ಮೈಸೂರಿನಲ್ಲಿ ಇನ್ನೆರಡು ದಿನದಲ್ಲಿ ಆಕ್ಸಿಜನ್ ಪೂರೈಕೆ ಆಗದಿದ್ದಲ್ಲಿ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರು (ಏ.27) : ಇನ್ನೆರಡು ದಿನದಲ್ಲಿ ಆಕ್ಸಿಜನ್ ಸರಬರಾಜು ಆಗದಿದ್ದರೆ ಜಿಲ್ಲೆಯಲ್ಲಿ ತೀವ್ರ ಸಮಸ್ಯೆಯಾಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊಸ ಆಕ್ಸಿಜನ್ ಪ್ಲ್ಯಾಂಟ್‌ಗೆ ಅನುಮತಿ ಸಿಕ್ಕಿದೆ. ಆದರೆ ಅದಕ್ಕೆ ಕನಿಷ್ಠ 25 ದಿನ ಬೇಕು. ನಮಗೆ ತುರ್ತಾಗಿ ಪರ್ಯಾಯವಾಗಿ ಆಕ್ಸಿಜನ್ ಬೇಕಾಗಿದೆ ಎಂದು ಹೇಳಿದರು.
ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ವಾರಾಂತ್ಯದಲ್ಲಿ 50 ವೆಂಟಿಲೇಟರ್ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇದೆ. ವಾರಾಂತ್ಯದಲ್ಲಿ ಮತ್ತಷ್ಟು ವೆಂಟಿಲೇಟರ್ ಬೆಡ್‌ಗಳು ಸಿಗಲಿವೆ ಎಂದರು.
ಆತಂಕಗೊಂಡು ICU ಕಾಯ್ದಿರಿಸಬೇಡಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ..
ಮೈಸೂರಿನನಲ್ಲಿ ಒಂದೇ ದಿನ 1500 ಪಾಸಿಟಿವ್ ವಿಚಾರ : ಒಂದೇ ದಿನ 1500 ಪಾಸಿಟಿವ್ ಕೇಸ್ ಬಂದಿರುವುದು ಹಳೆಯ ವಿಚಾರ. ಅದು ಹಳೆಯ ಅಂಕಿ ಅಂಶಗಳೆಲ್ಲಾ ಸೇರಿ ನೀಡಿದ ವರದಿ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ನಾವು 700 ರ ಆಸುಪಾಸಿನಲ್ಲಿ ಇದ್ದೇವೆ. ಅಂಕಿ ಅಂಶಗಳು ಎರಡು ದಿನದ್ದು ಸೇರಿಸಿದಾಗ ಈ ರೀತಿ ಹೆಚ್ಚಾದಂತೆ ಕಾಣುತ್ತದೆ ಸಾವಿರ ದಾಟಿದೆ ಎಂದು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ರೋಹಿಣಿ ಹೇಳಿದ್ದಾರೆ.