ಮುಕ್ತ ಸಂಚಾರದ ಬಳಿಕ ಮೈಮುಲ್‌ ನೇಮಕಾತಿ ಪ್ರಕ್ರಿಯೆ ಆರಂಭ

By Kannadaprabha NewsFirst Published May 17, 2020, 2:25 PM IST
Highlights

ಮೈಮುಲ್‌ನಲ್ಲಿರುವ ಖಾಲಿ ಹುದ್ದೆ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿಲ್ಲ. ಮುಕ್ತ ಸಂಚಾರ ವ್ಯವಸ್ಥೆ ಆರಂಭವಾದ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದ್ದಾರೆ.

ಮೈಸೂರು(ಮೇ 17): ಮೈಮುಲ್‌ನಲ್ಲಿರುವ ಖಾಲಿ ಹುದ್ದೆ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿಲ್ಲ. ಮುಕ್ತ ಸಂಚಾರ ವ್ಯವಸ್ಥೆ ಆರಂಭವಾದ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ ಸಾ.ರಾ. ಮಹೇಶ್‌ ಹಾಗೂ ಇತರ ಶಾಸಕರು ವಿಧಾನಸಭೆ ಒಳಗೆ ನೀಡಿರುವ ದೂರಿನ ತನಿಖೆಯೂ ಇಲಾಖಾ ಮಟ್ಟದಲ್ಲಿ ಸಾಗಿದೆ. ಆ ತನಿಖೆಗೂ ನೇಮಕಾತಿ ಪ್ರಕ್ರಿಯೆಗೂ ಸಂಬಂಧವಿಲ್ಲ. ಯಾವ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಮಾಹಿತಿ ಬಂದಿದೆಯೋ ಅವರಿಗೆಲ್ಲಾ ಸಂದರ್ಶನ ನಡೆಸುತ್ತೇವೆ ಎಂದರು.

ಗ್ಲಾಡಿಯೋಸ್‌ ಹೂ ಮಾರಾಟವಾಗದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ಕಸದ ವಿಚಾರವಾಗಿ ಸಂಸದರು ಮತ್ತು ಶಾಸಕರ ಉದ್ದೇಶ ಒಂದೇ ಇದೆ. ಕಸ ವಿಲೇವಾರಿ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಇಬ್ಬರ ಆಶಯದಂತೆ ಮೈಸೂರನ್ನು ಕಸ ಮುಕ್ತ ಮಾಡುತ್ತೇವೆ. ಅವರಿಬ್ಬರಲ್ಲಿ ಯಾವ ಗೊಂದಲ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಸ ಸಮಸ್ಯೆಗೆ ಒಗ್ಗಟ್ಟಿನ ಯತ್ನ- ಪ್ರತಾಪ್‌

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ನೇತೃತ್ವದಲ್ಲಿ ಶಾಸಕ ಎಸ್‌.ಎ. ರಾಮದಾಸ್‌, ತನ್ವೀರ್‌ ಸೇಠ್‌, ನಾಗೇಂದ್ರ, ಜಿ.ಟಿ. ದೇವೇಗೌಡರು ನಾವೆಲ್ಲರು ಕೈ ಜೋಡಿಸಿ ವಿದ್ಯಾರಣ್ಯಪುರಂನ ಎಕ್ಸೆಲ್ ಪ್ಲಾಂಟ್‌ನಲ್ಲಿರುವ ಕಸ ತೆರವು ಮಾಡುತ್ತೇವೆ. ಎಕ್ಸೆಲ್ ಪ್ಲಾಂಟ್‌ನಿಂದ ಬರುತ್ತಿರುವ ದುರ್ವಾಸನೆ ದೂರಮಾಡಿ ಜೊತೆಗೆ ಜನತೆಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶ. ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ನೇತೃತ್ವದಲ್ಲಿ ಕೆಲಸಕ್ಕೆ ಬದ್ಧರಾಗಿರುತ್ತೇವೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

click me!