ಬಸವಣ್ಣನವರ ತತ್ವ ಆದರ್ಶವನ್ನು ಗಟ್ಟಿಯಾಗಿ ಹೇಳಿದವರು ಲಿಂಗಾನಂದ ಸ್ವಾಮೀಜಿ, ಸಮಾನತೆಯ ತತ್ವದ ಬೀಜ ಬಿತ್ತಿದವರು ಬಸವಣ್ಣನವರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಚನ್ನಮ್ಮನ ಕಿತ್ತೂರು (ಸೆ.10): ಬಸವಣ್ಣನವರ ತತ್ವ ಆದರ್ಶವನ್ನು ಗಟ್ಟಿಯಾಗಿ ಹೇಳಿದವರು ಲಿಂಗಾನಂದ ಸ್ವಾಮೀಜಿ, ಸಮಾನತೆಯ ತತ್ವದ ಬೀಜ ಬಿತ್ತಿದವರು ಬಸವಣ್ಣನವರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದಲ್ಲಿ ನಡೆದ ಶ್ರೀ ಲಿಂಗಾನಂದ ಸ್ವಾಮಿಗಳ 28ನೇ ಸ್ಮರ್ಣೋತ್ಸವದ ಅಂಗವಾಗಿ ಲಿಂಗಾನಂದ ಶ್ರೀ ಪ್ರಶಸ್ತಿ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಲು ಕೀಳು ಎನ್ನುವುದು ಹೋಗಬೇಕು ಎಲ್ಲರೂ ಒಂದು ಎನ್ನುವುದು ಬರಬೇಕು. ಇನ್ನುವರೆಗೂ ಸಮಾನತೆ ಬಂದಿಲ್ಲ, ಎಂದ ಅವರು 12ನೇ ಶತಮಾನದಲ್ಲಿ ಸಮಾನತೆಯ ಬೀಜವನ್ನು ಬಿತ್ತಿದವರು ಬಸವಣ್ಣನವರು ಎಂದು ಹೇಳಿದರು.
ಮೂಢನಂಬಿಕೆ ತೊರೆದು ಜೀವನ ನಡೆಸಬೇಕು, ಆದರೆ ಇವತ್ತಿಗೂ ಸಮಾಜದಲ್ಲಿ ಮೂಡನಂಬಿಕೆ ಅನುಸರಿಸುತ್ತಾ ಬರುತ್ತಿರುವುದು ಸರಿಯಲ್ಲ, ನಾವೆಲ್ಲ ಬಸವಣ್ಣನ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ಬಸವ ತತ್ವಕ್ಕೆ ಶರಣರಿಗೆ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು. ಕಿತ್ತೂರು ತಾಲೂಕು ಮಾಡಲು ಇಲ್ಲಿಯ ಜನರ ಬೇಡಿಕೆ ಇತ್ತು, ಸರ್ಕಾರ ನಿಯಮಾವಳಿ ಬೇರೆ ಇದ್ದರೂ ಸಹ ಇತಿಹಾಸಕ್ಕೆ ಪ್ರಸಿದ್ಧವಿರುವ ಕಾರಣದಿಂದಾಗಿ ಇದನ್ನು ತಾಲೂಕು ಮಾಡಲು ಕ್ರಮ ವಹಿಸುವಂತೆ ಸೂಚಿಸಿ ಆದೇಶ ಹೊರಡಿಸಿದ್ದ ಪರಿಣಾಮ ಇದೀಗ ಕಿತ್ತೂರು ತಾಲೂಕಾಗಿ ಹೊರಹೊಮ್ಮಿದೆ.
ಪಂಚೆಯೊಳಗೆ ಖಾಕಿ ಚಡ್ಡಿ ಹಾಕಿ ಸಮಾಜವಾದಿ ಅಂದ್ರೆ ಆಗೋದಿಲ್ಲ: ಸಿಎಂ ವಿರುದ್ಧ ಹರಿಪ್ರಸಾದ್ ವಾಗ್ದಾಳಿ
ಮಾಡುವ ಕೆಲಸ ಕಾರ್ಯಗಳಲ್ಲಿ ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದರು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ನಮ್ಮ ಬೈಲೂರು ಆದರ್ಶ ಗ್ರಾಮವಾಗಿದೆ ನಮ್ಮಲ್ಲಿ ಸಮಾನತೆ, ಸ್ವಚ್ಛತೆಗೆ ಆದ್ಯತೆ ನೀಡಿ ಇವತ್ತು ಮಾದರಿ ಗ್ರಾಮವಾಗಿದೆ ಜನನಾಯಕರು ಕೂಡ ಸ್ವಚ್ಛತೆಗೆ, ಸಮಾನತೆಗೆ ಆದ್ಯತೆ ನೀಡಿ ಪ್ರತಿಯೊಂದು ಗ್ರಾಮ ಅಭಿವೃದ್ಧಿ ಮಾಡುವಲ್ಲಿ ಶ್ರಮಿಸಬೇಕೆಂದು ಹೇಳಿದರು. ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಶರಣ ಬಸವಕುಮಾರ ಪಾಟೀಲ ಇವರಿಗೆ ಲಿಂಗಾನಂದಶ್ರೀ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭಾರತ ಬಲಿಷ್ಠ ರಾಷ್ಟ್ರವಾಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಬಾಲಚಂದ್ರ ಜಾರಕಿಹೊಳಿ
ಲಿಂಗಾನಂದರ ಶ್ರೀಗಳ ವಚನ ಧರ್ಮ ಚಳುವಳಿ ಹಾಗೂ ಕಿರುವಚನ ಸಂಪುಟ ಬಿಡುಗಡೆಗೊಳಿಸಲಾಯಿತು, ಅಥಿತಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಸವ ಮರುಳಸಿದ್ದ ಸ್ವಾಮೀಜಿ, ಗೋಣಿರುದ್ದ ಸ್ವಾಮೀಜಿ, ಮಹಾಂತ ಸ್ವಾಮೀಜಿ, ರಾಹುಲ್ ಜಾರಕಿಹೊಳಿ, ರೋಹಿಣಿ ಪಾಟೀಲ, ಎಸ್ ,ಆರ್ ಗುಂಜಾಳ, ಬಸವಕುಮಾರ ಪಾಟೀಲ, ರತ್ನಾಕರ ಕುಂದಾಪುರ, ಎಂ. ಜಿ.ಪಾಟೀಲ ಬಸವರಾಜ್ ಸಂಗೋಳ್ಳಿ ಸೇರಿದಂತೆ ಇತರರು ಇದ್ದರು.