ಭಾರತೀಯ ಆರೋಗ್ಯ ಸಂಶೋಧನಾ ಸಂಸ್ಥೆ ಮತ್ತು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಗರ್ಭಕೋಶದ ಬಾಯಿ ಕ್ಯಾನ್ಸರ್ ತಡೆಗಟ್ಟುವಿಕೆಗೆ ಅಗತ್ಯ ಲಸಿಕೆ ಅಭಿಯಾನಕ್ಕೆ ಡಿ. 19 ರಂದು ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಾಗುವುದು.
ಮೈಸೂರು : ಭಾರತೀಯ ಆರೋಗ್ಯ ಸಂಶೋಧನಾ ಸಂಸ್ಥೆ ಮತ್ತು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಗರ್ಭಕೋಶದ ಬಾಯಿ ಕ್ಯಾನ್ಸರ್ ತಡೆ ಗಟ್ಟುವಿಕೆಗೆ ಅಗತ್ಯ ಲಸಿಕೆ ಅಭಿಯಾನಕ್ಕೆ ಡಿ. 19 ರಂದು ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಾಗುವುದು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಜಯಂತ್ ಅವರು ನಗರದ ಜೆಎಸ್ಎಸ್ಆಸ್ಪತ್ರೆಯಲ್ಲಿ ಚಾಲನೆ ನೀಡುವರು. ಸನ್ ವರ್ಮಾ ಇದಕ್ಕೆ ಪ್ರಾಯೋಜಕತ್ವವಹಿಸಿದೆ ಎಂದು ಸಂಸ್ಥೆಯ ಸಂಶೋಧನಾ ವೈದ್ಯ ಡಾ. ರಾಘವಿ ಕಣರಂ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಯಾನ್ಸರ್ ಗಳಲ್ಲಿ ದ ಬಾಯಿ ಕ್ಯಾನ್ಸರ್ 2ನೇ ಸ್ಥಾನದಲ್ಲಿದೆ. ಪ್ರತಿ ವರ್ಷ 1.24 ಲಕ್ಷ ಮಹಿಳೆಯರು ಈಕ್ಕೆ ತುತ್ತಾಗುತ್ತಿದ್ದಾರೆ. ಇದು ಹ್ಯೂಮನ್ ಪ್ಯಾಪಿಲೋಮ್ ಎಂಬ ಸಾಮಾನ್ಯ ವೈರಸ್ ನಿಂದ ಉಂಟಾಗುತ್ತದೆ. ಹೀಗಾಗಿ ಇದರ ನಿರ್ಮೂಲನೆಗೆ ವಿಶ್ವ ಸಂಸ್ಥೆ ನೀಡಿರುವ ಕರೆಯುವಂತೆ ಸಂಸ್ಥೆಯು ನಗರದ ಗ್ರಾಮೀಣ ಮತ್ತು ಅರೆ ನಗರದ 9 ರಿಂದ 14 ವರ್ಷ ವಯಸ್ಸಿನ ಸುಮಾರು 200 ವಿದ್ಯಾರ್ಥಿನಿಯರಿಗೆ ಶಾಲಾಧಾರಿತ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಡಾ.ಪೂರ್ಣಿಮಾ ಮದಿವಣ್ಣನ್, ಡಾ.ಅನಿಲ್ ಬಿಳಿಮಲೈ ಇದ್ದರು.
ಮಕ್ಕಳಿಗೆ ಇಂದ್ರಧನುಷ್ ಲಸಿಕೆ
ಬೆಂಗಳೂರು (ಆ.7): ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಮಲ್ಲಿಕಾರ್ಜುನ ಸೋಮವಾರ ದಾವಣಗೆರೆಯಲ್ಲಿ ಇಂದ್ರಧನುಶ್ ಲಸಿಕಾ ಅಭಿಯಾನ 5.0ಗೆ ಚಾಲನೆ ನೀಡಿದರು. ಈ ವೇಳೆ ವಿಶೇಷವಾದ ಪ್ರಸಂಗ ನಡೆಯಿತು. ದಾವಣಗೆರೆಯಲ್ಲಿ ಇಂದ್ರಧನುಷ್ ಲಸಿಕೆ ಹಾಕಿದ ನಂತರ ಮಗುವಿಗೆ ಕೆನ್ನೆಗೆ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಮುತ್ತಿಕ್ಕಿದರು. ಈ ವೇಳೆ ಮಗುವಿನ ಪೋಷಕರು, ತಮ್ಮ ಮಗುವಿಗೆ ಹೆಸರಿಡುವಂತೆ ಸಚಿವರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಎಸ್‌ಎಸ್ ಮಲ್ಲಿಕಾರ್ಜುನ 'ತೇಜಸ್ವಿ ಸೂರ್ಯ' ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ, ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರ ನಾಯಕರು ಯಾವುದಾದರೂ ಹೆಸರನ್ನು ಟೀಕಿಸಿದ್ದರೆ ಅದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ. ಈಗ ಪಕ್ಷದ ಸಚಿವರೊಬ್ಬರು ಅದೇ ಹೆಸರನ್ನು ಮಗುವಿಗೆ ಇಟ್ಟಿದ್ದಾರೆ. ಹಾಗಂತ ಮಗುವಿಗೆ ಹೆಸರಿಡುವ ವೇಳೆ ಸಚಿವರಿಗೆ ತೇಜಸ್ವಿ ಸೂರ್ಯ ನೆನಪಾದ್ರಾ? ಅಥವಾ ಮಗುವಿನ ಮುಖ ಸೂರ್ಯನಂತೆ ತೇಜಸ್ವಿಯಾಗಿ ಕಂಡಿತಾ ಅನ್ನೋದು ಗೊತ್ತಿಲ್ಲ. ಮಗುವಿನ ತಂದೆ ತಾಯಿ, ತಮ್ಮ ಮಗುವಿಗೆ ನೀವೇ ಒಂದು ಚಂದದ ಹೆಸರಿಡಿ ಎಂದಾಗ, ಎಸ್‌ಎಸ್ ಮಲ್ಲಿಕಾರ್ಜುನ ತೇಜಸ್ವಿ ಸೂರ್ಯ ಎಂದು ಮಗುವಿನ ಕಿವಿಯಲ್ಲಿ ಉಸುರಿಸಿದ್ದಾರೆ.
ನವಜಾತ ಮಗುವಿನ ನಿಂದ 23ತಿಂಗಳ ಮಕ್ಕಳಿಗೆ ಒಟ್ಟು5103 ಮಕ್ಕಳಿಗೆ , ನಿಯಮಿತ ಅವಧಿಯಲ್ಲಿ ನೀಡಬೇಕಾದ ರೋಗನಿರೋಧಕ ಲಸಿಕೆಗಳು, 2-5 ವರ್ಷದೊಳಗಿನ ಮಕ್ಕಳಿಗೆ ಎಂಆರ್-1, ಎಂಆರ್-2, ಫೆಂಟಾ ಮತ್ತು ಓಪಿವಿ ಲಸಿಕಾ ಡೋಸ್‍ಗಳು ಹಾಗೂ ರೋಗ ನಿರೋಧಕ ಹಾಗೂ ಸುರಕ್ಷಿತ ಲಸಿಕೆ ಪಡೆಯದ ಅಥವಾ ಭಾಗಶಃ ಪಡೆದಿರುವ ಗರ್ಭಿಣಿಯರಿಗೆ ಲಸಿಕೆ ನೀಡುವ ತೀವ್ರತರವಾದ ಮಿಷನ್ ಇಂದ್ರಧನುಶ್ ಲಸಿಕಾ ಯೋಜನೆ. ಇಂದ್ರಧನುಶ್ ಯೋಜನೆಯ 5.0 ಕಾರ್ಯಕ್ರಮದ ಮೊದಲ ಸುತ್ತು ಆಗಸ್ಟ್ 7 ರಿಂದ 12ರವರೆಗೆ ನಡೆಯಲಿದ್ದು, 2ನೇ ಹಂತ ಸೆಪ್ಟೆಂಬರ್ 11 ರಿಂದ 16 ಮತ್ತು ಮೂರನೇ ಹಂತ ಅಕ್ಟೋಬರ್ 9 ರಿಂದ 14ರವರೆಗೆ ನಡೆಯಲಿದೆ.