ಕೊರೋನಾ ಕಾಟ: ಮಾಸ್ಕ್‌ ಧರಿಸಿಯೇ ದರ್ಶನ ಕೊಟ್ಟ ಸ್ವಾಮೀಜಿ

By Suvarna NewsFirst Published Mar 8, 2020, 1:36 PM IST
Highlights

ಕೊರೋನಾ ವೈರಸ್ ಕಾಟ ಸ್ವಾಮೀಜಿಗಳನ್ನೂ ಬಿಟ್ಟಿಲ್ಲ. ಮೈಸೂರಿನಲ್ಲಿ ಅವಧೂತ ದತ್ತಪೀಠ ಸಂಪೂರ್ಣ ಮಾಸ್ಕ್ ಮಯವಾಗಿದೆ. ಸ್ವಾಮೀಜಿಗಲೂ ಮಾಸ್ಕ್‌ ಧರಿಸಿಯೇ ಭಕ್ತರಿಗೆ ದರ್ಶನ ನೀಡಿದ್ದು ವಿಶೇಷ.

ಮೈಸೂರು(ಮಾ.08): ಕೊರೋನಾ ವೈರಸ್ ಕಾಟ ಸ್ವಾಮೀಜಿಗಳನ್ನೂ ಬಿಟ್ಟಿಲ್ಲ. ಮೈಸೂರಿನಲ್ಲಿ ಅವಧೂತ ದತ್ತಪೀಠ ಸಂಪೂರ್ಣ ಮಾಸ್ಕ್ ಮಯವಾಗಿದೆ. ಸ್ವಾಮೀಜಿಗಲೂ ಮಾಸ್ಕ್‌ ಧರಿಸಿಯೇ ಭಕ್ತರಿಗೆ ದರ್ಶನ ನೀಡಿದ್ದು ವಿಶೇಷ.

ಕರೊನಾ ವೈರಸ್ ಭೀತಿ ಹಿನ್ನೆಲೆ ಮೈಸೂರಿನ ಅವಧೂತ ದತ್ತಪೀಠದಲ್ಲಿ ಹೈಅಲರ್ಟ್ ಮಾಡಲಾಗಿದೆ. ಆಶ್ರಮದ ಆವರಣ ಮಾಸ್ಕ್‌‌ಮಯವಾಗಿದ್ದು, ಸ್ವತಃ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರೂ ಮಾಸ್ಕ್‌ ಧರಿಸಿದ್ದಾರೆ.

ಕೊರೋನಾ ಬೆನ್ನಲ್ಲೇ ಬೆಂಗಳೂರಿಗೆ ಕಾಲಿಟ್ಟ ವಿಚಿತ್ರ ರೋಗಗಳು

ಮಾಸ್ಕ್ ಧರಿಸಿಯೇ ದರ್ಶನ ನೀಡುತ್ತಿರುವ ಸ್ವಾಮೀಜಿ ಭಕ್ತರಿಗೂ ಉಚಿತವಾಗಿ ಮಾಸ್ಕ್ ವಿತರಿಸಿದ್ದಾರೆ. ಭಕ್ತರು ಮುಖಗವಸು ತೊಟ್ಟು ಪ್ರಾರ್ಥನೆ, ದೇವರ ದರ್ಶನ, ಸ್ವಾಮೀಜಿ ಆಶೀರ್ವಾದ ಪಡೆಯುತ್ತಿದ್ದಾರೆ.

ಸ್ವಾಮೀಜಿ ಆಶ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ನಾವು ಜೀವಮಾನದಲ್ಲಿ ಮಾಸ್ಕ್ ಧರಿಸಿದವರಲ್ಲ. ಆದರೆ ಕೊರೋನಾದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಇದೆಲ್ಲವೂ ಅನಿವಾರ್ಯವಾಗಿದೆ. ಶುಕವನ, ಬೋನ್ಸಾಯ್ ಗಾರ್ಡನ್ ಕ್ಲೋಸ್ ಮಾಡಿದ್ದೇವೆ. ಮಾಸ್ಕ್ ಧರಿಸಲು ಭಕ್ತರಿಗೆ ಮನವಿ ಮಾಡಿದ್ದೇವೆ. ಬೆಳ್ಳುಳ್ಳಿ ಮತ್ತು ಬಿಳಿ ಈರುಳ್ಳಿ ಬಳಕೆಯಿಂದ ಕೊರೊನಾ ವೈರಸ್ ತಡೆಯಲು ಸಾಧ್ಯ. ಆದ್ದರಿಂದ ಮಠದಿಂದ ಬಿಳಿ ಈರುಳ್ಳಿ ವಿತರಣೆ ಮಾಡುತ್ತಿದ್ದೇವೆ. ಎಲ್ಲರೂ ಸ್ವಲ್ಪ ಕಾಲ ಎಚ್ಚರಿಕೆಯಿಂದ ಇರೋಣ ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.‌

click me!