ಮೈಸೂರು : ಲೋಕಾ ಅಧಿಕಾರಿಗಳಿಗೆ ಸಾರ್ವಜನಿಕರಿಂದ ದೂರುಗಳ ಸುರಿಮಳೆ

Published : Dec 14, 2023, 10:35 AM IST
ಮೈಸೂರು :  ಲೋಕಾ ಅಧಿಕಾರಿಗಳಿಗೆ ಸಾರ್ವಜನಿಕರಿಂದ ದೂರುಗಳ ಸುರಿಮಳೆ

ಸಾರಾಂಶ

ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆ..ಕಂದಾಯ, ಸರ್ವೇ, ನಗರಸಭೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ವಿರುದ್ಧ ಮೇಜರ್ ದೂರುಗಳು..ಕಲ್ಪತರು ವೃತ್ತದ ನಗರಸಭೆ ಆಸ್ತಿ ಉಳಿಸಲು ನಗರಸಭಾ ಸದಸ್ಯರಿಂದ ಒಗ್ಗಟ್ಟಿನ ಪ್ರದರ್ಶನ..

  ಹುಣಸೂರು:  ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆ..ಕಂದಾಯ, ಸರ್ವೇ, ನಗರಸಭೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ವಿರುದ್ಧ ಮೇಜರ್ ದೂರುಗಳು..ಕಲ್ಪತರು ವೃತ್ತದ ನಗರಸಭೆ ಆಸ್ತಿ ಉಳಿಸಲು ನಗರಸಭಾ ಸದಸ್ಯರಿಂದ ಒಗ್ಗಟ್ಟಿನ ಪ್ರದರ್ಶನ..

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಕಂಡುಬಂದ ದೃಶ್ಯಗಳಿವು. ಮುಖ್ಯವಾಗಿ ಹುಣಸೂರು ನಗರಸಭೆ, ಕಂದಾಯ, ಸರ್ವೇ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ವಿರುದ್ಧ ಸಾರ್ವಜನಿಕರು ಬೇಸರಗೊಂಡಿರುವುದು ಸಭೆಯಿಂದ ವ್ಯಕ್ತವಾಯಿತು.

ಸಾಮಾಜಿಕ ಕಾರ್ಯಕರ್ತ ಇಂಟೆಕ್ ರಾಜು ಮತ್ತು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಹುಣಸೂರು ನಗರಸಭೆ ಮೈದಾನ ರಾಷ್ಟ್ರೀಯ ಹಬ್ಬಗಳು ಮತ್ತು ಸಾರ್ವಜನಿಕ ಸಭೆಗಳಿಗೆ ಮೀಸಲಿದ್ದರೂ, ನಗರಸಭೆ ಅಧಿಕಾರಿಗಳು  ಮೈದಾನವನ್ನು ಎಕ್ಸಿಬಿಷನ್, ಖಾಸಗಿ ವ್ಯಕ್ತಿಗಳ ಸಮಾರಂಭಕ್ಕೆ ನೀಡುವ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮೈದಾನದಲ್ಲಿ ಮೂರು ವರ್ಷಗಳಿಂದ ಪಾನಿಪೂರಿ, ಫಾಸ್ಟ್ಫುಡ್ ಹೋಟೆಲ್ಗಳಿಗೆ ಅವಕಾಶ ನೀಡಿದ್ದು, ಇಡೀ ಮೈದಾನ ಹಾಳಾಗುತ್ತಿದೆ. ಮೈದಾನದ ಸುತ್ತ ಇರುವ ವಾಕಿಂಗ್ ಪಾಥ್ನಲ್ಲಿ ವಾಕಿಂಗ್ ಮಾಡಲಾಗದ ಪರಿಸ್ಥಿತಿ ಎದುರಾಗಿದೆ. ದಯವಿಟ್ಟು ಮೈದಾನವನ್ನು ಉಳಿಸಿಕೊಡಿರೆಂದು ಮನವಿ ಮಾಡಿದರು.

ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ತಾಲೂಕಿನ ಜೀವನದಿ ಲಕ್ಷ್ಮಣತೀರ್ಥ ಮಲಿನಗೊಳ್ಳುವುದು ಮುಂದುವರೆದಿದ್ದು ನದಿ ಉಳಿಸಿಕೊಡಬೇಕೆಂದು ಕೋರಿದರು. ನಗರಸಭೆ ಮೈದಾನದ ಕುರಿತಂತೆ ಮೂರು ದಿನಗಳಲ್ಲಿ ವರದಿ ನೀಡುವಂತೆ ಸಭೆಯಲ್ಲಿದ್ದ ಮತ್ತೋರ್ವ ಡಿವೈಎಸ್ಪಿ ಮಾಲತೇಶ್ ಪ್ರಭಾರ ಪೌರಾಯುಕ್ತೆ ಶರ್ಮಿಳಾರಿಗೆ ಸೂಚಿಸಿದರು.

ಕಲ್ಪತರು ವೃತ್ತ ನಗರಸಭೆ ಆಸ್ತಿ: ಪಟ್ಟಣದ ಹೃದಯಭಾಗದಲ್ಲಿರುವ ಕಲ್ಪತರು ವೃತ್ತದ ಬಳಿಯ 9 ಗುಂಟೆ ಭೂಮಿಯನ್ನು ತನ್ನದೆಂದು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಬೇಲಿ ಹಾಕಿಕೊಂಡು ಸೀಮೆಂಟ್ ಕಾಂಪೌಂಡ್ ನಿರ್ಮಿಸಲು ಹೊರಟಿದ್ದಾರೆ. ಇದು ನಗರಸಭೆ ಪಾರ್ಕ್ಗಾಗಿ ಮೀಸಲಿರಿಸಿರುವ ಆಸ್ತಿಯಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಹೀಗಿದ್ದೂ ಈ ವ್ಯಕ್ತಿ ಕುಡಿಯುವ ನೀರಿನ ಪೈಪ್, ಒಳಚರಂಡಿ ಪೈಪ್ಗಳು ಹಾದು ಹೋಗಿರುವ ಈ ನಗರಸಭೆ ಆಸ್ತಿಯನ್ನು ಕಬಳಿಸಲು ಷಡ್ಯಂತ್ರ ನಡೆಸಿದ್ದಾರೆ. ಅಲ್ಲದೇ ನಗರಸಭೆ ಸದಸ್ಯರಿಗೆ ತಾನು ಲಂಚ ನೀಡಿದ್ದೇನೆಂದು ಪುಕಾರು ಹಬ್ಬಿಸಿ ನಾಗರಿಕರ ನಡುವೆ ನಮ್ಮನ್ನು ಅಪಮಾನಗೊಳಿಸುತ್ತಿದ್ದಾರೆ. ಜಾಗದ ಮಾಲೀಕತ್ವದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಕೂಡಲೇ ವ್ಯಕ್ತಿಯ ಅಕ್ರಮ ಕಾರ್ಯಗಳಿಗೆ ತಡೆಯೊಡ್ಡಬೇಕು. ಯಾವುದೇ ಕಾಮಗಾರಿ ನಡೆಯದಂತೆ ನಿರ್ದೇಶನ ನೀಡಬೇಕೆಂದು ನಗರಸಭೆ ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಎಚ್.ಪಿ. ಸತೀಶ್ ಕುಮಾರ್, ಸ್ವಾಮಿಗೌಡರನ್ನು ಒಳಗೊಂಡ 10ಕ್ಕೂ ಹೆಚ್ಚು ವಿವಿಧ ಪಕ್ಷಗಳ ಸದಸ್ಯರು ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು. ಈ ಕುರಿತು ವರದಿ ನೀಡಲು ಲೋಕಾಯುಕ್ತ ಅಧಿಕಾರಿಗಳು ಪ್ರಭಾರ ಪೌರಾಯುಕ್ತರಿಗೆ ಸೂಚಿಸಿದರು.

ವಸತಿ ನಿರ್ಮಿಸಿಕೊಡಿ: ತಾಲೂಕಿನ ಗಾವಡಗೆರೆ ಹೋಬಳಿ ಬಿಳಿಗೆರೆ ಗ್ರಾಮದಲ್ಲಿ 9 ಪ. ಜಾತಿಯ ಕುಟುಂಬಗಳಿಗೆ 4 ವರ್ಷಗಳೇ ಸಂದರೂ ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲವೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ದೂರು ನೀಡಿದರು.

ಈ ಕುರಿತು ಪಿಡಿಒರನ್ನು ಕರೆಯಿಸಿ ಮಾತನಾಡಿಸಿ, ಇನ್ನೊಂದು ವಾರದಲ್ಲಿ ನಾಲ್ಕು ಮನೆಗಳ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಪಿಡಿಒ ತಿಳಿಸಿದರು. ಮಿಕ್ಕ 5 ಫಲಾನುಭವಿಗಳಿಂದ ಹೊಸದಾಗಿ ದಾಖಲೆಗಳನ್ನು ಪಡೆಯುವುದಾಗಿ ತಿಳಿಸಿದರು.

ದಲಿತ ಮುಖಂಡ ರತ್ನಪುರಿ ಪುಟ್ಟಸ್ವಾಮಿ ಮಾತನಾಡಿ, ಈ ಹಿಂದಿನ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು ವಿದ್ಯಾರ್ಥಿನಿಲಯಗಳಲ್ಲಿ ಹೊಸದಾಗಿ ಟಿ.ವಿ, ಇನ್ವರ್ ಟರ್ ಬ್ಯಾಟರಿ ಖರೀದಿ ಎಂದು ತಿಳಿಸಿ 9 ವಿದ್ಯಾರ್ಥಿನಿಲಯಗಳಿಂದ ಒಟ್ಟು 10 ಲಕ್ಷ ರು. ಗಳಿಗೂ ಹೆಚ್ಚು ಹಣ ಗುಳುಂ ಗುಳುಂ ಮಾಡಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದರು. ಹೈರಿಗೆ ಮೀನುಗಾರರ ಸಹಕಾರ ಸಂಘದ ಷೇರುದಾರರನಾಗಲು ಕಳೆದ ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ನನ್ನನ್ನು ಷೇರುದಾರನಾಗಿ ಮಾಡಕೊಳ್ಳುತ್ತಿಲ್ಲ. ಕಾರಣವೂ ತಿಳಿದಿಲ್ಲ. ನ್ಯಾಯ ದೊರಕಿಸಿಕೊಡಬೇಕೆಂದು ಗ್ರಾಮಸ್ಥ ಮಹೇಶ್ ಕೋರಿದರು. ಮೀನುಗಾರಿಕೆ ಇಲಾಖೆ ಎಡಿ ಮಿಥುನ್ ಅವರಿಗೆ ಕೂಡಲೇ ವಿಷಯದ ಕುರಿತು ಕ್ರಮವಹಿಸಿ ತಮಗೆ ವರದಿ ನೀಡಲು ಡಿವೈಎಸ್ಪಿ ಮಾಲತೇಶ್ ಸೂಚಿಸಿದರು.

ಸಭೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ರೂಪಶ್ರೀ, ರವಿಕುಮಾರ್, ಉಮೇಶ್, ತಹಸೀಲ್ದಾರ್ ಮಂಜುನಾಥ್, ಇಒ ಬಿ.ಕೆ. ಮನು ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಪಿಡಿಒಗಳು ಮತ್ತು ಸಾರ್ವಜನಿಕರು ಇದ್ದರು. ಸಭೆಯಲ್ಲಿ 40ಕ್ಕೂ ಹೆಚ್ಚು ದೂರುಗಳ ದಾಖಲಾದವು.

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!