ಮೈಸೂರಿನಲ್ಲಿ ಮತ್ತೆ ರಂಗೇರಿದೆ ಚುನಾವಣಾ ಅಖಾಡ : ಸಾ ರಾ ಮಹೇಶ್ ಮಹತ್ವವ ಮೀಟಿಂಗ್

By Kannadaprabha NewsFirst Published Dec 27, 2019, 12:40 PM IST
Highlights

ಮೖಸೂರಿನ ಹುಣಸೂರು ಕ್ಷೇತ್ರದಲ್ಲಿ ಕೆಲ ದಿನಗಳ ಹಿಂದಷ್ಟೇ ಚುನಾವಣೆಯೊಂದು ನಡೆದಿದ್ದು, ಇದೀಗ ಇಲ್ಲಿನ ಮುಖಂಡರು ಮತ್ತೊಂದು ಚುಣಾವಣೆಗೆ ಸಜ್ಜಾಗುತ್ತಿದ್ದು, ಈ ನಿಟ್ಟಿನಲ್ಲಿ ಮಹತ್ವದ ಸಭೆಗಳನ್ನು ನಡೆಸಲಾಗುತ್ತಿದೆ. 

ಮೈಸೂರು [ಡಿ.27]: ಮೈಸೂರಿನಲ್ಲಿ ಕೆಲ ದಿನಗಳ ಹಿಂದಷ್ಟೇ ಚುನಾವಣೆಯೊಂದು ನಡೆದಿದ್ದು, ಇದೀಗ ಮತ್ತೊಂದು ಚುನಾವಣೆಗೆ ಇಲ್ಲಿನ ಮುಖಂಡರು ಸಜ್ಜಾಗುತ್ತಿದ್ದಾರೆ. 

ಮೇಯರ್ ಉಪ ಮೇಯರ್ ಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.  ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಜೆಡಿಎಸ್ ಸಾ ರಾ ಮಹೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯರು ಪಾಲ್ಗೊಂಡಿದ್ದಾರೆ. 

ಈ ಸಭೆಯಲ್ಲಿ ಜೆಡಿಎಸ್ ಸದಸ್ಯರಿಗೆ ಸಾ ರಾ ಮಹೇಶ್ ಕಿವಿಮಾತು ಹೇಳಿದ್ದು, ಎಲ್ಲರೂ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮನವಿ ಮಾಡಲಾಗಿದೆ. 

ಜನವರಿ ಅಂತ್ಯಕ್ಕೂ ಸಚಿವ ಸಂಪುಟ ವಿಸ್ತರಣೆ ಇಲ್ಲ?..

ಈ ಬಾರಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಿಂದುಳಿದ ವರ್ಗದ ಮಹಿಳೆಗೆ ಮೇಯರ್ ಸ್ಥಾನದ ಮೀಸಲಾತಿ ಇದ್ದು, ಜೆಡಿಎಸ್ ನಲ್ಲಿ ನಾಲ್ವರು ಆಕಾಂಕ್ಷಿಗಳಿದ್ದಾರೆ. 

ಜೆಡಿಎಸ್ ನಿಂದ ನಿರ್ಮಲಾ, ಹರೀಶ್, ತಸ್ಲೀಮ್, ರೇಷ್ಮಾ ಬಾನು,  ನಮ್ರತಾ ರಮೇಶ್ ಆಕಾಂಕ್ಷಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಯಾರನ್ನೇ ಆಯ್ಕೆ ಮಾಡಿದರೂ ಕೂಡ ಪಕ್ಷದಲ್ಲಿ ನಿಷ್ಠೆ ಉಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. 

ಜೆಡಿಎಸ್ ಸಭೆಯಲ್ಲಿ ಮುಖಂಡರಾದ ಅಬ್ದುಲ್ಲಾ, ಕೆ.ವಿ ಮಲ್ಲೇಶ್  ಆರ್.ಲಿಂಗಪ್ಪ, ಎಂ.ಜಿ.ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು. 

click me!