ಬಿಗ್‌ ಬಜಾರ್‌ ಬಂಪರ್: 10 ವರ್ಷ ಹಿಂದಿನ ಬೆಲೆಯಲ್ಲಿ ವಸ್ತುಗಳ ಮಾರಾಟ

By Kannadaprabha News  |  First Published Dec 24, 2019, 8:28 AM IST

ವರ್ಷಾಂತ್ಯದಲ್ಲಿ ಬಹುತೇಕ ಶಾಪಿಂಗ್ ಮಾಲ್, ಅಂಗಡಿಗಳಲ್ಲಿ ಇಯರ್‌ ಎಂಡ್‌ ಸೇಲ್ ಇಡುತ್ತಾರೆ. ಆದರೆ ಬಿಗ್ ಬಜಾರ್ ಒಂದು ಹೆಜ್ಜೆ ಮುಂದಿದೆ. ಇದು ದಶಕದ ಅಂತ್ಯವಾಗಿರುವುದರಿಂದ 10 ವರ್ಷ ಹಿಂದೆ ವಸ್ತುಗಳ ಬೆಲೆ ಏನಿತ್ತೋ ಅದೇ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ.


ಮೈಸೂರು(ಡಿ.24): ವರ್ಷಾಂತ್ಯದಲ್ಲಿ ಬಹುತೇಕ ಶಾಪಿಂಗ್ ಮಾಲ್, ಅಂಗಡಿಗಳಲ್ಲಿ ಇಯರ್‌ ಎಂಡ್‌ ಸೇಲ್ ಇಡುತ್ತಾರೆ. ಆದರೆ ಬಿಗ್ ಬಜಾರ್ ಒಂದು ಹೆಜ್ಜೆ ಮುಂದಿದೆ. ಇದು ದಶಕದ ಅಂತ್ಯವಾಗಿರುವುದರಿಂದ 10 ವರ್ಷ ಹಿಂದೆ ವಸ್ತುಗಳ ಬೆಲೆ ಏನಿತ್ತೋ ಅದೇ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ.

ಫ್ಯೂಚರ್‌ ಗ್ರೂಪ್‌ನ ಬಿಗ್‌ ಬಜಾರ್‌ ಈ ವರ್ಷವನ್ನು ಅತ್ಯಂತ ಅದ್ಧೂರಿಯಾಗಿ ಬೀಳ್ಕೊಡಲು ಎಂಡ್‌ ಆಫ್‌ ಡಿಕೇಡ್‌ ಸೇಲ್‌ (ದಶಕದ ಅಂತ್ಯದ ಮಾರಾಟ) ಅನ್ನು ಜ.1 ರವರೆಗೆ ಪ್ರಸ್ತುತಪಡಿಸಲಿದೆ. ಬಿಗ್‌ ಬಜಾರ್‌ ಗ್ರಾಹಕರಿಗೆ 10 ವರ್ಷಗಳ ಹಿಂದೆ ಯಾವ ಬೆಲೆಯಲ್ಲಿ ಮಾರಾಟವಾಗಿದೆಯೋ ಅದೇ ದರದಲ್ಲಿ ಉತ್ಪನ್ನಗಳನ್ನು ಕೊಳ್ಳುವ ಅವಕಾಶ ನೀಡುತ್ತಿದೆ.

Tap to resize

Latest Videos

undefined

ಮಂಗ್ಳೂರು ಗಲಭೆ: ಎರಡು ರೀತಿಯ ತನಿಖೆಗೆ ಸಿಎಂ ಘೋಷಣೆ

2009ರ ಬೆಲೆಯಲ್ಲಿ ಆಹಾರ, ದೈನಂದಿನ ಅಗತ್ಯಗಳು, ಪೀಠೋಪಕರಣ, ಎಲೆಕ್ಟ್ರಾನಿಕ್ಸ್‌, ಹೋಮ್‌ವೇರ್‌, ಲಗೇಜ್‌, ಸ್ಟೇಷನರಿ, ಆಟಿಕೆಗಳು, ಫ್ಯಾಷನ್‌ ಇತರೆ ವಸ್ತುಗಳನ್ನು ಕೊಳ್ಳಬಹುದು ಎಂದು ಸಿಇಒ ಸದಾಶಿವ್‌ ನಾಯಕ್‌ ತಿಳಿಸಿದ್ದಾರೆ.

ಕೊಟಕ್‌ ಮಹಿಂದ್ರಾ ಬ್ಯಾಂಕ್‌ ಬಳಕೆದಾರರು ಕನಿಷ್ಠ 3000 ಶಾಪಿಂಗ್‌ ಮಾಡಿದರೆ ಶೇ.10 ರಿಯಾಯಿತಿ ಪಡೆಯುತ್ತಾರೆ. ಹಾಗೂ ಈ ಅವಧಿಯಲ್ಲಿ ಈ ರಿಯಾಯಿತಿ ಗರಿಷ್ಠ . 400 ಒಂದು ವಹಿವಾಟಿಗೆ ಮಾತ್ರ ಲಭ್ಯವಿರುತ್ತದೆ.

ಮಂಗಳೂರು ಗಲಭೆ: ವಿಡಿಯೋ ಇದ್ರೆ ಕಳಿಸಿ ಎಂದ ಕಮಿಷನರ್ ಹರ್ಷ

click me!