ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ. ಬಾಂಗ್ಲಾ ದೇಶದಿಂದ ಬಂದ ಹಿಂದುಗಳು ಎಲ್ಲಿಗೆ ಹೋಗಬೇಕು. ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ , ಅನಾಥರಾಗಿ ಬಿಡಲು ಸಾಧ್ಯವೇ? ಎಂದು ಪೇಜಾವರ ಶ್ರೀ ಪ್ರಶ್ನಿಸಿದ್ದಾರೆ.
ಉಡುಪಿ(ಡಿ.12): ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಪೇಜಾವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ. ಬಾಂಗ್ಲಾ ದೇಶದಿಂದ ಬಂದ ಹಿಂದುಗಳು ಎಲ್ಲಿಗೆ ಹೋಗಬೇಕು. ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ , ಅನಾಥರಾಗಿ ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಮುಸಲ್ಮಾನರಿಗಾದ್ರೆ ಸಾಕಷ್ಟು ಅವಕಾಶ ಇದೆ. ಮಾನವೀಯ ದೃಷ್ಟಿಯಿಂದ ಈ ವಿಚಾರವನ್ನು ನೋಡಿ. ಇದರಿಂದ ಹಿಂದೂಗಳಿಗೂ ನೋವಿಲ್ಲ, ಮುಸಲ್ಮಾನರಿಗೂ ನೋವಿಲ್ಲ. ನಮ್ಮ ದೇಶದಲ್ಲಿರುವ ಮುಸಲ್ಮಾನರಿಗೆ ಏನೂ ಅನ್ಯಾಯ ಆಗಲ್ಲ. ಬೇರೆ ದೇಶದ ಮುಸಲ್ಮಾನರಿಗೂ ತೊಂದ್ರೆ ಆಗಲ್ಲ, ಅವರಿಗೆ ಬೇರೆ ದೇಶ ಇದೆಯಲ್ಲಾ. ನಿರಾಶ್ರಿತ ಹಿಂದೂಗಳಿಗೆ ಸ್ಥಳ ದೊರೆತಂತಾಗುತ್ತೆ ಎಂದಿದ್ದಾರೆ.
undefined
CAB: ಕೇಂದ್ರ ಸಚಿವರ ಮನೆ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು!
ಇಲ್ಲಿನ ನಿರಾಶ್ರಿತರು ಅವರ ರಾಷ್ಡ್ರಗಳಿಗೆ ಹೋಗಬಹುದು. ನಿರಾಶ್ರಿತ ಮುಸ್ಲಿಂಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಪಾಕಿಸ್ಥಾನ ಇದೆ. ಹಿಂದೂಗಳಿಗೆ ಮತ್ತೆಲ್ಲಿದೆ ಅವಕಾಶ, ಮಾನವೀಯವಾಗಿ ಯೋಚಿಸಿ ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಕುಷ್ಟಗಿ: ಬರದ ನಾಡಲ್ಲೂ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ ಕೊಳೆವೆ ಬಾವಿ ನೀರು
ಡಿಸೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: