ಸಿಡಿ ಪ್ರಕರಣದ ಯುವತಿಯೊಂದಿಗೆ ಗೆಳೆತನ ಹೊಂದಿದ್ದ ಯುವಕನನ್ನು ಎಸ್‌ಐಟಿ ಕರೆದೊಯ್ದಿದ್ದು ನನ್ನ ಮಗ ಅಮಾಯಕ ಎಂದು ಆತನ ತಾಯಿ ಕಣ್ಣೀರು ಹಾಕಿದ್ದಾರೆ.
ಬೀದರ್ (ಮಾ.15): ನನ್ನ ಮಗ ಅಮಾಯಕ, ಆತನದ್ದೇನೂ ತಪ್ಪಿಲ್ಲ. ಸಿಡಿ ಪ್ರಕರಣದಲ್ಲಿರುವ ಯುವತಿಯೊಂದಿಗೆ ಗೆಳತನ ಹೊಂದಿದ್ದನ್ನಷ್ಟೇ ಮತ್ತೇನಿಲ್ಲ. ಆಕೆಯೇ ಆತನಿಗೆ ಉದ್ಯೋಗ ಕೊಡಿಸಿದ್ದಳು. ವಿಡಿಯೋ ಜಾಹೀರಾತು ಮಾಡಿಕೊಂಡಿದ್ದ ನನ್ನ ಮಗನನ್ನು ಭಾಲ್ಕಿಯಿಂದ ಏಕಾಏಕಿ ಕರೆದೊಯ್ಯಲಾಗಿದೆ. ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ನಾವ್ಯಾರೂ ಅನ್ನ, ನೀರು ಸೇವಿಸಲ್ಲ.
undefined
ಭೇಟಿಯಾದ ಮಾಧ್ಯಮಗಳ ಮುಂದೆ ಹೀಗೆಲ್ಲ ಹೇಳಿ ಕಣ್ಣೀರು ಹಾಕಿದ್ದು, ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿಯಿಂದ ಎಸ್‌ಐಟಿ ತಂಡ ವಿಚಾರಣೆಗೆ ಕರೆದೊಯ್ದಿರುವ ಯುವಕನ ತಾಯಿ ಸಂಪಮ್ಮ.
ಮಾ.11ರಂದು ಸಂಜೆ ಭಾಲ್ಕಿಗೆ ಭೇಟಿ ನೀಡಿದ್ದ ಎಸ್‌ಐಟಿ ತಂಡ ಇಬ್ಬರು ಯುವಕರನ್ನು ವಿಚಾರಣೆಗೆಂದು ಬೆಂಗಳೂರಿಗೆ ಕರೆದೊಯ್ದಿದ್ದರು. ಈ ಪೈಕಿ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ ಯುವಕನ ತಾಯಿ ಸಂಪಮ್ಮ ತನ್ನ ಮಗ ನಿರಪರಾಧಿ ಎಂದು ಅಳಲು ತೋಡಿಕೊಂಡಿದ್ದಾರೆ. ಮಗ ಬೆಂಗಳೂರಿನಲ್ಲಿ ಪಿಜಿ ಮಾಡುತ್ತಿದ್ದಾಗ, ಯುವತಿ ಪರಿಚಯವಾಗಿದ್ದಳು. ಮಗ ನನ್ನೊಂದಿಗೆಯೂ ಆಕೆಯನ್ನು ಸ್ನೇಹಿತೆ ಎಂದು ಮಾತನಾಡಿಸಿದ್ದ. ವಿಡಿಯೋ ಜಾಹೀರಾತುಗಳನ್ನು ಮಾಡುತ್ತಿದ್ದ ಮಗನನ್ನು ಸಾಕಷ್ಟುಶಿಸ್ತಿನಿಂದ ಬೆಳೆಸಿದ್ದೇನೆ. ಅವನಿಗೆ ಯಾವುದೇ ರೀತಿಯ ಕೆಟ್ಟಸಂಪ್ರದಾಯಗಳಿಲ್ಲ. ಯುವತಿಯ ಸಿಡಿ ಪ್ರಕರಣಕ್ಕೂ ಮಗನಿಗೂ ಯಾವುದೇ ಸಂಬಂಧವಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಸೀಡಿ ಯುವತಿ ಕಡೆಗೂ ಪತ್ತೆ: ಪ್ರಿಯತಮ ಕೊಟ್ಟ ಮಾಹಿತಿ ಆಧರಿಸಿ ಆಪರೇಷನ್! ...
ಬೀದರ್‌ನಿಂದ ಇಬ್ಬರಲ್ಲ ಮೂವರ ವಿಚಾರಣೆ : ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಭಾಲ್ಕಿಯಿಂದ ಮಾ.11ರಂದು ಎಸ್‌ಐಟಿ ತಂಡ ವಿಚಾರಣೆಗೆ ಕರೆದೊಯ್ದಿರುವುದು ಇಬ್ಬರಲ್ಲ, ಮೂವರು ಯುವಕರನ್ನು. ಔರಾದ್ ತಾಲೂಕಿನ ಠಾಣಾಕುಶನೂರ ಮೂಲದ ಯುವಕನನ್ನೂ ಎಸ್‌ಐಟಿ ತಂಡು ಕರೆದೊಯ್ದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಠಾಣಾಕುಶನೂರ ಮೂಲದ ಯುವಕ ಕಂಪ್ಯೂಟರ್ ಕೇಂದ್ರದಲ್ಲಿ ಆಪರೇಟರ್ ಆಗಿದ್ದ. ಈತನಿಗೂ ಭಾಲ್ಕಿಯಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿರುವ ಯುವಕನ ನಡುವೆ ಸಾಕಷ್ಟುಬಾರಿ ಮೊಬೈಲ್ ಕರೆಗಳು ದಾಖಲಾಗಿವೆ ಎನ್ನಲಾಗಿದೆ. ರಾಜ್ಯಾದ್ಯಂತ ಸಂಚಲನ ಮೂಡಿಸಿದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಇನ್ನಷ್ಟುಜನ ಈ ಜಾಲದಲ್ಲಿ ಸಂಪರ್ಕಿತರು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಮೊಬೈಲ್ ಕರೆಗಳ ಜಾಡನ್ನು ಜಾಲಾಡುತ್ತಿರುವುದಾಗಿ ತಿಳಿದುಬಂದಿದೆ.