ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯವು ವನ್ಯಜೀವಿ ಮತ್ತು ಅವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವು ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಿದೆ.
ಮೈಸೂರು : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯವು ವನ್ಯಜೀವಿ ಮತ್ತು ಅವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವು ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಿದೆ.
ಮೈಸೂರು ಮೃಗಾಲಯವು ಛಾಯಾಚಿತ್ರ ಪ್ರದರ್ಶನ, ಪ್ರಬಂಧ ರಚನಾ ಸ್ಪರ್ಧೆ, ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು, ಎಲೊಕ್ಯೂಷನ್ಸ್ಪರ್ಧೆ ಆಯೋಜಿಸುತ್ತ ಬಂದಿದೆ. ಮೃಗಾಲಯದ ಒಂದು ಕಾರ್ಯೋದ್ದೇಶ ಮತ್ತು ಸಂರಕ್ಷಣಾ ಶಿಕ್ಷಣದ ಪ್ರಯತ್ನವಾಗಿ 69ನೇ ವರ್ಷದ ಸಪ್ತಾಹವನ್ನು ಅ. 2 ರಿಂದ 8 ರವರೆಗೆ ಆಯೋಜಿಸುತ್ತಿದೆ.
undefined
ಅ. 2 ರಂದು ಬೆಳಗ್ಗೆ 7.30ಕ್ಕೆ ವನ್ಯಜೀವಿ ಸಪ್ತಾಹದ ಮಹತ್ವ ಸಾರಲು ಕಾಲ್ನಡಿಗೆಯನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೃಗಾಲಯದವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡುವರು.
ವನ್ಯಜೀವಿ ಛಾಯಾಚಿತ್ರ ಹಾಗೂ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವು ಅಂದು ನಡೆಯಲಿದೆ. ಮೃಗಾಲಯವು ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನ ಕಾರ್ಯಕ್ರಮದಡಿ 5 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು 3 ಪ್ರವರ್ಗಗಳಲ್ಲಿ ಏರ್ಪಡಿಸಿತ್ತು. ಭಾರತದ ದೊಡ್ಡ ಬೆಕ್ಕುಗಳನ್ನು ಉಳಿಸಿ, ದೊಡ್ಡಬೆಕ್ಕುಗಳನ್ನು ಹಾಗೂ ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸಿ ಹಾಗೂ ಘರ್ಜನೆ ಮೌನವಾಗುವ ಮುನ್ನ ಕಾರ್ಯಪ್ರವೃತ್ತರಾಗೋಣ ಎಂಬ ವಿಷಯಸೂಚಿಗಳಡಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು 235 ವಿದ್ಯಾರ್ಥಿಗಳು ವಿವಿಧ ಶಾಲಾ- ಕಾಲೇಜುಗಳಿಂದ ಪಾಲ್ಗೊಳ್ಳಬಹುದು.
ಅಂತಾರಾಷ್ಟ್ರೀಯ ಮೃಗಾಲಯ ಪ್ರಾಣಿಪಾಲಕರ ದಿನಾಚರಣೆಯನ್ನು ಅ. 4 ರಂದು ಆಯೋಜಿಸಿದೆ. ಅ. 5 ಮತ್ತು 6 ರಂದು ಬೆಳಗ್ಗೆ 7 ಗಂಟೆ ಪ್ರಕೃತಿ ನಡಿಗೆ ಕಾರ್ಯಕ್ರಮ ಆಯೋಜಿಸಿದೆ. ಪ್ರಬಂಧ ಬರೆಯುವುದು ಮತ್ತು ಭಾಷಣ ಸ್ಪರ್ಧೆ, ವನ್ಯಜೀವಿ ಸಪ್ತಾಹ ಸಮಾರೋಪ ಆಯೋಜಿಸಲಾಗಿದೆ.
ಕೋಟೆನಾಡಲ್ಲಿರುವ ಕಿರು ಮೃಗಾಲಯ
ಚಿತ್ರದುರ್ಗ (ಸೆ.22) : ಚಿತ್ರದುರ್ಗ ಅಂದ್ರೆ ಥಟ್ ಅಂತ ನೆನಪಾಗೋದು ಏಳು ಸುತ್ತಿನ ಕೋಟೆ. ಆದ್ರೆ ಕೋಟೆನಾಡಲ್ಲಿರುವ ಕಿರು ಮೃಗಾಲಯದಲ್ಲಿ ಕರಡಿಗಳ ಚಿನ್ನಾಟ ಹಾಗೂ ಹುಲಿಗಳ ಗಂಭೀರ ನಡಿಗೆ ಪ್ರವಾಸಿಗರ ಜನಮನ ಸೆಳೆಯುತ್ತಿವೆ. ಹೀಗಾಗಿ ಬಯಲುಸೀಮೆಯ ಝೂಗೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ.
ಕಳೆದ ನಾಲ್ಕು ವರ್ಷಗಳ ಹಿಂದೆ, ಮೃಗಾಲಯ ಅಭಿವೃದ್ಧಿಗಾಗಿ ಜಿಲ್ಲೆಯ DMF ನಿಧಿಯಿಂದ 3 ಕೋಟಿ ರೂಪಾಯಿ ಅನುಧಾನವನ್ನು ಮಂಜೂರು ಮಾಡಲಾಗಿತ್ತು. ಆ ಹಣದಿಂದ ಮೃಗಾಲಯಕ್ಕೆ ಮೈಸೂರು ಹಾಗು ಬನ್ನೇರುಘಟ್ಟ ಮೃಗಾಲಯದಿಂದ ಎರಡು ಹುಲಿಗಳನ್ನು ತರಲಾಗಿದೆ. ಆ ಹುಲಿಗಳ ಗಂಭೀರ ನಡಿಗೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಅಲ್ಲದೇ ಮೃಗಾಲಯದಲ್ಲೇ ಜನ್ಮ ಪಡೆದು ಜನಾಕರ್ಷಣೀಯವಾಗಿ, ತಾಯಿ ಕರಡಿಯೊಂದಿಗೆ ತುಂಟಾಟವಾಡುವ ಕರಡಿ ಮರಿಗಳ ಚಿನ್ನಾಟ ಝೂ ಗೆ ಬರುವ ಜನರ ಜನಮನ ಸೆಳೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಆಡುಮಲ್ಲೇಶ್ವರ ಝೂಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ದರಿಂದಾಗಿ ಸರ್ಕಾರಕ್ಕೆ ಆದಾಯ ಕೂಡ ದ್ವಿಗುಣವಾಗಿದೆ. ಹೀಗಾಗಿ ಇನ್ನಷ್ಟು ಅಪರೂಪದ ಆಕರ್ಷಕ ಪ್ರಾಣಿಗಳನ್ನು ಝೂಗೆ ತರಲು ಮೃಗಾಲಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಪ್ರಾಣಿಗಳ ವಾಸಕ್ಕೆ ಅಗತ್ಯ ಗೃಹ ನಿರ್ಮಾಣ ಭರದಿಂದ ಸಾಗಿದೆ.
'ಕಾವೇರಿ'ದ ಪ್ರತಿಭಟನೆ: ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಒಳನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರು!
ಇನ್ನೂ ಈ ಮೃಗಾಲಯ ಚಿತ್ರದುರ್ಗ ನಗರದಿಂದ 7 ಕಿಲೋಮೀಟರ್ ಅಂತರದಲ್ಲಿದೆ. ಹಚ್ಚ ಹಸುರಿನ ಸೊಬಗಿನ ವಾತಾವರಣದ ಮಧ್ಯೆ ಕಲ್ಲು ಬಂಡೆಗಳ ನಡುವೆ ಹಾದು ಹೋಗಿರುವ ಅಂಕುಡೊಂಕಾದ ರಸ್ತೆಯಲ್ಲಿರುವ ಆಡುಮಲ್ಲೇಶ್ವರ ಝೂ(Adumalleshwar zoo)ನಲ್ಲಿ ಪ್ರಾಣಿಗಳ ವಾಸಕ್ಕಾಗಿ ಮನೆಗಳನ್ನು ವಿಸ್ತಾರವಾಗಿ ನಿರ್ಮಿಸಿರೋದು ಜನಾಕರ್ಷಣೆಯ ಕೇಂದ್ರವಾಗಿದೆ. ಹೀಗಾಗಿ ಪ್ರಾಣಿ ಪಕ್ಷಿಗಳ ಕಲರವ ವೀಕ್ಷಿಸುತ್ತಾ ಝೂಗೆ ಬರುವ ಪ್ರವಾಸಿಗರು ಫುಲ್ ಎಂಜಾಯ್ ಮಾಡ್ತಿದ್ದಾರೆ.