ಬಸವಣ್ಣ ಬ್ರಾಹ್ಮಣ. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿ ಇರಬೇಕು. ನಮ್ಮನ್ನು ಉದ್ದಾರ ಮಾಡೋಕೂ ಬ್ರಾಹ್ಮಣರ ಬರಬೇಕಾಯ್ತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಿತ್ತು. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ
ಹಾವೇರಿ(ಆ.16): ಹಿಂದೂ ಅಂದರೆ ಸತ್ಯ ಸನಾತನ. ಬೇರೆ ಧರ್ಮಗಳು ಉತ್ಪತ್ತಿ ಆಗೋ ಮುನ್ನ ಇದ್ದದ್ದೇ ಹಿಂದೂ. ಭಾರತದಲ್ಲಿರುವ ಪ್ರತಿಯೊಬ್ಬ ಹಿಂದೂನೇ, ಮುಸ್ಲಿಂರೂ ಹಿಂದೂಗಳೇ, ಅಖಂಡ ಭಾರತ ಇದು. ಮುಸ್ಲಿಂ ಆಚರಣೆಗಳು ಯಾವ ರೀತಿ ಇದಾವೆ?. ಸನಾತನ ಧರ್ಮ ಹಿಂದೂವಿನ ಭಾಗವಾಗಿದೆ. ಆರ್ಯರೂ ಹಿಂದೂ ಭಾಗವೇ, ಹಿಂದೂಗೆ ಬಾರ್ಡರ್ ಇಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದ ಶ್ರೀಗಳು, ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲ ಹಿಂದೂ ಆಗಿದೆ. ಶ್ರೀಲಂಕಾ ಅಫ್ಘಾನಿಸ್ತಾನದ ಎಲ್ಲರೂ ಹಿಂದೂಗಳೇ. ದಯೆಯ ಬಗ್ಗೆಯೇ ಸಾಕ್ರೆಟಿಸ್, ತುಕಾರಾಮ್, ನಾಮದೇವ್, ಶಂಕರರು, ಬಸವಣ್ಣ ಎಲ್ಲರೂ ಇದನ್ನ ಹೇಳಿದರು. ಆಚರಣೆ ಮನೇಲಿ ಇರಬೇಕು. ದೇಶ ಸಮುದಾಯ ಅಂತ ಬಂದಾಗ ನಾವೆಲ್ಲಾ ಹಿಂದೂಗಳು. ಬೇರೆ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಪ್ರಸ್ತಾವನೆ ಮಾಡಲ್ಲ ಎಂದು ಹೇಳಿದ್ದಾರೆ.
ಹಿಂದೂ ಧರ್ಮವೇ ಅಲ್ಲ, ಇದೊಂದು ಆನೈತಿಕ, ಅನಾಚಾರ: ಪಂಡಿತರಾಧ್ಯ ಶ್ರೀ
ಹಿಂದೂ ಅಂದರೆ ಶುದ್ಧವಾದ ಜೀವನ ಪದ್ದತಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಹಾಲು ಕೊಡಿ ಅಂತಾರೆ. ನೀವು ಮಾಡಿಕೊಂಡು ಹೋಗಿ ಬೇಡ ಅಂದವರು ಯಾರು. ಹಾಲು ಕೊಡೋ ತಾಯಿ ಹತ್ಯೆ ಮಾಡ್ತಾ ಇದಾರೆ. ಎಷ್ಟು ಜನ ಸ್ವಾಮಿಗಳು ಗೋ ಹತ್ಯೆ ವಿರೋಧಿಸಿರಿ?. ಅನಾಥ ಮಕ್ಕಳ ಮೇಲೆ ಕರುಣೆ ಇದ್ದರೆ ಹಾಲು ಕೊಡಿ ಎಂದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಕಲ್ಲು ನಾಗರಕ್ಕೆ ಹಾಲೆಯರೆಯುವ ಪದ್ದತಿ ಬದಲು ಅನಾಥ ಮಕ್ಕಳಿಗೆ ಹಾಲು ಕೊಡಿ ಎಂಬ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ವಚನಾನಂದ ಸ್ವಾಮಿಜಿ ಕಿಡಿ ಕಾರಿದ್ದಾರೆ. ಲಿಂಗಾಯತ ಇರಲಿ ವೀರಶೈವ ಇರಲಿ ಒಂದಾಗಿ ಹೋಗಬೇಕು. ಕೆಲವರ ಜಾತಿ ಸರ್ಟಿಪಿಕೇಟ್ ಗಳಲ್ಲಿ ಹಿಂದೂ ಭೌದ್ಧ ಅಂತ ಇದೆ. ಹಿಂದೂ ಜೈನ ಅಂತ ಇದೆ. ಅದೇ ತರ ಹಿಂದೂ ಲಿಂಗಾಯತ, ವೀರಶೈವ ಹಾಗೂ ಲಿಂಗಾಯತರು ಒಂದಾಗಿ ಮೊದಲು. ಒಂದಾಗದೇ ಹೇಗೆ ಪ್ರತ್ಯೇಕ ಧರ್ಮ ಮಾಡಬೇಕು?. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಯಾಕೆ ಸಿಕ್ಕಿಲ್ಲ?. ಕೆಲ ಸ್ವಾಮಿಗಳು ನಾವು ಹಿಂದೂಗಳಲ್ಲ ಅಂತ ಹೇಳ್ತಾರಲ್ಲಾ?. ಹಾಗೆ ಹೇಳುವ ಸ್ವಾಮಿಗಳಿಗೆ ಅವರ ಸರ್ಟಿಫಿಕೇಟ್ ತೋರ್ಸಿ ಅಂತ ಹೇಳಿ ಅಂತ ಹೇಳಿದ್ದಾರೆ.
ಬಸವಣ್ಣ ಬ್ರಾಹ್ಮಣ. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿ ಇರಬೇಕು. ನಮ್ಮನ್ನು ಉದ್ದಾರ ಮಾಡೋಕೂ ಬ್ರಾಹ್ಮಣರ ಬರಬೇಕಾಯ್ತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಿತ್ತು. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.