ನನ್ನ ಬೆಂಬಲಿಗರು, ಹಿತೈಷಿಗಳು ಮುಕ್ತವಾಗಿ ನನ್ನೊಡನೆ ಕಾಂಗ್ರೆಸ್‌ ಸೇರಿ

By Kannadaprabha News  |  First Published Apr 10, 2023, 8:32 AM IST

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲಿರುವ ನನ್ನ ಜೊತೆ ಬೆಂಬಲಿಗರು ಮತ್ತು ಹಿತೈಷಿಗಳು ಮುಕ್ತವಾಗಿ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.


ಕೆ.ಆರ್‌. ನಗರ: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲಿರುವ ನನ್ನ ಜೊತೆ ಬೆಂಬಲಿಗರು ಮತ್ತು ಹಿತೈಷಿಗಳು ಮುಕ್ತವಾಗಿ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಮೇ 10ರಂದು ಸೋಮವಾರ ಬೆಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದರು.

Latest Videos

undefined

ನಾನು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದಾಗ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ ಜನ ವಿರೋಧಿ ಆಡಳಿತದಿಂದ ಬೇಸತ್ತು ಬಿಜೆಪಿಗೆ ಹೋಗಿದ್ದಾಗಿ ಹೇಳಿರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದ ನಂತರ ಅವರು ಬಡವರು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡಿ ಅಭಿವೃದ್ಧಿಯ ಪರ್ವವನ್ನೇ ಹರಿಸುತ್ತಾರೆ ಎಂಬ ಭರವಸೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಸೇರಿದಂತೆ ಇತರರು ಬೆಂಬಲ ನೀಡಿದ್ದೆವು. ಆದರೆ ಅವರು ದುರಾಡಳಿತದಲ್ಲಿ ತೊಡಗಿದ್ದು ಇದನ್ನು ಸಹಿಸದ ನಾನು ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ತೀರ್ಮಾನ ಮಾಡಿದ್ದೇನೆ ಎಂದರು.

ಕ್ಷೇತ್ರದಲ್ಲಿನ ಎಲ್ಲಾ ಜಾತಿ ಜನಾಂಗದ ನನ್ನ ಬೆಂಬಲಿಗರು ಮತ್ತು ಹಿತೈಷಿಗಳು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಬೇಕು. ಈ ವಿಚಾರದಲ್ಲಿ ನಾನು ಯಾರನ್ನು ಬಲವಂತ ಮಾಡುವುದಿಲ್ಲ. ನನ್ನೊಂದಿಗೆ ರಾಜಕೀಯ ಹೆಜ್ಜೆ ಹಾಕಲು ಆಸೆ ಮತ್ತು ಆಸಕ್ತಿ ಇರುವವರು ಬನ್ನಿ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ತಮ್ಮನಾಯಕ, ನರಸಿಂಹರಾಜು, ಸದಸ್ಯ ಕೆ.ಪಿ. ಪ್ರಭುಶಂಕರ್‌, ಮಾಜಿ ಸದಸ್ಯರಾದ ಪೆರಿಸ್ವಾಮಿ, ಕೆ.ಬಿ. ಸುಬ್ರಮಣ್ಯ, ಗುರುಶಂಕರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ನಾಗರಾಜು, ಮಾಜಿ ನಿರ್ದೇಶಕ ಹೆಬ್ಬಾಳು ಶೇಖರ್‌, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷರಾದ ಹಂಪಾಪುರ ಸುಬ್ಬುಕೃಷ್ಣ, ಬಿ.ಎಲ…. ರಾಜಶೇಖರ, ಮುಖಂಡರಾದ ಅಡಗೂರು ನಟರಾಜು, ಜ್ಞಾನಾನಂದ, ಗಂಧನಹಳ್ಳಿ ದೇವರಾಜು, ಎ.ಟಿ. ಶಿವಣ್ಣ, ದೊಡ್ಡಕೊಪ್ಪಲು ರಾಜೇಗೌಡ ಮೊದಲಾದವರು ಇದ್ದರು.

ರಾಜ್ಯ ಉಸ್ತುವಾರಿಯಾಗಿ ಆಗಮಿಸಿದವರು ರಣದೀಪ್‌ ಸಿಂಗ್‌ ಸುರ್ಜೇವಾಲಾ

ರಾಜ್ಯ ಕಾಂಗ್ರೆಸ್‌ ಬಣ ರಾಜಕಾರಣದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಕರ್ನಾಟಕಕ್ಕೆ ರಾಜ್ಯ ಉಸ್ತುವಾರಿಯಾಗಿ ಆಗಮಿಸಿದವರು ರಣದೀಪ್‌ ಸಿಂಗ್‌ ಸುರ್ಜೇವಾಲಾ. ಹರ್ಯಾಣ ಮೂಲದ ಹಿರಿಯ ರಾಜಕಾರಣಿ ರಾಜ್ಯಕ್ಕೆ ಆಗಮಿಸಿದ ಕಾಲಘಟ್ಟದಲ್ಲಿ ಕರ್ನಾಟಕ ಕಾಂಗ್ರೆಸ್‌ ಬಣ ರಾಜಕಾರಣದಲ್ಲಿ ಮುಳುಗಿ ಹೋಗಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣದ ನಡುವೆ ತೀವ್ರ ಪೈಪೋಟಿಯಿತ್ತು. ಈ ಉಭಯ ಬಣಗಳ ವೈರುದ್ಧ್ಯ ನಿರ್ವಹಿಸಿ ಪಕ್ಷದಲ್ಲಿ ಸಾಮರಸ್ಯ ಮೂಡವಂತೆ ನೋಡಿಕೊಳ್ಳುವಲ್ಲಿ ಸುರ್ಜೇವಾಲಾ ಕೊಡುಗೆ ದೊಡ್ಡದು. 

ರಾಷ್ಟ್ರೀಯ ಕಾಂಗ್ರೆಸ್‌ ಪಾಲಿಗೆ ಅತ್ಯಂತ ಪ್ರಮುಖವೆನಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜಗೊಳಿಸುವ ದಿಸೆಯಲ್ಲಿ ರಾಜ್ಯ ನಾಯಕರಿಗೆ ಹೆಗಲು ಕೊಟ್ಟು ದುಡಿದವರು ಸುರ್ಜೇವಾಲಾ. ಚುನಾವಣೆಗೆ ಕೆಲವೇ ದಿನಗಳಿರುವ ಈ ಹಂತದಲ್ಲಿ ಪಕ್ಷದ ಸಂಘಟನೆ, ಚುನಾವಣಾ ಸಿದ್ಧತೆ, ಬಣ ರಾಜಕಾರಣ, ಮುಂದಿನ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರಗಳ ಸ್ಪರ್ಧೆ ಸೇರಿದಂತೆ ಕಾಂಗ್ರೆಸ್‌ಗೆ ಚುನಾವಣಾ ಸಿದ್ಧತೆಯ ಮಹತ್ವದ ಪ್ರಶ್ನೆಗಳಿಗೆ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ರಣದೀಪ್‌ ಸಿಂಗ್‌ ಸುರ್ಜೇವಾಲಾ.

ಇಂದಿನಿಂದ ರಾಜ್ಯದಲ್ಲಿ ಐಟಿ ದಾಳಿಗೆ ಸಿದ್ಧತೆ: ಸುರ್ಜೇವಾಲಾ ಆರೋಪ

* ನಾಯಕತ್ವ ಘೋಷಣೆ ಮಾಡದೆ ಚುನಾವಣೆ ಎದುರಿಸಲು ಮುಂದಾಗಿದ್ದೀರಿ. ಇದು ಎಷ್ಟುಸರಿ?
ನಾವು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಈಗ ನೀವು ಹೇಳಿ ಬಿಜೆಪಿ ಯಾರ ಫೇಸ್‌ ಮುಂದಿಟ್ಟುಕೊಂಡಿದೆ? ನಳಿನ್‌ಕುಮಾರ್‌ ಕಟೀಲ್‌ ಹಾಗೂ ಬಸವರಾಜ ಬೊಮ್ಮಾಯಿ? (ನಗು). ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಬಹಿರಂಗ ಸವಾಲು ಹಾಕುತ್ತೇನೆ. ನಾವು ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ನೇತೃತ್ವ ಘೋಷಿಸಿದಂತೆ ಕಟೀಲ್‌ ಹಾಗೂ ಬೊಮ್ಮಾಯಿ ಹೆಸರು ಘೋಷಿಸಲಿ ನೋಡೋಣ. ಅಕಸ್ಮಾತ್‌ ಘೋಷಿಸಿದರೆ, ಬಿಜೆಪಿಗೆ ರಾಜ್ಯದಲ್ಲಿ 40 ಸೀಟು ಬರುವುದಿಲ್ಲ.

* ಚುನಾವಣೆಯಲ್ಲಿ ಗೆದ್ದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಪೈಕಿ ಯಾರು ಮುಂದಿನ ಸಿಎಂ?
ಅದನ್ನು ನೂತನ ಶಾಸಕರು ಹಾಗೂ ಪಕ್ಷದ ನಾಯಕತ್ವ ಒಗ್ಗೂಡಿ ಸಾಮರಸ್ಯದಿಂದ ತೀರ್ಮಾನ ಮಾಡುತ್ತದೆ. ಕಳೆದ 75 ವರ್ಷಗಳಿಂದ ಕಾಂಗ್ರೆಸ್‌ ಇದನ್ನು ಮಾಡಿಕೊಂಡು ಬಂದಿದೆ. ಈ ಬಾರಿಯೂ ಮಾಡುತ್ತದೆ.

* ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ನಡುವೆ ಸಾಮರಸ್ಯ ಮೂಡಿಸಲು ಅಧಿಕಾರ ಹಂಚಿಕೆಯ ಫಾರ್ಮುಲಾ?
ಅಂತಹ ಯಾವುದೇ ಮ್ಯಾಜಿಕ್‌ ಫಾರ್ಮುಲಾವನ್ನು ನಾವು ಮಾಡಿಲ್ಲ.

click me!