ರಾತ್ರಿ ವೇಳೆಯಲ್ಲಿ ಜಮೀನಿಗೆ ಬಂದು ರೈತರು ಬೆಳೆದ ಬೆಳೆಗಳನ್ನು ತಿನ್ನುತ್ತಿದ್ದ ಪುಂಡಾನೆಯನ್ನು ಸಕ್ರೆಬೈಲು ಮತ್ತು ನಾಗರಹೊಳೆಯಿಂದ ಆಗಮಿಸಿದ ಐದು ಆನೆಗಳ ಸಹಾಯದಿಂದ ಕಾಫಿನಾಡಿನಲ್ಲಿ ಸೆರೆಹಿಡಿಯಲಾಗಿದೆ.
ವರದಿ: ಆಲ್ದೂರು ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.10): ರಾತ್ರಿ ವೇಳೆಯಲ್ಲಿ ಜಮೀನಿಗೆ ಬಂದು ರೈತರು (Farmers) ಬೆಳೆದ ಬೆಳೆಗಳನ್ನು ತಿನ್ನುತ್ತಿದ್ದ ಪುಂಡಾನೆಯನ್ನು (Elephant) ಸಕ್ರೆಬೈಲು ಮತ್ತು ನಾಗರಹೊಳೆಯಿಂದ ಆಗಮಿಸಿದ ಐದು ಆನೆಗಳ ಸಹಾಯದಿಂದ ಕಾಫಿನಾಡಿನಲ್ಲಿ (Chikkamagaluru) ಸೆರೆಹಿಡಿಯಲಾಗಿದೆ.
undefined
ದಸರಾ ಆನೆಗಳ ಸಹಾಯದಿಂದ ಕಾಡಾನೆ ಸೆರೆ: ಈ ಪುಂಡ ಕಾಡಾನೆಯಿಂದ ಇಡೀ ಗ್ರಾಮಸ್ಥರು, ರೈತರಲ್ಲಿ ಹೆಚ್ಚಿನ ಆತಂಕ ಮನೆ ಮಾಡಿತ್ತು. ವಯಸ್ಸು ಕೇವಲ 10-12 ವರ್ಷ. ಮೈಸೂರು ಅಂಬಾರಿ ಹೋರುವ ಅರ್ಜುನ ಹಾಗೂ ಭೀಮನಿಗೆ ಆಗಿರುವ ಅನುಭವದ ವಯಸ್ಸು ಆ ಪುಂಡಾನೆಗೆ ಆಗಿಲ್ಲ. ಆದರೆ ಆ ಪುಂಡನ ಅರ್ಜುನ-ಭೀಮಾರೇ ಮಂಡಿಯೂರಿದರು. ಇಬ್ಬರ ಕೈನಲ್ಲೂ ಆ ಕಂದನನ್ನ ಹಿಡಿಯಲು ಆಗ್ಲಿಲ್ಲ. ಬಂದು ಅವರ ಜೊತೆಯೇ ಆಟವಾಡಿ ಎದ್ದು ಹೋಗಿದ್ದ ಆ ಪುಂಡ. ಊರಲ್ಲಿ ಮನಸೋ ಇಚ್ಛೆ ದಾಳಿ ಮಾಡ್ತಿದ್ದ ಅವನನ್ನ ಸೆರೆ ಹಿಡಿಯೋದು ಅನಿವಾರ್ಯವಾಗಿತ್ತು, ಮತ್ತೆ ಮೂರು ಆನೆ ಬರ್ಬೇಕಾಯ್ತು. ಕಾಫಿನಾಡಲ್ಲಿ 10-12 ವರ್ಷದ ಒಂದು ಮರಿ ಹಿಡಿಯಲು ಘಟಾನುಘಟಿ ಆನೆಗಳೇ ಬರಬೇಕಾಯ್ತು.
Chikkamagaluru: ಕಾಫಿನಾಡಲ್ಲಿ ಅರಳಿನಿಂತ ಅಪರೂಪದ ಆಲ್ಮಂಡ ಕ್ಯಾಥರಿಟಿಕಾ ಹೂವು
ಪುಂಡನ ಭಂಡತನದ ಕಥೆ: ಈ ಭಂಡ ಕಾಡಾನೆ, ಕಳೆದು ಎರಡ್ಮೂರು ತಿಂಗಳಿಂದ ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ-ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಐನಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಸಿಕ್ಕಾಪಟ್ಟೆ ರೋದ್ನೆ ಕೊಟ್ಟಿದ್ದ. ಎಷ್ಟರ ಮಟ್ಟಿಗೆ ಅಂದ್ರೆ ರೈತ್ರು ಕಣ್ಮುಚ್ಚಿ ನಿದ್ದೆ ಮಾಡಂಗಿಲ್ಲ. ಹೊಲಗದ್ದೆಗಳಿಗೆ ಹೋಗಂಗಿಲ್ಲ. ಸ್ಥಳಿಯರು-ಅರಣ್ಯ ಇಲಾಖೆ ಎಷ್ಟೆ ಹರಸಾಹಸಪಟ್ರು ಒಂದ್ ದಿನ ಕಣ್ಮರೆಯಾಗೋದು ಮರುದಿನ ಅದೇ ಜಾಗ. ರೈತರ ಜೊತೆ ಅಧಿಕಾರಿಗಳು ರೋಸಿ ಹೋಗಿದ್ರು.
ಅದಕ್ಕಾಗಿ ಅಧಿಕಾರಿಗಳು ಈ ನನ್ಮಗನಿಂದು ಗತಿ ಕಾಣಿಸ್ಬೇಕು ಅಂತ ನಾಗರಹೊಳೆಯಿಂದ ಮೈಸೂರು ಅಂಬಾರಿ ಹೊರುವ ಭೀಮಾ-ಅರ್ಜುನನನ್ನ ಕರೆಸಿದ್ರು. ಆದ್ರೆ, ನೋ ಯೂಸ್. ಕಾಡಿನ ಪುಂಡನ ಎದುರು ಭೀಮಾ-ಅರ್ಜುನ ಆಟ ನಡೆಯಲಿಲ್ಲ. ಲಾರಿ ಇಳಿದ ಇಬ್ಬರು ಮಾವುತ-ಅಧಿಕಾರಿಗಳ ಜೊತೆ ಕಾಡಿಗೆ ಲಗ್ಗೆ ಇಟ್ಟಿದ್ರು. ಆದ್ರೆ, ಆ ಪುಂಡ ಕಾಡಾನೆ ಬಂದು ಭೀಮಾ-ಅರ್ಜುನರ ಜೊತೆಯೇ ಒಂದು ರಾತ್ರಿ ಕಳೆದು ಹೋಗಿದೆ. ಹಾಗಾಗಿ, ಅರಣ್ಯ ಅಧಿಕಾರಿಗಳು ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಪಾಲು, ಭಾನುಮತಿಯೆಂಬ ಮತ್ತೆ ಮೂರು ಆನೆ ಕರೆಸಿ ಈ ಪುಂಡನಿಗೊಂದು ಅಂತ್ಯಹಾಡಿದ್ದಾರೆ.
ಸಕ್ರೆಬೈಲ್ ಆನೆ ಶಿಬಿರದಿಂದ ಬಂದ ಆನೆ ಕಾರ್ಯಚರಣೆ ಯಶ್ವಸಿ: ಪುಂಡಾನೆಯನ್ನ ಮಟ್ಟ ಹಾಕಲು ಮೊದಲು ಅಖಾಡಕ್ಕೀಳಿದಿದ್ದ ಅಂಬಾರಿ ಸ್ಪೆಷಲಿಸ್ಟ್ ಭೀಮಾ-ಅರ್ಜುನರ ಕೈನಲ್ಲಿ ಆಗ್ಲಿಲ್ಲ. ಶತಾಯಗತಾಯ ಹೋರಾಡಿದ್ರು ಕಾಡಾನೆ ಎದುರು ಸಾಕಾನೆಗಳ ಆಟ ನಡೆಯಲಿಲ್ಲ. ಕಾಡಿನಾದ್ಯಂತ ಹುಡುಕಾಟ ನಡೆಸ್ತಿದ್ದ ದಸರಾ ಆನೆಗಳಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಒಂಟಿ ಸಲಗ ರಾತ್ರಿ ಬಂದು ಈ ದಸರಾ ಆನೆಗಳ ಜೊತೆಯೇ ಊಟ ಮಾಡ್ಕೊಂಡು, ಮಲಗಿ ಫ್ರೆಂಡ್ ಶಿಪ್ ಮಾಡ್ಕೊಂಡ್, ನಿಮ್ಗೆ ವಯಸ್ಸಾದ ಮೇಲೆ ನಾನೇ ಅಂಬಾರಿ ಹೊರ್ತೀನಿ ಎಂದು ಹೇಳಿ ಹೋಗಿತ್ತು. ಇವುಗಳ ಸ್ನೇಹವನ್ನ ನೋಡಿ ಅರಣ್ಯ ಅಧಿಕಾರಿಗಳೇ ಶಾಕ್ ಆಗಿದ್ರು. ಹಾಗಾಗಿ, ಮತ್ತೆ ಸಕ್ರೆಬೈಲ್ ಆನೆ ಶಿಬಿರದಿಂದ ಮೂವರನ್ನ ಬರಮಾಡಿಕೊಂಡಿದ್ರು.
Karnataka Politics: ಅಲ್ ಖೈದಾ ಮತ್ತು ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್: ಸಿ.ಟಿ.ರವಿ
ಒಂದು ವಾರಗಳ ಕಾಲ ನಡೆದ ಈ ಕಣ್ಣಾಮುಚ್ಚಾಲೆ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ರೈತರಿಗೆ ರ್ವೋತೆ ಕೊಟ್ಟಿದ್ದ ಕಾಡಾನೆ ಸೆರೆಯಾಗಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.ಒಟ್ಟಾರೆ, ಕಾಡಾನೆ ಸೆರೆಯಾಗಿರೋದ್ರಿಂದ ಹಂಪಾಪುರ, ಬೀಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೊಂದು ವರ್ಷದಿಂದ ಬೆಳೆಗಳನ್ನ ಉಳಿಸಿಕೊಳ್ಳಲು ಹರಸಾಹಸಪಡ್ತಿದ್ದ ರೈತರು ಇನ್ನಾದ್ರು ನೆಮ್ಮದಿಯಾಗಿ ಕೃಷಿ ಮಾಡಬಹುದು ಅಂತ ಸಂತಸಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ದಸರಾ ಆನೆಗಳಿಗೂ ಚಳ್ಳೆಹಣ್ಣು ತಿನ್ನಿಸಿದ ಪುಂಡಾನೆ ಸಾಕಾನೆಗಳ ಸಂಘಟಿತ ಹೋರಾಟದಿಂದ ಸೆರೆಯಾಗಿದೆ. ಕಾಡಾನೆ ಕಾಫಿನಾಡ ಅರಣ್ಯದಿಂದ ಬಂಡೀಪುರ ಕಾಡಿನತ್ತ ಹೆಜ್ಜೆ ಹಾಕ್ತಿದ್ರೆ, ರೈತರು ನೆಮ್ಮದಿಯಾಗಿ ಹೊಲಗದ್ದೆ-ತೋಟಗಳತ್ತ ಹೆಜ್ಜೆ ಹಾಕಿದ್ದಾರೆ.