಗೊಂಡು ಗುಂಪು ರಚಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎನ್ನುತ್ತವೆ ಮೂಲಗಳು.

click me!