ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಮಂಡ್ಯ (ಸೆ.10): ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ರಾಜಕೀಯದಲ್ಲಿ ನಮ್ಮ ಪಾತ್ರ ಏನು ಇಲ್ಲ. ನಾವು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇವೆ. ಅದರ ಜೊತೆಗೆ ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮಂಡ್ಯದಲ್ಲಿ ಭಾನುವಾರ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನಮ್ಮ ಪಾತ್ರ ಏನು ಇಲ್ಲ. ನಾವು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇವೆ. ಅದರ ಜೊತೆಗೆ ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಬೇರೆ ರೀತಿಯಲ್ಲೂ ಮಾಡಬಹುದು ಅದನ್ನ ಮಾಡಲು ನಾವು ಪ್ರಯತ್ನ ಮಾಡ್ತೇನೆ. ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಸ್ಪರ್ಧೆ ಮಾಡಲ್ಲ ಎಂದು ಹೇಳಿದರು.
ರಾಜ್ಯದ ಎಲ್ಲ ನಾಯಕರ ನೈತಿಕತೆ ಬಗ್ಗೆ ವಿಶ್ಲೇಷಣೆ ಮಾಡಬಲ್ಲೆ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಪ್ರತಿ ವರ್ಷದಂತೆ ಮೈಸೂರು ದಸರಾ ಆಚರಣೆ ಮಾಡಲಾಗುತ್ತಿದೆ. ಯಾವುದೇ ಬದಲಾವಣೆ ಆಗಲ್ಲ ದಸರಾ ವಿಶೇಷ ಆಚರಣೆಯನ್ನು ವಿಧಿ ವಿಧಾನಗಳ ಪ್ರಕಾರ ಮಾಡಲಾಗುತ್ತದೆ. ರೈತರ ಕಷ್ಟದಲ್ಲಿ ನಾವು ಜೊತೆ ಇದ್ದೇವೆ. ಅದೇ ನಮ್ಮ ಕರ್ತವ್ಯವಾಗಿದೆ. ದಸರಾ ಆಚರಣೆ ವಿಜೃಂಭಣೆಯಿಂದ ನಡೆಯುವುದು. ಸರ್ಕಾರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಮಹಿಷಾ ದಸರಾ ಆಚರಣೆ ವಿಚಾರವಾಗಿ ನನ್ನ ಯಾವುದೇ ಅಭಿಪ್ರಾಯ ಇಲ್ಲ. ಸಂವಿಧಾನದ ಪ್ರಕಾರ ಯಾರು ಬೇಕಾದರೂ ಏನು ಬೇಕಾದರೂ ಅನುಸರಿಸಬಹುದು ಎಂದು ತಿಳಿಸಿದರು.
ಸನಾತನ ಧರ್ಮವೇ ದೇಶದ ಮೂಲ: ಹಿಂದೂ ಧರ್ಮದ ಬಗ್ಗೆ ತಮಿಳುನಾಡಿನ ಸಿಎಂ ಪುತ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆದರೆ, ಧರ್ಮದ ಬಗ್ಗೆ ಮಾತನೋಡೋದು ತಪ್ಪು. ಎಲ್ಲಾ ಧರ್ಮಕ್ಕೂ ಒಂದು ಗೌರವ ಮರ್ಯಾದೆ ಇರಬೇಕು. ನಮ್ಮ ನಾಡು ದೇಶದಲ್ಲಿ ಸನಾತನ ಧರ್ಮ ಎಲ್ಲಕ್ಕೂ ಮೂಲವಾಗಿದೆ. ನಾವು ಅವರ ಹೇಳಿಕೆ ಒಪ್ಪುವುದಿಲ್ಲ. ಧರ್ಮಕ್ಕೆ ಗೌರವ ಕೊಡಬೇಕು.
ಕಾವೇರಿ ನೀರು ತಮಿಳುನಾಡಿಗೆ ಹರಿಸುವ ಬಗ್ಗೆ ರೈತರ ಪರವಾಗಿದ್ದೇವೆ: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ. ಇತಿಹಾಸ ನೋಡಿ ನಮ್ಮ ರಾಜ್ಯವು, ಸುಪ್ರೀಂ ಕೋರ್ಟ್ ಏನು ನಿರ್ಧಾರ ತೆಗೆದುಕೊಂಡಿದ್ದಾರೋ ನೋಡಬೇಕು. ಅದರ ಜೊತೆಗೆ ಸಮಸ್ಯೆ ಬಗೆಹರಿಸುವ ಬಗ್ಗೆ ರಾಜ್ಯ ಸರ್ಕಾರ ತಿರ್ಮಾನ ಮಾಡಬೇಕು. ಸಂಪೂರ್ಣವಾಗಿ ರಾಜ್ಯ ಹಾಗೂ ರೈತರ ಜೊತೆ ನಮ್ಮ ಬೆಂಬಲ ಇದೆ. ಅಧಿಕಾರದಲ್ಲಿರುವವರನ್ನ ಪ್ರಶ್ನೆ ಮಾಡಿ. ನಾವು ರಾಜ್ಯದ ಜೊತೆ ಇರ್ತೇವೆ ಎಂದು ತಿಳಿಸಿದರು.
ಮಹಿಷ ದಸರಾ ಅದ್ಹೇಗೆ ಮಾಡ್ತಾರೋ ಮಾಡಲಿ ನೋಡ್ತೀನಿ: ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಸವಾಲು
ಕಾವೇರಿ ಕನ್ನಂಬಾಡಿ ಆಣೆಕಟ್ಟೆಗೆ ಮೈಸೂರು ಒಡೆಯರೇ ಬಾಗಿನ ಅರ್ಪಿಸಿ: ಇದೇ ವೇಳೆ ಕಾವೇರಿ ಆಣೆಕಟ್ಟೆಗೆ ರಾಜಕಾರಣಿಗಳು ಬಾಗೀನ ಅರ್ಪಿಸೋದು ಬೇಡ. ಕನ್ನಂಬಾಡಿ ಕಟ್ಟೆಗೆ ಒಡೆಯರ್ ಮನೆತನದವರೇ ಪೂಜೆ ಸಲ್ಲಿಸಿ ಎಂದು ರೈತ ಮುಖಂಡರಿಂದ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಮನವಿ ಮಾಡಿದರು. ಕೆಲವರು ಪಾಪಿಷ್ಠರು, ಪುಡಾರಿಗಳ ಜೊತೆ ಬಂದು ಪೂಜೆ ಮಾಡಿ ಕಟ್ಟೆ ಬರಿದಾಗಿದೆ. ನಮ್ಮ ಮಹಾರಾಜರು ಕಟ್ಟಿದಂತ ಕಟ್ಟೆಗೆ ಕಳಂಕ ತರುತ್ತಿದ್ದಾರೆ. ಮಹಾರಾಜುರು ಕೊಟ್ಟ ಕೊಡುಗೆಗೆ ಗೋಮುಖ ವ್ಯಾಗ್ರವಾಗಿ ನಡೆದುಕೊಳ್ತಿದ್ದಾರೆ. ನೀವೇ ಕನ್ನಂಬಾಡಿ ಕಟ್ಟೆಗೆ ಬಾಗಿನ ಅರ್ಪಿಸಬೇಕು. ರಾಜ್ಯದ ಜನರಿಗಾಗಿ ಮಹಾರಾಜುರು ಕಟ್ಟಿದಂತ ಕಟ್ಟೆ ಇದಾಗಿದೆ. ಯಾವ ರಾಜಕಾರಣಿಗಳು ಮನೆ ಮಾರಿ ಕನ್ನಂಬಾಡಿ ಕಟ್ಟೆ ಕಟ್ಟಿಲ್ಲ. ಪ್ರತಿವರ್ಷ ನೀವೇ ಕಾವೇರಮ್ಮಗೆ ಬಾಗಿನ ಅರ್ಪಿಸಬೇಕು. ಈಗಲೂ ದಂಪತಿ ಸಮೇತ ಕಾವೇರಿ ಮಾತೆಗೆ ಪೂಜೆ ಮಾಡಿ ಕಟ್ಟೆ ತುಂಬುತ್ತದೆ ಎಂದು ರೈತರು ಮನವಿ ಮಾಡಿದರು.