ಸಾವಿರ ರು. ಸಮೀಪಿಸುತ್ತಿದೆ 1 ಕೆಜಿ ಮಟನ್‌ ಬೆಲೆ

By Kannadaprabha NewsFirst Published Mar 16, 2020, 10:18 AM IST
Highlights

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮ ನೆಲಕಚ್ಚಿದ್ದು ಕೋಳಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದೇ ವೇಳೆ ಮಟನ್ ಬೆಲೆ ಮಾತ್ರ ಗಗನಕ್ಕೆ ಏರುತ್ತಿದೆ. 

ಬೆಂಗಳೂರು [ಮಾ.16]:  ಕೊರೋನಾ ವೈರಸ್‌ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಚಿಲ್ಲರೆ ಮಾರುಕಟ್ಟೆವ್ಯಾಪಾರಿಗಳಿಗೆ ವರದಾನವಾಗಿದೆ. ಮಾಲ್‌ಗಳು, ಸೂಪರ್‌ ಮಾರ್ಕೆಟ್‌ ಮುಂತಾದವುಗಳಿಗೆ ಅಂಟಿಕೊಂಡಿದ್ದವರು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಈಗ ಚಿಲ್ಲರೆ ಮಾರುಕಟ್ಟೆಗಳ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡಿದೆ.

ಬೆಂಗಳೂರು ಮಹಾನಗರದಲ್ಲಿ ಬಹುಪಾಲು ಐಟಿ, ಬಿಟಿ ಉದ್ಯೋಗಿಗಳು, ಹೆಚ್ಚು ವೇತನ ಪಡೆಯುವ ಉದ್ಯೋಗಸ್ಥರು, ಮಾಲ್‌ಗಳು, ಸೂಪರ್‌ಮಾರ್ಕೆಟ್‌ ಮುಂತಾದವುಗಳಿಗೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ದಿನನಿತ್ಯ ಬಳಸುವ ಇತರೆ ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬೀಳುತ್ತಿದ್ದರು. ಸಾಮಾನ್ಯ ದಿನಗಳು ಸೇರಿದಂತೆ ವಾರಾಂತ್ಯಗಳಲ್ಲಿ ಮಾಲ್‌ಗಳೆಲ್ಲ ಜನರಿಂದ ತುಂಬಿ ತುಳುಕುತ್ತಿದ್ದವು. ಆದರೆ, ಇದೀಗ ಸರ್ಕಾರದ ಆದೇಶದಂತೆ ಮಾಲ್‌ಗಳು, ಸೂಪರ್‌ಮಾರ್ಕೆಟ್‌ಗಳಿಗೆ ಬೀಗ ಬಿದ್ದಿದೆ. ಇದರಿಂದ ಅನಿವಾರ್ಯವಾಗಿ ಚಿಲ್ಲರೆ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.

ಮಟನ್ ಬೆಲೆ ಏರಿಕೆ

ಹಕ್ಕಿ ಜ್ವರ ಹಾಗೂ ಕೊರೋನಾ ಭೀತಿಯಿಂದ ಕೋಳಿ ಸಾಕಾಣಿಕೆ ಉದ್ಯಮ ನೆಲಕಚ್ಚಿದ್ದರೂ ಕುರಿ, ಮೇಕೆ ವ್ಯಾಪಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬೆಂಗಳೂರಿನಲ್ಲಿ ಕೆ.ಜಿ. ಮಟನ್‌ 600ರಿಂದ 650 ರು. ನಿಗದಿಯಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಒಂದು ಕೆ.ಜಿ. ಕುರಿ ಮಾಂಸ 450 ರು. ಇದ್ದದ್ದು, ಈಗ 550ಕ್ಕೆ ಏರಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದ್ದಲ್ಲಿ ಬೆಲೆಯಲ್ಲಿ ನೂರು ರು. ಏರಿಕೆಯಾಗಿದೆ.

"

ಮೊಟ್ಟೆ, ಮಾಂಸದಿಂದ ಬರುತ್ತಾ ಕೊರೋನಾ ..?...

ಬೇಸಿಗೆಯಲ್ಲಿ ಮೇವಿನ ಕೊರತೆ, ಸಾಗಾಣೆ ವೆಚ್ಚ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಸದ್ಯ ಮಟನ್‌ ಮಾರುಕಟ್ಟೆಗಳು ಬಾಗಿಲು ಮುಚ್ಚಿರುವುದರಿಂದ ಆಯಾ ಜಿಲ್ಲಾ ಕೇಂದ್ರಗಳಲ್ಲೇ ಹೆಚ್ಚು ವ್ಯಾಪಾರವಾಗುತ್ತಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ. ಯುಗಾದಿ ಹಬ್ಬದ ವೇಳೆಗೆ ಕೆ.ಜಿ. ಮಾಂಸ 700ರ ಗಡಿ ದಾಟಬಹುದು ಎಂದು ಕುರಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್‌ ಹೇಳಿದರು.

"

click me!