ಸರ್ಕಾರದ ಪರಿಹಾರ ನಿರಾಕರಿಸಲು ಮುಸ್ಲಿಂ ಒಕ್ಕೂಟ ಕರೆ

By Kannadaprabha NewsFirst Published Dec 26, 2019, 8:57 AM IST
Highlights

ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬವು ಪರಿಹಾರವನ್ನು ನಿರಾಕರಿಸಬೇಕು ಎಂದು ಮುಸ್ಲಿಂ ಒಕ್ಕೂಟಗಳು ಕರೆ ನೀಡಿವೆ. 

ಮಂಗಳೂರು [ಡಿ.26]: ಮಂಗಳೂರು ಗಲಭೆಯ ಗೋಲಿಬಾರ್‌ ಪ್ರಕರಣದ ಮೃತರ ಕುಟುಂಬಿಕರು ಹಾಗೂ ಗಾಯಾಳು ಸಂತ್ರಸ್ತರು ಕೋಮು ಮನಸ್ಥಿತಿಯ ಆಡಳಿತದ ಯಾವುದೇ ಪರಿಹಾರವನ್ನು ಸಂಪೂರ್ಣವಾಗಿ ನಿರಾಕರಿಸಬೇಕಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಂಗಳೂರಿನ ಮಾಜಿ ಮೇಯರ್‌ ಕೆ.ಅಶ್ರಫ್‌ ಕರೆ ನೀಡಿದ್ದಾರೆ.

ಮಂಗಳೂರು ಗೋಲಿಬಾರ್‌ನಲ್ಲಿ ಮೃತರ ಕುಟುಂಬಕ್ಕೆ ಹಾಗೂ ಆಸ್ಪತ್ರೆಯಲ್ಲಿ ಗಂಭೀರ ಗಾಯಾಳುಗಳಾಗಿರುವ ರೋಗಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಹಾರ ನಿರಾಕರಣೆ ಹೇಳಿಕೆ ನೀಡಿರುವುದು ತೀವ್ರ ವಿಷಾದನೀಯ ಎಂದಿರುವ ಅವರು, ಮತೀಯ ಆಧಾರದಲ್ಲಿ ಸಂತ್ರಸ್ತರನ್ನು ವಿಭಜಿಸಿ ಹೇಳಿಕೆ ನೀಡುವ ಮನಸ್ಥಿತಿ ದುರಂತಮಯ. 

ಮಂಗ್ಳೂರು ಗಲಭೆ ಸಂಭವಿಸುವ ಬಗ್ಗೆ ಇತ್ತು ಗುಪ್ತ ಎಚ್ಚರಿಕೆ!...

ಆದ್ದರಿಂದ ಜಾತ್ಯತೀತ ಚಿಂತನೆ, ಉದಾರದಾನಿಗಳು, ಪ್ರಗತಿಪರ ಚಿಂತಕರು ನೀಡುವ ಎಷ್ಟೇ ಕಿರು ಮೊತ್ತದ ಪರಿಹಾರವನ್ನಾದರೂ ಸಂತ್ರಸ್ತರು ಹಾಗೂ ಗಾಯಾಳುಗಳು ಸ್ವೀಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದಾರೆ.

click me!