ಪೊಲೀಸರ ಮೇಲೆ ಮುಸ್ಲಿಮರ ದಾಳಿ ಮುಂದುವರಿಕೆ, ಭಟ್ಕಳದಲ್ಲಿ ಜೀಪು ಪುಡಿ ಪುಡಿ!

Published : Apr 21, 2023, 01:33 PM IST
 ಪೊಲೀಸರ ಮೇಲೆ ಮುಸ್ಲಿಮರ ದಾಳಿ ಮುಂದುವರಿಕೆ, ಭಟ್ಕಳದಲ್ಲಿ ಜೀಪು ಪುಡಿ ಪುಡಿ!

ಸಾರಾಂಶ

ಮುಸ್ಲಿಂ ಯುವತಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪ ಹಿನ್ನೆಲೆ ಗಲಾಟೆ ನಡೆದಿದ್ದು, ಮುಸ್ಲಿಮರು ಪೊಲೀಸ್ ಜೀಪನ್ನು ಅಡ್ಡಗಟ್ಟಿ ಕಲ್ಲಿನಿಂದ ಗ್ಲಾಸ್ ಒಡೆದಿರುವ ಘಟನೆ  ಉತ್ತರಕನ್ನಡದಲ್ಲಿ ನಡೆದಿದೆ.   

ಕಾರವಾರ (ಏ.21): ಕೆ ಜಿ ಹಳ್ಳಿ -ಡಿಜೆ ಹಳ್ಳಿ, ಚಿಕ್ಕಮಗಳೂರು, ಮಂಗಳೂರು ಆಯ್ತು ಇದೀಗ  ಉತ್ತರಕನ್ನಡದಲ್ಲಿ ಮುಸ್ಲಿಮರು ಪೊಲೀಸ್ ಜೀಪನ್ನು ಅಡ್ಡಗಟ್ಟಿ ಕಲ್ಲಿನಿಂದ ಗ್ಲಾಸ್ ಒಡೆದಿರುವ ಘಟನೆ ನಡೆದಿದೆ.  ಮುಸ್ಲಿಂ ಯುವತಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪ ಹಿನ್ನೆಲೆ ಗುರುವಾರ ತಡರಾತ್ರಿ ಉತ್ತರಕನ್ನಡ‌ ಜಿಲ್ಲೆಯ ಭಟ್ಕಳದ ರಂಜಾನ್ ಮಾರ್ಕೆಟ್ ಪ್ರದೇಶದಲ್ಲಿ  ಪೊಲೀಸ್ ಜೀಪನ್ನು ಅಡ್ಡಗಟ್ಟಿ ಕಲ್ಲಿನಿಂದ ದಾಳಿ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಮಂದಿ ಯುವಕರು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಯುವತಿಗೆ ದೌರ್ಜನ್ಯ ಮಾಡಿದ ವಿಚಾರದಲ್ಲಿ ಹದ್ಲೂರು ನಿವಾಸಿ ಚಂದ್ರು ಸೋಮಯ್ಯಗೊಂಡ, ಸರ್ಪನಕಟ್ಟೆಯ ರವೀಂದ್ರ ಶಂಕರ ನಾಯ್ಕ, ವೆಂಕಟೇಶ್ ನಾಯ್ಕ ಗೊರಟೆ, ಸುಲ್ತಾನ್ ಸ್ಟ್ರೀಟ್ ಮೊಹಮ್ಮದ್ ಮೀರಾ, ಮೊಹ್ಮದ್ ಇಮ್ರಾನ್ ಶೇಖ್, ಸದ್ದಾಂ ಹಾಗೂ ಇತರರ ನಡುವೆ ಗಲಾಟೆ ನಡೆದಿತ್ತು.

ಮದುವೆ ಮನೆಯಲ್ಲಿ ಆಸಿಡ್‌ ದಾಳಿ, ವಧು-ವರರ ಮುಖ ಮಟಾಷ್‌!

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ರಂಪಾಟ ಮಾಡಿದ್ದರು. ಇದನ್ನು ಕಂಡು ಆರೋಪಿಗಳಾದ ಚಂದ್ರ ಹಾಗೂ ಮೊಹಮ್ಮದ್ ಮೀರಾನನ್ನು ಪೊಲೀಸರು ವಾಹನಕ್ಕೆ ಹತ್ತಿಸಿದ್ದರು. ಈ ವೇಳೆ ಪೊಲೀಸ್ ವಾಹನವನ್ನು ಅಡ್ಡಗಟ್ಟಿದ ಇತರ ಆರೋಪಿಗಳು ಕಲ್ಲಿನಿಂದ ವಾಹನದ ಗಾಜು ಒಡೆದು  ಹಾಕಿ ಗಲಾಟೆ ಮಾಡಿದ್ದಾರೆ.

ಆಗ ತಾನೆ ಹುಟ್ಟಿದ ಶಿಶುವನ್ನು ಬಾತ್‌ರೂಮ್‌ ಕಿಟಕಿಯಿಂದ ಎಸೆದು ಸಾಯಿಸಿದ ಮಹಿಳೆ!

ಆರೋಪಿ ಮೊಹಮ್ಮದ್ ಮೀರಾ ಎಂಬಾತ ಪೊಲೀಸ್ ಸಿಬ್ಬಂದಿ ಗೌತಮ್ ಎಂಬವರ ಬೆರಳು ಮುರಿದು ಹಾಕಿದ್ದಾನೆ. ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯುವತಿ ಮನೆಯವರು ಯಾವುದೇ ದೂರು ನೀಡಿಲ್ಲ. ಆದರೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ  ಹಾಗೂ ವಾಹನದ ಗಾಜು ಒಡೆದು ಹಾಕಿದ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

PREV
Read more Articles on
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!