Ballari: ಧರ್ಮ ಸಂಘರ್ಷದ ನಡುವೆ ಮತ್ತೊಬ್ಬರಿಗೆ ಮಾದರಿಯಾದ ಹಿಂದೂ-ಮುಸ್ಲಿಂ ಗೆಳೆತನ

By Govindaraj S  |  First Published Apr 10, 2022, 12:06 PM IST

ಸದ್ಯ ರಾಜ್ಯಾದ್ಯಂತ ಹಿಂದೂ-ಮುಸ್ಲಿಂ ಭಾಂಧವರ ಮಧ್ಯೆ ಧಾರ್ಮಿಕ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ವ್ಯಾಪಾರ ವಹಿವಾಟಷ್ಟೇ ಅಲ್ಲ ಕನಿಷ್ಠ ಒಬ್ಬರು ಮತ್ತೊಬ್ಬರನ್ನು ಮಾತನಾಡದೇ ಇರುವಷ್ಟು ಕಂದಕ‌ ನಿರ್ಮಾಣವಾಗಿದೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಏ.10): ಸದ್ಯ ರಾಜ್ಯಾದ್ಯಂತ ಹಿಂದೂ-ಮುಸ್ಲಿಂ (Hindu-Muslim) ಭಾಂಧವರ ಮಧ್ಯೆ ಧಾರ್ಮಿಕ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ವ್ಯಾಪಾರ ವಹಿವಾಟಷ್ಟೇ ಅಲ್ಲ ಕನಿಷ್ಠ ಒಬ್ಬರು ಮತ್ತೊಬ್ಬರನ್ನು ಮಾತನಾಡದೇ ಇರುವಷ್ಟು ಕಂದಕ‌ ನಿರ್ಮಾಣವಾಗಿದೆ. ಆದರೆ ಧರ್ಮಕ್ಕಿಂದ ಮಾನವೀಯತೆ ದೊಡ್ಡದು ಎನ್ನುವ ಸಂದೇಶ ಸಾರುತ್ತಿದ್ದಾರೆ ಇಲ್ಲಿಯ ಈ ಸ್ನೇಹಿತರು (Friends). ಹೌದು! ನಿಗೂಢ ಕಾಯಿಲೆಯಿಂದ ಬಳಲುತ್ತಿರುವ ಹಿಂದೂ ಸ್ನೇಹಿತನಿಗೆ ಚಿಕಿತ್ಸೆ (Treatment) ಕೊಡಿಸಲು ಅಲೆದಾಡುತ್ತಿದ್ದಾನೆ‌ ಮುಸ್ಲಿಂ ಈ ಸ್ನೇಹಿತ.

Tap to resize

Latest Videos

undefined

ನಿಗೂಢ ಖಾಯಿಲೆಯಿಂದ ಬಳಲುತ್ತಿರೋ ಸ್ನೇಹಿತನಿಗಾಗಿ ಹೋರಾಟ: ಇಡೀ ರಾಜ್ಯಾದ್ಯಂತ ಇತ್ತೀಚಿನ‌ ದಿನಗಳಲ್ಲಿ ಹಿಂದೂ ಮುಸ್ಲಿಂ ಸ್ನೇಹ ಸಂಬಂಧಕ್ಕೆ ಧಕ್ಕೆತರುವ ಘಟನೆಗಳೇ ಹೆಚ್ಚೆಚ್ಚು ನಡೆಯುತ್ತಿರುವ ಹೊತ್ತಿನಲ್ಲಿ ಈ ಇಬ್ಬರು ಧರ್ಮಕ್ಕಿಂತ ಮಾನವೀಯತೆಯೇ ಮುಖ್ಯ ಅನ್ನೋದನ್ನ ತೋರಿಸುತ್ತಿದ್ದಾರೆ. ಕಾಲಿನ ಮೇಲೆ ದೊಡ್ಡ ಗಾತ್ರದ ಗಂಟು ಕಟ್ಟಿಕೊಂಡು ಇರೋ ನಿಗೂಢ ಕಾಯಿಲೆಯಿಂದ ಬಳಲುತ್ತಿರುವ ಈ ವ್ಯಕ್ತಿಯ ಹೆಸರು ಗೋಪಾಲ. ಮೂಲತಃ ಬಳ್ಳಾರಿಯ ಕೌಲ್ ಬಜಾರ್ ನಿವಾಸಿ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದು ಕೊಂಡ ಅನಾಥನಾಗಿದ್ದಾನೆ. 

Ballari: ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ಧೆ

ಅಲ್ಲದೇ ಕಳೆದ ಕೆಲ ವರ್ಷಗಳಿಂದ ವಿಚಿತ್ರವಾದ ಕಾಯಿಲೆಯಿಂದ ಬಳ್ಳಲುತ್ತಿದ್ದಾನೆ. ಈ ಮೊದಲು ಮೊದಲು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಆದರೆ ವಿಚಿತ್ರವಾದ ಖಾಯಿಲೆಗೆ ತುತ್ತಾದ ಬಳಿಕ ದುಡಿಮೆ ಕಷ್ಟವಾಗಿದೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗಿರುವಾಗ ನಿಗೂಢ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಗೋಪಾಲನ ದಯಾನೀಯ ಸ್ಥಿತಿಗೆ ಗೆಳೆಯ ಮಹಮ್ಮದ್ ಕಷ್ಟಕ್ಕೆ ಹೆಗಲು ಕೊಡಲು ಮುಂದಾಗಿದ್ದು, ಏನೇ ಆಗಲಿ ಚಿಕಿತ್ಸೆ ಕೊಟ್ಟೇ ಕೊಡಿಸುವೆ ಎಂದು ಸಹಾಯಕ್ಕಾಗಿ ಅಲೆದಾಡುತ್ತಿದ್ದಾನೆ. ಅಲ್ಲದೇ ಕಳೆದ ಎರಡು ವರ್ಷಗಳಿಂದ ಗೋಪಾಲನಿಗೆ ಊಟ ಉಪಚಾರವನ್ನು ಮೊಹಮ್ಮದ್ ನೋಡಿಕೊಳ್ಳುತ್ತಿದ್ದಾನೆ.

ಎಷ್ಟು ಕಡೆ ಚಿಕಿತ್ಸೆ ಕೊಡಿಸಿದ್ರೂ ಪ್ರಯೋಜನವಾಗ್ತಿಲ್ಲ: ಇನ್ನೂ ಗೋಪಾಲ ಇದಕ್ಕೂ ಮೊದಲು ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಆದರೆ ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಗೋಪಾಲನ ಬಲಗಾಲು ದಿನ ಕಳೆದಂತೆ ದಪ್ಪವಾಗುತ್ತಿದೆ. ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಬಂದಿದೆ. ಹೀಗಾಗಿ ಅನೇಕ ವೈದ್ಯರ ಬಳಿ ಚಿಕಿತ್ಸೆಗಾಗಿ ಅಲೆದಿದ್ದಾರೆ. ಆದರೆ ಚಿಕಿತ್ಸೆಗಾಗಿ ಲಕ್ಷಾಂತರ ಹಣ ಖರ್ಚು ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಯಾರಾದ್ರೂ ಚಿಕಿತ್ಸೆಗೆ ದಯಮಾಡಿ ಸಹಾಯ ಮಾಡಿ ಅಂತಾ ಅಂಗಲಾಚುತ್ತಿದ್ದಾರೆ. ಆದರೆ ಎಲ್ಲಿಯೂ ಸಹಾಯ ಸಿಗದ ಹಿನ್ನೆಲೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ಪಡೆಯುತ್ತಿದ್ದಾನೆ.

Ballari: ಹಿಜಾಬ್, ಹಲಾಲ್‌ ಆಯ್ತು ಇದೀಗ ಮತ್ತೊಂದು ವಿವಾದ ಶುರು: ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದ

ಮಾದರಿ ಗೆಳೆಯರು: ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸ್ನೇಹದ ಮಧ್ಯೆ ದೊಡ್ಡ ಕಂದಕವೇ ಸೃಷ್ಠಿಯಾಗುತ್ತಿರುವ ಈ ಹೊತ್ತಿನಲ್ಲಿ ಗೋಪಾಲ ಹಾಗೂ ಮೊಹಮ್ಮದ್ ಸ್ನೇಹ ಮಾನವೀಯತೆಯ ಸಂದೇಶ ಸಾರಿದೆ. ಯಾರಾದರೂ ಮುಂದೆ ಬಂದು ಕಷ್ಟದಲ್ಲಿರುವ ಈ ಅಪರೂಪದ ಸ್ನೇಹಿತರಿಗೆ ಸಹಾಯ ಮಾಡಲಿ ಎನ್ನುವುದೇ ನಮ್ಮ ಆಶಯ.

click me!